ರಾಜ್ಯದಲ್ಲಿ ಮತ್ತೆ ಹೊಸ ಐದು ಓಮಿಕ್ರಾನ್ ಪತ್ತೆ

ಡಾ.ಕೆ. ಸುಧಾಕರ್
ಉಮೇಶ ಗೌರಿ (ಯರಡಾಲ)

ರಾಜ್ಯದಲ್ಲಿ ಹೊಸದಾಗಿ ಮತ್ತೆ ಐದು ಓಮಿಕ್ರಾನ್ ಪತ್ರೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಕೂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಡಿ.19ರಂದು ಈ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

 ಧಾರವಾಡದಲ್ಲಿ 54 ವರ್ಷದ ಪುರುಷ, ಭದ್ರಾವತಿಯಲ್ಲಿ 20 ವರ್ಷದ ಯುವತಿ, ಉಡುಪಿಯಲ್ಲಿ 82 ವರ್ಷದ ಪುರುಷ ಮತ್ತು 72 ವರ್ಷದ ಮಹಿಳೆ ಹಾಗೂ ಮಂಗಳೂರಿನಲ್ಲಿ 19 ವರ್ಷದ ಯುವತಿಗೆ ಓಮಿಕ್ರಾನ್ ತಗುಲಿದೆ ಎಂಬ ಮಾಹಿತಿಯನ್ನು ಸಚಿವರು ಕೂ ಮಾಡಿದ್ದಾರೆ.

Share This Article
";