ಬೆಂಗಳೂರು: 2022ರ ಕೇಂದ್ರ ಬಜೆಟ್ ಅಧಿವೇಶನ ಸೋಮವಾರ ಶುರುವಾಗಿದ್ದು, ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ನೆಟ್ಟಿಗರು ಬಜೆಟ್ ನಿರೀಕ್ಷೆಯ ಕುರಿತು ಚರ್ಚೆ ಶುರುಮಾಡಿದ್ದಾರೆ.
ಈ ಭಾರಿಯ ಬಜೆಟ್ ಕುರಿತು ಎಲ್ಲರು ತಮ್ಮ ತಮ್ಮ ಅಭಿಪ್ರಾಯ ಹಾಗು ನಿರೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಬಜೆಟ್ ಪೆಟ್ಟಿಗೆಯಿಂದ ಏನೇನು ಸವಲತ್ತುಗಳು ಬರುವುದೋ ಕಾದು ನೋಡಬೇಕು . ಪ್ರಮುಖವಾಗಿ ಪೆಟ್ರೋಲ್ ,ಡೀಸೆಲ್, ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ವಿನಾಯಿತಿ ಸಿಗಬಹುದೇ ಹಾಗೆಯೇ ಗ್ಯಾಸ್ ಬಳಕೆದಾರರ ಸಬ್ಸಿಡಿ ಮತ್ತೆ ಜಾರಿಗೆ ಬರುವುದೇ ಎಂಬ ನಿರೀಕ್ಷೆ ಇದೆ. ಅಂತೆಯೆ ಅಗತ್ಯ ವಸ್ತುಗಳು ,ದಿನಸಿ ಪದಾರ್ಥಗಳ ಬೆಲೆಯೂ ಗಗನಕ್ಕೇರಿವುದರಿಂದ ಬೆಲೆ ಇಳಿಕೆಯ ನಿರೀಕ್ಷೆ ಇದೆ.ಈ ಬಾರಿ ಸಾಮಾನ್ಯ ಜನಸ್ನೇಹಿ ಬಜೆಟ್ ಆಗಿರಲಿ ಎಂದು ಸಾರ್ವಜನಿಕರ ಆಶಯವಾಗಿದೆ.
‘ಇಂದು ಆರಂಭ ಆಗುತ್ತಿರುವ ರಾಜ್ಯ ಸಂಸತ್ ಬಜೆಟ್ ಅಧಿವೇಶನದಲ್ಲಿ ರಾಜ್ಯದ ರೈತರಿಗೆ ಏನಾದರೂ ಅನುಕೂಲತೆಗಳು ಸಿಗುವಂತಾಗಬೇಕು , ಏಕೆಂದರೆ ರೈತ ಎಲ್ಲಕಿಂತ ದುಃಖಿಯಾಗಿದ್ದಾನೆ , ಅತೀ ವೃಷ್ಠಿಯಿಂದ ಅವನು ಕಂಗಾಲಾಗಿದ್ದಾನೆ ,ಅವನ ದುಃಖ ಕೇಳುವವರ್ಯಾರು ಇಲ್ಲ , ಮೊದಲೇ ಕೊರೊನ ಕಾಲ , ಅಂಥದ್ದರಲ್ಲಿ ರಾಜ್ಯ ಸರ್ಕಾರ ರೈತರಿಗೆ ಸಂತೋಷವಾಗುವ ಸುದ್ದಿ ನೀಡಿದರೆ ಅವರು ನೆಮ್ಮದಿಯ ಉಸಿರು ಬಿಡಬಹುದು , ಕಾದು ನೋಡೋಣ , ಇಂತಹ ಸಂಕಷ್ಟದ ಸಮಯದಲ್ಲಿ ಬಜೆಟ್ ಮಂಡನೆ ಕಷ್ಟನೇ’ ಎಂದು ಮಲ್ಲಿಕಾರ್ಜುನ್ ಪಾಟೀಲ್ ಹೇಳಿದ್ದಾರೆ.