ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಪ್ರವಾಸೋಧ್ಯಮ ಇಲಾಖೆ ಇವರ ಸಹಯೋಗದಲ್ಲಿ ಕೋವಿಡ್-19 ನಿಯಮಗಳನ್ನು ಪಾಲಿಸುತ್ತಾ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ವೆಬಿನಾರಿನ ವ್ಯವಸ್ಥೆಯನ್ನು ಮಾಡಲಾಯಿತು.
ಪ್ರಾಸ್ತಾವಿಕವಾಗಿ ಬೆಳಗಾವಿ ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ ಜಗದೀಶ ಪಾಟೀಲ ಮಾತನಾಡಿ ರಾಷ್ಟ್ರೀಯ ಪ್ರವಾಸೋಧ್ಯಮ ದಿನದ ಪ್ರಾಮುಖ್ಯತೆ, ಇಲಾಖೆಯ ಕಾರ್ಯ ವೈಖರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಉದ್ಘಾಟಕರಾಗಿ ಆಗಮಿಸಿದ ಕಿ. ನಾ. ವಿ. ವ ಸಂಘದ ಗೌರವಕಾರ್ಯದರ್ಶಿ ಜಗದೀಶ ವಸ್ತçದ ಮಾತನಾಡಿ ಕಿತ್ತೂರು ಪ್ರವಾಸಿ ಸ್ಥಳವಾಗಿ ಇನ್ನೂ ಪ್ರಚಲಿತವಾಗಲು ಕೋಟೆಯ ಸ್ವಚ್ಛತೆ ಹಾಗೂ ಸ್ಮಾರಕಗಳ ಸಂರಕ್ಷಣೆ ನಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತುರಕರ ಶೀಗಿಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ಮುಖ್ಯ ಶಿಕ್ಷಕ ಮಹೇಶ. ಎನ್. ಚನ್ನಂಗಿ ಇವರು ಸಮಗ್ರ ಕಿತ್ತೂರು ನಾಡಿನ ಇತಿಹಾಸ ಕುರಿತು ಮಾತನಾಡಿ ಕಿತ್ತೂರು ನಾಡಿನ ಸಾಹಸವನ್ನು ತಿಳಿಸಿದರು.
ವಿಶೇಷ ಆಹ್ವಾನಿತರಾದ ಕ.ರಾ.ಸ.ನೌ.ಸಂಘದ ಅಧ್ಯಕ್ಷ ಐ. ಜಿ. ಚಣ್ಣನವರ ಮಾತನಾಡುತ್ತ ಕಿತ್ತೂರನ್ನು ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದರು.
ಕೆ.ಆರ್.ಸಿ ಮ್ಯುಸಿಯಂ ಸಹಾಯಕ ಕ್ಯುರೆಟರ್ ರಾಘವೇಂದ್ರ, ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋಧ್ಯಮ ಇಲಾಖೆಯ ಕೊಡುಗೆಯ ಬಗ್ಗೆ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಕಿ.ನಾ.ವಿ.ವ ಸಂಘ ಕಲಾ ಮತು ್ತ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಾನಗಳು, ಅವುಗಳ ಬೆಳವಣಿಗೆಯಲ್ಲಿ ನಾಗರಿಕರ ಜವಾಬ್ದಾರಿಯನ್ನು ತಿಳಿಸಿದರು.
ಬಿ.ಕಾಂ ವಿದ್ಯಾರ್ಥಿ ಸಂದೇಶ ಎಮ್ಮಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸಂಗೀತಾ ತೋಲಗಿ ಪ್ರಾರ್ಥನೆ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗು ಬಿ.ಎ ವಿದ್ಯಾರ್ಥಿನಿ ಶಿಲ್ಪಾ ಕೇರಿಮಠ ವಂದಿಸಿದರು. ದೇಶಪಾಂಡೆ ಪೌಂಡೆಶನ್ ಕಾರ್ಯನಿರ್ವಾಹಕ ತರಬೇತುದಾರ ಶ್ರೀಧರ್ ಕುಲಕರ್ಣಿ ತಾಂತ್ರಿಕ ಸಹಕಾರ ನೀಡಿದರು