ದುರಸ್ಥಿ ಕಾಣದ ರಸ್ತೆ ಜನಪ್ರತಿನಿಧಿಗಳ ವಿರುದ್ಧ ಮುಖಪುಟದಲ್ಲಿ ಹರಿ ಹಾಯ್ದ ನಾಗೇಶ ಉಳ್ಳೆಗಡ್ಡಿ

ಸುದ್ದಿ ಸದ್ದು ನ್ಯೂಸ್‌

ವರದಿ: ಬಸವರಾಜ ಚಿನಗುಡಿ

ಚನ್ನಮ್ಮನ ಕಿತ್ತೂರು: ಕಿತ್ತೂರು ಪಟ್ಟಣದಿಂದ ಸಂಗೊಳ್ಳಿ ಮಾರ್ಗವಾಗಿ ಹೋಗುವ ಮುಖ್ಯ ರಸ್ತೆ ಮಲ್ಲಾಪುರ ದಾಟಿದ ಮೇಲೆ ಇರುವ ರಸ್ತೆ ದುರಸ್ತಿ ಮಾಡುತ್ತೇವೆ ಎಂದು ಕಾಮಗಾರಿ ಪ್ರಾರಂಭ ಮಾಡಿ ಮೂರುನಾಲ್ಕು ತಿಂಗಳುಗಳು ಕಳೆದರು ಇದುವರೆಗೂ ಯಾವುದೇ ತರಹದ ಕೆಲಸ ಪ್ರಾರಂಭ ಆಗಿಲ್ಲ ರಸ್ತೆಯನ್ನು ಜೆಸಿಬಿಯಿಂದ ಅಗೆದು ಹಾಗೆ ಬಿಟ್ಟಿದ್ದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಜೀವವನ್ನು ಮುಂಗೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥತಿ ನಿರ್ಮಾಣವಾಗಿದ್ದು ಅನೇಕ ದ್ವೀಚಕ್ರ ವಾಹನ ಸವಾರರು ಅಪಘಾತಕ್ಕಿಡಾಗಿ ಆಸ್ಪತ್ರೆಯತ್ತು ಮುಖಮಾಡುವಂತಾಗಿದೆ.

ಇಲ್ಲಿ ದಿನ ನಿತ್ಯ ಸರಕಾರಿ ಬಸ್ಸು, ದ್ವಿಚಕ್ರ ವಾಹನಗಳು, ಲಾರಿ, ಟ್ಯಾಕ್ಟರ್ ಸೇರಿದಂತೆ ಅನೇಕ ಖಾಸಗಿ ವಾಹನಗಳು ಸಂಚರಿಸುತ್ತವೆ. ತಾಲೂಕಿನ ಬಹುತೇಕ ಗ್ರಾಮಗಳ ರಸ್ತೆಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಸುಳ್ಳು ಹೇಳಿ ದಾರಿತಪ್ಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಗ್ರಾಮೀಣ ಜನತೆಗೆ ಒಳ್ಳೆಯ ರಸ್ತೆ ನಿರ್ಮಾಣ ಮಾಡಬೇಕೆಂಬ ಸರ್ಕಾರ ಅನುದಾನ ನೀಡಿದರೆ ಕಳಪೆ ರಸ್ತೆ ನಿರ್ಮಿಸಿ ಗುತ್ತಿಗೆದಾರರ ಕಿಸೆ ತುಂಬುತ್ತಿದೆ. ಈ ಬಗ್ಗೆ ಸರ್ಕಾರದ ವೇತನ ಪಡೆದು ಕಾರ್ಯನಿರ್ವಸುವ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆಆದ್ಯತೆ ನೀಡಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

              ಮಲ್ಲಾಪೂರ ಹತ್ತಿರ ಅಪಘಾತಕ್ಕಿಡಾದ ದ್ವೀಚಕ್ರ ವಾಹನ

ಜಿಲ್ಲೆಯ ಮುಖ್ಯ ರಸ್ತೆ ಇದಾಗಿರುವುದರಿಂದ ಸುಮಾರು ವಾಹನಗಳು ಈ ರಸ್ತೆಯ ಮುಖಾಂತರ ಅನೇಕ ವಾಹನಗಳು ಸಂಚರಿಸುತ್ತವೆ. ಈ ರಸ್ತೆಯಲ್ಲಿ ಪ್ರಯಾಣಿಕರು ಏಳುತ್ತಾ ಬೀಳುತ್ತಾ ಹೋಗುತ್ತಾರೆ. ನಾನು ಕೂಡಾ ಪ್ರತಿ ದಿನಾ ಇದೆ ರಸ್ತೆಯಲ್ಲಿ ಸಂಚರಿಸುತ್ತೇನೆ ಇದನ್ನ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ  ತಂದರು ಪ್ರಯೋಜನ ಆಗಿಲ್ಲ. ಇದು ಯಾವ ತರಹದ ಅಭಿವೃದ್ಧ ಅನ್ನುವದೇ ಸಾರ್ವಜನಿಕರ ಯಕ್ಷ ಪ್ರಶ್ನೆ ಆಗಿದೆ. ಗುತ್ತಿಗೆ ಪಡೆದ ಗುತ್ತಿಗೆದಾರ ರಸ್ತೆ ಅಗೆದು ಹಾಗೆ ಯಾಕೆ ಬಿಟ್ಟಿದ್ದಾರೆ ಎಂಬುವುದೇ ಅರ್ಥವಾಗುತ್ತಿಲ್ಲ. ಈ ರಸ್ತೆ ಮುಖಾಂತರ ಪ್ರಯಾಣಿಸುವ ಪ್ರಯಾಣಿಕರು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೇವಲ ಭಾಷಣದಲ್ಲಿ ಅಷ್ಟು ಕೋಟಿ ಇಷ್ಟು ಕೋಟಿ ಅಂತ ಮಾತನಾಡಿದರೆ ಸಾಲದು ಈ ರಸ್ತೆ ಅಗೆದು ಎಷ್ಟೋಂದು ದಿನಗಳಾಯಿತು ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ.  ಈ ಭಾಗದ ಶಾಸಕರು ಕಾರನಲ್ಲಿ ತಿರುಗಾಡುತ್ತಾರೆ ಅವರಿಗೆ ಏನು ಪರಕು ಬೀಳುವುದಿಲ್ಲ. ಒಮ್ಮೆ ಬೈಕ್ ಮೇಲೆ ತಿರುಗಾಡಿ ಎಲ್ಲವೂ ಗೊತ್ತಾಗುತ್ತದೆ ಎಂದು ಶಾಸಕರ ವಿರುದ್ಧ ನಾಗೇಶ ಉಳ್ಳೆಗಡ್ಡಿ ಅವರು ಸಾಮಾಜಿಕ ಜಾಲತಾಣದ ತಮ್ಮ ಮುಖಪುಟದಲ್ಲಿ ಹರಿ ಹಾಯ್ದಿದ್ದಾನೆ.

ಇನ್ನು ಮೇಲಾದರು ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಈ ರಸ್ತೆ ಕಡೆಗೆ ಗಮನ ಹರೆಸಿ ಪ್ರಯಾಣಿಕರ ಸುಲಭ ಸಂಚಾರಕ್ಕೆ ಅನುವು ಮಾಡಿ ಕೊಡುತ್ತಾರೆಯೇ ಎಂದು ಕಾಯ್ದು ನೋಡಬೇಕಾಗಿದೆ.

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";