ಬೈಲಹೊಂಗಲ : ನದಾಫ, ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡುವಂತೆ ಒತ್ತಾಯಿಸಿ, ರಾಜ್ಯದ್ಯಾಂತ ಕರೆ ನಿಡಿದ ಹಿನ್ನೆಲೆಯಲ್ಲಿ ನದಾಫ-ಪಿಂಜಾರ ಸಮಾಜ ಭಾಂದವರು ಗುರುವಾರ ತಹಸೀಲ್ದಾರ ಬಸವರಾಜ ನಾಗರಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಚೆನ್ನಮ್ಮ ಸಮಾಧಿ ಹತ್ತಿರ ಸೇರಿದ ಸಮಾಜ ಭಾಂದವರು ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಮರ್ಪಿಸಿ ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿದರು.ತಾಲೂಕಾಧ್ಯಕ್ಷ ಅಬ್ದುಲಕಲಾಂ ಅಜಾದ ನದಾಫ, ಮುಖಂಡ ಮಹ್ಮದಸಾಹೇಬ ನದಾಫ ಮಾತನಾಡಿ, ರಾಜ್ಯದಲ್ಲಿ ನದಾಫ ಪಿಂಜಾರ ಸಮುದಾಯ 25 ರಿಂದ 30ಲಕ್ಷ ಜನಸಂಖ್ಯೆ ಹೊಂದಿದ್ದು ಜನಾಂಗವು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದವರಾಗಿದ್ದು, ಶೋಷಿತ ಕಡು ಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಅತೀ ಹಿಂದುಳಿದ ಜನಾಂಗರಾಗಿದ್ದೆವೆ, ಬಡತನ ಸರಳತೆಯಲ್ಲಿ ಎಲ್ಲಾ ವರ್ಗದ ಜನತೆಯೊಂದಿಗೆ ಅರಿತು ಬೆರೆತು ಜೀವನ ನಡೆಸುತ್ತಿರುವ ನಾವುಗಳು ಕೋಮು ಸೌಹಾರ್ಧತೆಗೆ ಸಂಕೇತವಾಗಿದ್ದೆವೆ ನದಾಫ, ಪಿಂಜಾರ, ದೂದೇ ಕುಲ, ಮನ್ಸೂರಿ ಎಂದು ಕರೆಯಲಾಗುವ ಸಮುದಾಯವು ವಿಶಿಷ್ಟ ಉತ್ಪದಾನಾ ಕ್ರಿಯೆಯಲ್ಲಿ ತೊಡಗಿಕೊಂಡ ಆರ್ಥಿಕ ಲಕ್ಷಣಗಳನ್ನು
ತನ್ನ ಅನನ್ಯತೆಯನ್ನಾಗಿಸಿಕೊಂಡಿದ್ದು ಸಾಂಸ್ಕೃತಿಕವಾಗಿಯೊ ಕೊಡ ತನ್ನದೇ ಶತಶತಮಾನಗಳ ಚಾರಿತ್ರಿಕ ಅನುಭವವನ್ನು ಕಟ್ಟಿಕೊಂಡಿದೆ.
ಈ ಸಮುದಾಯವು ಹತ್ತಿ ತನ್ನದೇ ಆದ ಉತ್ಪನ್ನ ತಯಾರಿಸುವ ಜಾಗತಿಕ ವೃತ್ತಿ ಸಮುದಾಯದ ಒಂದು ಭಾಗವಾಗಿರುವುದು ಗಮನಾರ್ಹ.ಪಟ್ಟಣಗಳಲ್ಲಿ ಕೊಳಗೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನಾಂಗದ ಜನರು ವಾಸಿಸುತ್ತಾರೆ. ಕಾರಣ ಬದುಕಿನ ಜೀವನ ರೂಪಿಸಿಕೊಳ್ಳಲು ಅಲೆಮಾರಿ ಜೀವನ ವೃತ್ತಿ ಬದುಕು ಕಟ್ಟಿಕೊಳ್ಳು ಒಂದು ಊರಿಂದ ಇನ್ನೊಂದು ಊರು ಬದುಕಿಗಾಗಿ ಅಲೆದಾಟವಾಗಿದೆ.ಇಲ್ಲಿ ಕುಡಿಯುವ ನೀರಿನ ಕೊರತೆ, ವಿದ್ಯುತ್ ಕೊರತೆ, ಶೌಚಾಲಯದ ಕೊರತೆ ಹಾಗೂ ನೈರ್ಮಲ್ಯಗಳಂದ ಅತ್ಯಂತ ಅನಾರೋಗ್ಯಕರ ಪರಿಸ್ಥಿತಿಗಳಲ್ಲಿ ಈ ಸಮುದಾಯ ವಾಸಿಸುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸಿದೆ.
ಇಸ್ಲಾಂ ಧರ್ಮ ಆಚರಣೆ ಹೊಂದಿದ್ದರು,ಬಹುವಾಗಿ ಭಾರತೀಯ ಹಿಂಧೂ ಧಾರ್ಮಿಕ ಆಚರಣೆ, ವಿಚಾರಣೆ, ಸಂಸ್ಕಾರಗಳು ನಮ್ಮಿಂದ ಹೋಗಿಲ್ಲ. ಎಲ್ಲಾ ಧರ್ಮಗಳೊಂದಿಗೆ ಸಹಬಾಳ್ವೆಗಾಗಿ ಎಲ್ಲರೊಂದಿಗೆ ಹೊಂದಿಕೊಂಡು ಸೂಫೀ ಸಂತತಿಯಂತೆ ಕೂಡಿ ಬಾಳ್ವೆ ಸಾಗಿಸುವ ನಮ್ಮ ಜನಾಂಗದಲ್ಲಿ ವಿಶಿಷ್ಟ ಕೋಮು ಸೌಹಾರ್ದತೆಯ ಜೀವನ ಇದೆ.ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಲ್ಲಿ ಇಸ್ಲಾಂ ಧರ್ಮೀಯರಲ್ಲಿ ಶೇಕಡ 30 ರಿಂದ 40ರಷ್ಟು ಜನಾಂಗವಾಗಿರುವ ಪಿಂಜಾರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮದ ಅವಶ್ಯವಿದ್ದು ಅದನ್ನು ಈಡೇರಿಸಲು ತಮ್ಮಲ್ಲಿ ವಿನಂತಿಸಲಾಗಿದೆ.
ಕರ್ನಾಟಕದ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ನಮ್ಮ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡಿರುವ ಅಂಶವನ್ನು ತಮ್ಮ ಗಮನಕ್ಕೆ ತರಬಯಸಿರುತ್ತೇವೆ. ಕೂಡಲೇ ನದಾಫ-ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದರು.
ಈ ಸಂದರ್ಬದಲ್ಲಿ ಇರ್ಷಾದ ಅಹ್ಮದ ಪಾಟೀಲ,ಶೌಕತಲಿ ಬುಡ್ರಕಟ್ಟಿ, ಶಮಶುದ್ದಿನ ಮದಲಮಟ್ಟಿ, ಮೆಹಬೂಬಸುಬಾನಿ ನದಾಫ,ಸತ್ತಾರ ಅಹ್ಮದ ನದಾಫ, ಬುಡ್ಡೆಸಾಬ ಮದಲಮಟ್ಟಿ, ಪಕೀರಸಾಬ ನದಾಫ, ಅಬುತಾಹೀರ ನದಾಫ, ದಸ್ತಗೀರಸಾಬ ನದಾಫ, ನಬಿಸಾಬ ನದಾಫ, ಮಕ್ಬುಲ ನದಾಫ, ಶಪೀ ಅಹ್ಮದ ಮುಲ್ಲಾ, ನಾಸೀರ ನದಾಫ, ಶಕೀಲ ಮದಲಮಟ್ಟಿ, ಪಾರುಖ ಅಂಕಲಗಿ, ಫಕ್ರುಸಾಬ ಕುಸಲಾಪುರ, ಮಲಿಕಜಾನ ನದಾಫ, ಕಲಂದರ ನದಾಫ, ಮಲಿಕಜಾನ ಅಡಿಮನಿ, ಸಿರಾಜ ಮದಲಮಟ್ಟಿ, ರಿಯಾಜ ನದಾಫ ಸೇರಿದಂತೆ ತಾಲೂಕಿನ ನದಾಫ ಪಿಂಜಾರ ಸಮಾಜದ ಭಾಂದವರು ಇದ್ದರು.