ಹುಬ್ಬಳ್ಳಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಶ್ರೀರಾಮ ಸೇನಾ ಸ್ವಾಗತ ಮಾಡುತ್ತದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ತಡೆಯಲು ಪೊಲೀಸರು ಅನುಕೂಲವಾಗುವಂತೆ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುತ್ತಿದ್ದು, ಅದರಲ್ಲಿ ಹತ್ತು ಜನರು ಇರಲಿದ್ದಾರೆ ಎಂದ ಅವರು ಕಾನೂನು ಕೈಗತ್ತಿಕೊಳ್ಳದೆ ಈ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಬಂದಿದೆ, ಆದರೂ ಸಹ. ಗೋಹತ್ಯೆ ನಡೆಯುತ್ತಿದೆ, ಕಾಯ್ದೆಗಳು ಪೆಪರ್ ನಲ್ಲಿ ಮಾತ್ರ ಉಳಿಯಬಾರದು ಎಂದರು.
ಹೊಸ ವರ್ಷ ಆಚರಣೆಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಹಿಂದೂಗಳಿಗೆ ಯುಗಾದಿ ಹೊಸ ವರ್ಷವಾಗಿದೆ. ಆದ್ದರಿಂದ ಇಸ್ಕಾನ್, ಧರ್ಮಸ್ಥಳ ಮತ್ತು ರವಿ ಶಂಕರ್ ಗುರುಜಿಯವರು ಹೊಸ ವರ್ಷ ಆಚರಣೆ ಮಾಡುತ್ತಾರೆ ಹೀಗಾಗಿ ವರ್ಷಾಚರಣೆ ಮಾಡದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ. ಒಂದು ವೇಳೆ ಹೊಸ ವರ್ಷಾಚರಣೆ ಮಾಡಿದರೇ ಧರಣಿ ಮಾಡುತ್ತೇವೆ. ಹಿಂದುತ್ವ ಆಧ್ಯಾತ್ಮಿಕ ಕೇಂದ್ರದಲ್ಲಿ ಹೊಸ ವರ್ಷಾಚರಣೆ ಸರಿಯಲ್ಲ ಎಂದು ಖಂಡಿಸಿದರು.