ಕರ್ನಾಟಕದಲ್ಲಿ ಮೊದಲ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ಮುಗ್ಧ

ಉಮೇಶ ಗೌರಿ (ಯರಡಾಲ)

ಬೆಂಗಳೂರು: ಹೆಣ್ಣಿನ ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯಕ್ಕೊಂದು ಮೆರುಗು ನೀಡುವ ಜನಪ್ರಿಯ ಮತ್ತು ಅಭೂತಪೂರ್ವ ರೇಷ್ಮೆ ಸೀರೆಗಳ ಬ್ರ್ಯಾಂಡ್‌ ʻಮುಗ್ಧʼ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತನ್ನ ಮಳಿಗೆಯನ್ನು ತೆರೆದಿದೆ.

ಮಳಿಗೆಯು ಚೆಟ್ಟಿನಾಡಿನ ಒಳಾಂಗಣ ವಿನ್ಯಾಸದೊಂದಿಗೆ ಗ್ರಾಹಕರಿಗೆ ಅದ್ಭುತ ದೇವಸ್ಥಾನವನ್ನು ನೆನಪಿಸುತ್ತದೆ. ದ್ವಾರದಲ್ಲಿ ಶ್ರೀ ವೆಂಕಟೇಶ್ವರ ದೇವರ ಆಶೀರ್ವಾದದೊಂದಿಗೆ, ದೇವಸ್ಥಾನದ ಒಳಗೆ ತಾವು ಖರೀದಿಗೆ ಬಂದಿರುವಂತೆ ಪವಿತ್ರವಾದ ಅನುಭೂತಿಯನ್ನು ನೀಡುತ್ತದೆ.

ಈ ಮಳಿಗೆಯು ನಾಡಿನ ಕೈಮಗ್ಗಗಳ ಅದ್ಭುತ ಪರಂಪರೆಗೆ ಸಲ್ಲಿಸುವ ವಿಶೇಷ ಗೌರವವೇ ಸರಿ. ಕಾಂಚೀವರಂ ನಿಂದ ಬನಾರಸಿ ಸೀರೆಗಳ ವರೆಗೆ, ಇಕ್ಕಟಾದಿಂದ ಗಡ್ವಾಲ್‌ ವರೆಗೆ, ಪೈಥಾನಿಸ್‌ನಿಂದ ಹಿಡಿದು ಉಪ್ಪದಾಸ್‌ ವರೆಗೆ, ಹೀಗೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ನೇಯ್ಗೆಯಾದ ಸುಂದರ ಸೀರೆಗಳು ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನೂತನವಾಗಿ ಶುರುವಾಗಿರುವ ಮಳಿಗೆಯಲ್ಲಿ ಲಭ್ಯವಿರುತ್ತದೆ.

‘ನಮ್ಮ ಕನಸಿನ ಕೂಸೊಂದು ಗರಿ ಬಿಚ್ಚುತ್ತಿದೆ. ನಮ್ಮ ಅದ್ಧೂರಿ ಮಳಿಗೆಯನ್ನು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ತೆರೆಯುತ್ತಿದ್ದೇವೆ ಎಂಬುದನ್ನು ಹಂಚಿಕೊಳ್ಳುವ ಈ ಕ್ಷಣವು, ಮರಿ ಹಕ್ಕಿಯು ತನ್ನ ಪುಟ್ಟ ರೆಕ್ಕೆಗಳನ್ನು ಬಡಿಯುತ್ತ ಎತ್ತರಕ್ಕೆ ಹಾರುವುದನ್ನು ಕಣ್ತುಂಬಿಕೊಳ್ಳುವ ತಾಯಿ ಹಕ್ಕಿಗೆ ಆಗುವಂಥ ಅನುಭವ. ನಮ್ಮ ಗ್ರಾಹಕರಿಗೆ ಅತ್ಯುತ್ತಮ ಅನುಭೂತಿಯನ್ನು ಕೊಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ’ ಎನ್ನುತ್ತಾರೆ ಮುಗ್ಧ ಸಂಸ್ಥಾಪಕಿ ಹಾಗು ವಿನ್ಯಾಸಕಿ ಶಶಿ ವಂಗಪಲ್ಲಿ.

ಮಳಿಗೆ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಕನ್ನಡದ ಮುದ್ದು ಮುಖದ ನಟಿ ಆಶಿಕಾ ರಂಗನಾಥ್, ʻಎಲ್ಲ ಹುಡುಗಿಯರಿಗೂ ಸೀರೆ ಅಂದ್ರೆ ಒಂದು ಸಂಭ್ರಮವೇ ಸರಿ. ಇಲ್ಲಿರುವ ವಿವಿಧ ವಿನ್ಯಾಸದ ಸೀರೆಗಳು ನೋಡೋದಕ್ಕೆ ಕಣ್ಣಿಗೆ ಹಬ್ಬ ಅನ್ನಿಸತ್ತೆ ಇನ್ನು ಉಟ್ಟರೆ ಅದರ ಖುಷಿಗೆ ಪಾರವೇ ಇರುವುದಿಲ್ಲ. ನನಗಂತೂ ಸೀರೆ ಎಂದರೆ ತುಂಬಾ ಇಷ್ಟ’ ಎಂದು ಆಶಿಕಾ ಸೀರೆ ಬಗ್ಗೆ ಮನಬಿಚ್ಚಿ ಮಾತನಾಡಿದರು.

Share This Article
";