ಬಿಡಿಸಿಸಿ ಬ್ಯಾಂಕ ಮುರಗೋಡ ಶಾಖೆಯಲ್ಲಿ5 ಕೋಟಿಗೂ ಅಧಿಕ ನಗದು ,ಚಿನ್ನಾಭರಣ ದರೋಡೆ

ಉಮೇಶ ಗೌರಿ (ಯರಡಾಲ)

ಬೆಳಗಾವಿ: ಬಿಡಿಸಿಸಿ ಬ್ಯಾಂಕ ಮುರಗೋಡ ಶಾಖೆಯಲ್ಲಿ ಸುಮಾರು 5 ಕೋಟಿಗೂ ಅಧಿಕ ನಗದು ಹಣ,ಚಿನ್ನಾಭರಣ ಕಳ್ಳರು ದೋಚಿರುವುದು ಬೆಳಕಿಗೆ ಬಂದಿದೆ.

ಬೆಳಗಾವಿ ಜೆಲ್ಲೆ ಸವದತ್ತಿ ತಾಲೂಕಿನ ಮುರಗೋಡದ ಬಿಡಿಸಿಸಿ ಬ್ಯಾಂಕಗೆ ನುಗ್ಗಿರುವ ಕಳ್ಳರು ಬ್ಯಾಂಕ್‌ ಬಾಗಿಲು ಮುರಿದು ನಕಲಿ ಕೀ ಬಳಸಿ ನಗದು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಬರೋಬ್ಬರಿ 4ಕೋಟಿ ರೂಪಾಯಿ ನಗದು ,1.5 ಕೋಟಿ ಮೌಲ್ಯದ ಬಂಗಾರವನ್ನು ಕದ್ದೊಯ್ದಿದ್ದಾರೆ. ರವಿವಾರ(ಇಂದು) ಬೆಳಗಿನ ಜಾವ 4.40 ರ ವೇಳೆಗೆ ಕಳ್ಳತನವಾಗಿದೆ ಎಂದು ಬ್ರಾಂಚ್‌ ಮ್ಯಾನೇಜರ್‌ ತಿಳಿಸಿದ್ದಾರೆ.ಸ್ಥಳಕ್ಕೆ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಹಿರಿಯ ಸಿಬ್ಬಂದಿ ಹಾಗೂ ಪೊಲೀಸ್‌ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
";