ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 35 ಸಾವಿರಕ್ಕೂ ಅಧಿಕ ಉದ್ಯಮಿಗಳು ಭಾರತ ತೊರೆದಿದ್ದಾರೆ!

ಉಮೇಶ ಗೌರಿ (ಯರಡಾಲ)

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ 35 ಸಾವಿರಕ್ಕೂ ಅಧಿಕ ಉದ್ಯಮಿಗಳು ದೇಶ ತೊರೆದಿದ್ದಾರೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವರಾದ ಅಮಿತ್ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

2014 ರಿಂದ 2020 ರ ವರೆಗೆ ವಿದ್ಯಮಾನ ಘಟಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ತಮ್ಮ ಆಡಳಿತದಲ್ಲಿ ಉದ್ಯಮಿಗಳು ಏಕೆ ದೇಶ ಬಿಟ್ಟು ತೊರೆದಿದ್ದಾರೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

2014 ರಿಂದ 2018 ರವರೆಗೆ ದೇಶದ 23 ಸಾವಿರ, ದೇಶ ಬಿಟ್ಟು ಹೋಗಿದ್ದರೆ, 2019 ರಲ್ಲಿ 7 ಸಾವಿರ ಹಾಗೂ 2020 ರಲ್ಲಿ ಐದು ಸಾವಿರ ಪ್ರಖ್ಯಾತ ಕೈಗಾರಿಕೊದ್ಯಮಿಗಳು ದೇಶ ತೊರೆದಿವೆ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

Share This Article
";