ಸಮಸ್ಸೆಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಮಹೇಶ್ ಕುಮಟಳ್ಳಿ

ಉಮೇಶ ಗೌರಿ (ಯರಡಾಲ)

ಅಥಣಿ: ನೆರೆ ಸಂತ್ರಸ್ತರ ಮನೆ ಹಂಚುವಿಕೆಯಲ್ಲಿ ತಾರತಮ್ಯವಾಗಿದೆ ಒಂದೇ ಕುಟುಂಬದಲ್ಲಿ 4-5 ಮನೆ ಮುಂಜೂರಾಗಿವೆ ನೆರೆ ಸಂತ್ರಸ್ತರಿಗೆ ಸೂಕ್ತ ಬೆಳೆ ಪರಿಹಾರ ದೊರೆತಿಲ್ಲ ನೆರೆ ಪೀಡಿತ ಸೂಕ್ತ ಫಲಾನುಭವಿಗಳಿಗೆ ಮನೆ ಹಂಚಿಕೆಯಾಗಬೇಕು ಹಾಗೂ ಶಾಶ್ವತ ಪರಿಹಾರ ಘೋಷಣೆ ಯಾಗಬೇಕು ಇಲ್ಲವಾದಲ್ಲಿ ಸುರೇಶ ಪಾಟೀಲ್ ನೇತೃತ್ವದಲ್ಲಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ನಿನ್ನೆ ಸೆಗುಣಶಿ ಗ್ರಾಮದಲ್ಲಿ ಗೊಂದಲ ಸೃಷ್ಟಿ ಯಾಗಿತ್ತು

ಶೇಗುಣಸಿ ಗ್ರಾಮದ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದ ಶಾಸಕ ಮಹೇಶ್ ಕುಮಟಳ್ಳಿ ಗ್ರಾಮಸ್ಥರ ಸಮಸ್ಯೆ ಅರಿತು ಸ್ಥಳದಲ್ಲಿ ಅಥಣಿ ತಾಲೂಕ ದಂಡಧಿಕಾರಿ ದುಂಡಪ್ಪ ಕೋಮಾರ ಅವರನ್ನ ಕರೆಸಿ ಸೂಕ್ತ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವುದಾಗಿ ಭರವಸೆ ನೀಡಿ ಹೋರಾಟ ಹಿಂಪಡೆದು ಶಾಂತಿ ಕಾಪಾಡಲು ಮನವಿ ಮಾಡಿದರು

ಇದೆ ಸಂಧರ್ಭದಲ್ಲಿ ಸುರೇಶ್ ಪಾಟೀಲ್
ಶಾಸಕರ ಮಾತಿಗೆ ಓಗೊಟ್ಟು ಹೋರಾಟ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು

ಇದೆ ಸಂಧರ್ಭದಲ್ಲಿ ಮುಖಂಡರಾದ ಅವಿನಾಶ ಗುರುಸ್ವಾಮಿ.ಅಶೋಕ್ ಗೌಡಪ್ಪನವರ. ಸಂಜು ಕರಗಾವಿ. ದಯಾನಂದ ಮೊಪಗಾರ್. ಚಿದಾನಂದ್ ಪಾನಶೆಟ್ಟಿ. ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಅಬ್ಬಾಸ್ ಮುಲ್ಲಾ.

Share This Article
";