ಬ್ರಿಟಿಷರೇ ನಮ್ಮ ಭಾರತ ಬಿಟ್ಟು ತೊಲಗಿರಿ ಎಂದ ಎಂ ಕೆ ಹುಬ್ಬಳ್ಳಿ ಸೇನಾನಿಗಳು

ಉಮೇಶ ಗೌರಿ (ಯರಡಾಲ)

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಕಥೆ ಹೇಳಬೇಕಾಗಿದೆ.ಕೋಟಿ ಕೋಟಿ ಜನರ ಬಲಿದಾನದ ಕಥೆ ಹೇಳಬೇಕಾಗಿದೆ.ಲಾಠಿ ರುಚಿ ನೋಡಿದವರ ಕಥೆ ಹೇಳಬೇಕಾಗಿದೆ.ಕಾಳಾಪಾನಿ ಅನುಭವಿಸಿವರ ಕಥೆ ಹೇಳಬೇಕಾಗಿದೆ. ಗಲ್ಲಿಗೆ ಕೊರಳು ಕೊಟ್ಟವರ ಕಥೆ ಹೇಳಬೇಕಾಗಿದೆ. ಅಪ್ಪ ಅಮ್ಮ ಹೆಂಡತಿ ಮಕ್ಕಳು ಬಿಟ್ಟು ತಮ್ಮ ಬದುಕಿನ ಅಮೂಲ್ಯವಾದ ಅವಧಿಯನ್ನು ನಮಗೆ ಬಿಕ್ಷೆ ನೀಡಿ ಅವರ ಸರ್ವಸ್ವವನ್ನು ತ್ಯಾಗ ಮಾಡಿದವರ ಕಥೆ ಹೇಳಬೇಕಾಗಿದೆ.ನಮ್ಮ ದೇಶಕ್ಕೆ ಆಜಾದ್ ಹಾಗೆ ಸುಮ್ಮನೆ ಬಂದಿಲ್ಲಾ. ನಮ್ಮ ಪೂರ್ವಜರ ಕೊಡುಗೆ, ರಕ್ತ ಬಸಿದು ಅವರಿಂದ ಕಿತ್ತು ನಮಗೆ ನೀಡಿದ ಕಾಣಿಕೆ ಎಂದು ಮಕ್ಕಳಿಗೆ ಹೇಳಬೇಕಾಗಿದೆ.ಅವರ ಶ್ರಮದ ಫಲವಾಗಿ ಇಂದು ನಾವೆಲ್ಲರೂ ಫುಲ್ ಖುಷ್ ಅನ್ನೋ ಮಾತು ಹೇಳಬೇಕಾಗಿದೆ.

ಆಗಷ್ಟ ಹದಿನೈದು ರಜೆ ದಿನವಲ್ಲ. ಅದು ಸಂಭ್ರಮದ ದಿನ. ನಾವೆಲ್ಲರೂ ಗೌರವದಿಂದ ಆಚರಿಸುವ ಹಬ್ಬದ ದಿನ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯರನ್ನು ಗೌರವಿಸುವ ಮತ್ತು ನೆನಪಿಸುವ ದಿನ.ನನ್ನ ರಾಷ್ಟ್ರ ಮತ್ತು ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಹೊಡೆದು ಕುಣಿದು ಕುಪ್ಪಳಿಸುವ ದಿನ. ರಾಷ್ಟ್ರ ಪ್ರೇಮ ಮೆರೆಯುವ ದಿನ.ಈ ವರ್ಷ ನನಗೆ ಲಭಿಸಿರುವ ಬಹು ದೊಡ್ಡ ಅವಕಾಶ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷಾಚರಣೆ ಸಂದರ್ಭದಲ್ಲಿ ಇದ್ದೇವಿ. ಈ ಸಂದರ್ಭದಲ್ಲಿ ಎಂ ಕೆ ಹುಬ್ಬಳ್ಳಿ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಗಾಂಧಿ ಸ್ಮಾರಕದ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಳ್ಳುತಿದ್ದೇನೆ.    

ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಪಟ್ಟಣ ಎಂ ಕೆ ಹುಬ್ಬಳ್ಳಿ ಇದು ಪಟ್ಟಣ ಪಂಚಾಯತ್ ಆಗಿದ್ದು ಚನ್ನಮ್ಮನ ಕಿತ್ತೂರಿಂದ ಉತ್ತರ ದಿಕ್ಕಿಗೆ 15 ಕೀ ಮೀ ದೂರದಲ್ಲಿದೆ.

ಇದಕ್ಕೆ ಹುಬ್ಬಳ್ಳಿ ಎನ್ನಲು ಕಾರಣ ಹೊ+ಬಳ್ಳಿ=ಹುಬ್ಬಳ್ಳಿ ಮುಗಟಸಾಹೇಬರ ದರ್ಗಾ ಮಾಂಡಲೀಕ ಅರಸನ ಹೆಸರಿನಿಂದ ಮುಗಟಖಾನ ಎಂದು ಹೆಸರು ಬಂದಿದೆ ಎನ್ನುತ್ತಾರೆ,ಎರಡು ಹೆಸರು ಕೊಡಿ ಮುಗಟಖಾನ ಹುಬ್ಬಳ್ಳಿಯಾಗಿದೆ ಇಲ್ಲಿಯ ವಿಶೇಷತೆ ಎಂದರೆ ಗಂಗಾಂಬಿಕಾ ದೇವಸ್ಥಾನ ಇದು ಚನ್ನಬಸವಣ್ಣ ಮತ್ತು ಶಿವಶರಣರು ಉಳಿವಿಗೆ ಹೋರಟಾಗ ತಾಯಿ ಗಂಗಾಂಬಿಕಾ ತನ್ನ ಗುರುಗಳಾದ ಶ್ರೀ ರುದ್ರಮುನಿ ದೇವರ ಸ್ವಾಮಿಗಳ ಕ್ಷೇತ್ರದಲ್ಲಿ ವೀರ ಸ್ವರ್ಗ ಪಡೆದಳು,ಆದ್ದರಿಂದ ಮಲಪ್ರಭಾ ನದಿಯ ದಂಡೆಯ ಮೇಲೆ ಕೊಡಲ ಸಂಗಮ ರೀತಿಯಲ್ಲಿ ದೊಡ್ಡದಾದ ಬೃಹತ್ ಮಂದಿರ ಕಟ್ಟಿರುವರು.

ಎಂ ಕೆ ಹುಬ್ಬಳ್ಳಿಯ ಇನ್ನೊಂದು ಪ್ರಮುಖವಾದ ವಿಶೇಷತೆ ಎಂದರೆ ಪಟ್ಟಣದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಪೋಲಿಸ್ ಠಾಣೆಯ ಮಧ್ಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಚಿತಾಭಸ್ಮದ ಸ್ಮಾರಕವಿದೆ. ‌

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1942 ರ ಚಲೇ ಜಾವ್ ಚಳುವಳಿಯಲ್ಲಿ ಭಾಗವಹಿಸಿದ ವೀರ ಯೋದರು ಬ್ರಿಟಿಷರೇ ನಮ್ಮ ಭಾರತ ಬಿಟ್ಟು ತೊಲಗಿರಿ ಎಂದು 20 ಜನ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಿದ್ದರಂತೆ ಅಲ್ಲದೆ ಜೈಲು ಶಿಕ್ಷೆಯನ್ನು ಅನುಭವಿಸಿದವರು.

ದಿ. ಶಿವನಿಂಪ್ಪ,ರು,ಗಣಾಚಾರಿ(ಜೈಲು ಶಿಕ್ಷೆ 6ತಿಂಗಳು) ಚಿನ್ಮಯ ಮೂರ್ತಿ ಬ ಓಂಕಾರಮಠ (6 ತಿಂಗಳು) ಶಂಕರಪ್ಪ ಬ ಬಡಿಗೇರ (6 ತಿಂಗಳು) ಸದಾಶಿವ ನಿ ಜವಳಿ (ನಿಗಡಿ ಮಾಸ್ತರ 6ತಿಂಗಳು) ಶಿವರಾಯಪ್ಪಾ ಮ ಗೊಡಚಿ (4ತಿಂಗಳು) ಮಡಿವಾಳಯ್ಯಸ್ವಾಮಿ ಗು ಹಿರೇಮಠ ಸಾ:ವಿರಾಪುರ (4 ತಿಂಗಳು)ಶಿವಬಸಪ್ಪಾ ಚ ಪಾಶ್ಚಾಪುರ, ವೈಜನಾಥ ರು ಹತ್ತಿ, ಶಿವಯ್ಯಾ ಚ ಸಂಬಾಳ ಶಿವಮೂರ್ತಿ ರಾ ಕಂಬಾರ, ದಿ.ಮಹಾದೇವಪ್ಪಾ ವಿ ನಾವಿ ಉರ್ಪ ಮಮದಾಪುರ, ಶಿವರಾಯಪ್ಪ ಎ ಕತ್ತಿ, ಯಲ್ಲಪ ಪ ಕಾವಲದಾರ, ಗಂಗಪ್ಪಾ ಮು ಗಡೆನ್ನವರ, ಚಂಬಪ್ಪ ಬ ತುಪ್ಪದ, ಬಸಪ್ಪ ಬ ತಿಗಡಿ. ಬಾಳಪ್ಪ ರು ತಿಗಡಿ, ಬಾಳಪ್ಪ ರು ಬೆಂಡಿಗೇರಿ,ಕಲ್ಲಪ್ಪಾ ಕ ಬಡಿಗೇರ, ಬಸಪ್ಪಾ ಶಿ ಜೋತಿ, ಶಂಕರೆಪ್ಪಾ ಬಡಿಗೇರ ಹೀಗೆ ಇವರೆಲ್ಲರ ಹೆಸರುಗಳನ್ನು ಅಲ್ಲಿಯೇ ಕಲ್ಲಿನಲ್ಲಿ ಬರೆಸಿದ್ದಾರೆ.

ಅಲ್ಲದೆ ಗಾಂಧಿಯವರ ಚಿತಾಭಸ್ಮವನ್ನು ಬೆಳಗಾವಿ ಮೂಲಕ ಎಂ ಕೆ ಹುಬ್ಬಳ್ಳಿ ಮಾರ್ಗದಲ್ಲಿ ಗದಗಕ್ಕೆ ಒಯ್ಯುತ್ತಿದ್ದಾಗ ಸ್ವಾತಂತ್ರ್ಯ ಹೋರಾಟಗಾರರು ಒಂದಿಷ್ಟು ಚಿತಾಭಸ್ಮ ಈ ಸ್ಥಳದಲ್ಲಿ ಚಿರಸ್ಥಾಯಿಯಾಗಿರುವಂತೆ ಮಾಡಿದ್ದಾರೆ.

ಅಲ್ಲದೆ ಸಹಕಾರಿ ಸಕ್ಕರೆ ಕಾರ್ಖಾನೆಯ ಆಗಿನ ಆಡಳಿತ ಮಂಡಳಿ ಗಾಂಧೀಜಿ ಸ್ಮಾರಕ ನಿರ್ಮಿಸಿಕೊಟ್ಟಿದೆ. ದುರ್ದ್ವವೆಂದರೆ ಪ್ರತಿವರ್ಷ ಆ 15, ಅ 2, ಜ 26 ರಂದು ಮಾತ್ರ ಚಿತಾಭಸ್ಮ ಸ್ಮಾರಕಕ್ಕೆ ಸುಣ್ಣ ಬಣ್ಣ ಬಳಿದು ಅಂದಗೂಳಿಸುವ ಸ್ಥಳೀಯ ಆಡಳಿತ ಮಂಡಳಿ ಇಲ್ಲಿನ ಚಿತಾಭಸ್ಮ ಸ್ಮಾರಕವನ್ನು ಅಭಿವೃದ್ಧಿಗೂಳಿಸಿ ಉದ್ಯಾನವನ ನಿರ್ಮಿಸಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಿಸುವುದರ ಜೊತೆಗೆ ಇತಿಹಾಸ ಸ್ಮರಿಸುವ ಕಾರ್ಯಕ್ಕೆ ಸರಕಾರ ಮುಂದಾಗಬೇಕು.

ಅಲ್ಲಿಯೇ ಇನ್ನೂಂದು ವಿಶೇಷವಾದ ವೀರಯೋದನ ಸಮಾದಿ ಸ್ಥಳ ಇರುವುದು ನಮಗೆ ಕಂಡು ಬರುತ್ತದೆ ದಿ.ಶ್ರೀ ಮಹಾಂತೇಶ ನಾಗಪ್ಪ ಮೇಟಿ (ಮೆಟ್ಯಾಲ). ತಂದೆ ನಾಗಪ್ಪ ಇವರಿಗೆ ನಾಲ್ಕು ಜನ ಮಕ್ಕಳಿದ್ದು ಒಬ್ಬರು ಪೋಲಿಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇನ್ನಿಬ್ಬರು ಒಕ್ಕಲುತನ ಮಾಡುತ್ತಿದ್ದಾರೆ ದಿ.ಮಹಾಂತೇಶ ಅವರು ಎಂ ಕೆ ಹುಬ್ಬಳ್ಳಿಯ ವೀರಯೋದ 1-10-1979 ರಲ್ಲಿ ಜನಿಸಿದ್ದು 10 ನೇ ತರಗತಿ ಮುಗಿಸಿ ನಂತರ ಭಾರತೀಯ ಸೇನೆಗೆ ಸೇರುತ್ತಾರೆ. ಹೀಗೆ ಕೆಲವು ವರ್ಷಗಳ ನಂತರ ಸೇನೆಯಲ್ಲಿ 16-09-2011 ರಲ್ಲಿ ವೀರ ಮರಣ ಹೊಂದಿದಾಗ ಸಕಲ ಸರ್ಕಾರಿ ಗೌರವದೊಂದಿದೆ ಇವರ ಪಾರ್ಥಿವ ಶರೀರವನ್ನು ತಂದು ಗಾಂಧೀಜಿ ಅವರ ಸ್ಮಾರಕದ ಹಿಂದೆ ಸಮಾದಿ ಮಾಡಿರುವುದು ಕಂಡು ಬರುತ್ತದೆ,

ಸ್ವತ ದಿ.ಮಹಾಂತೇಶ ಅವರ ತಂದೆ ನಾಗಪ್ಪ ಅವರು ಅವರ ಮಗನ ಸಮಾದಿ ಸ್ಥಳವನ್ನು ಸ್ವಚ್ಚ ಮಾಡುವ ಕಾರ್ಯ ಮತ್ತು ಪ್ರತಿ ವರ್ಷ ಪಣ್ಯಸ್ಮರಣೆಯ ದಿನ ಪೂಜಾ ಕಾರ್ಯವನ್ನು ನೇರೆವರಿಸುತ್ತಾರೆ. ಒಟ್ಟಿನಲ್ಲಿ
ಈ ಒಂದು ಪುಣ್ಯ ಸ್ಥಳ ಅಭಿವೃದ್ಧಿ ಆಗಬೇಕೆಂಬುದೆ ನಮ್ಮೆಲ್ಲರ ಆಶಯವಾಗಿದೆ.

 


ಲೇಖಕರು:ಸಂತೋಷ ಸಂಬಣ್ಣವರ. ಎಂ ಕೆ ಹುಬ್ಬಳ್ಳಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";