ಹರ್ಷ ಕೊಲೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಗೆ 

ಉಮೇಶ ಗೌರಿ (ಯರಡಾಲ)

ಬೀದರ್: ಭಾವಸಾರ ಕ್ಷತ್ರೀಯ ಸಮಾಜ ನಿಷ್ಟಾವಂತ, ಬಜರಂದ ದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ, ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬುಧವಾರ 11:30ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು.

ಹಿರೇಮಠದ ವೀರರೇಣುಕ ಗಂಗಾಧರ ಸ್ವಾಮೀಜಿ, ಹಳ್ಳಿಖೇಡ(ಕೆ) ಹಿರೇಮಠದ ಸ್ವಾಮೀಜಿ, ಭಾವಸಾರ ಕ್ಷತ್ರೀಯ ಸಮಾಜ ಜಿಲ್ಲಾ ಅಧ್ಯಕ್ಷ ಸಂಜಯ್ ದಂತಕಾಳೆ, ಡಾ.ಸಿದ್ದು ಪಾಟೀಲ, ಮಹೇಶ ಅಗಡಿ, ಲಕ್ಷ್ಮೀಕಾಂತ ಹಿಂದೊಡ್ಡಿ, ಗೋಪಾಲಕೃಷ್ಣ ಮೊಹಳೆ, ಮಹಾಂತೇಶ ಪೂಜಾರಿ, ಭದ್ರೇಶ ಜವಳಗಿ, ಜ್ಯೋತಿಬಾ ಸಾಠೆ, ಶ್ರೀಕಾಂತ ತಾಂಡೂರ, ಸಿದ್ದು ಚಕಪಳ್ಳಿ, ನವೀನ್ ಬತಲಿ ಸೇರಿದಂತೆ ಸಾವಿರಾರು ಯುವಕರು ಭಾಗವಹಿಸಿದ್ದರು.

Share This Article
";