ಬೆಳಗಾವಿ 06: ಕನ್ನಡ ಸಾಹಿತ್ಯ ಪರಿಷತ್ ದಿಂದ
ಬೆಳಗಾವಿ ಜಿಲ್ಲೆಯಲ್ಲಿ ನಿಯಮಿತವಾಗಿ ವಿಶಿಷ್ಟ ಹಾಗೂ ವಿನೂತನ ರೀತಿಯಲ್ಲಿ ಕನ್ನಡದ ಕರ‍್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯ ಗಡಿ ಭಾಗಗಳಲ್ಲಿ ಕನ್ನಡ ಭಾಷೆ, ನೆಲದ ರಕ್ಷಣೆಯ ಸಲುವಾಗಿ ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.
ನಗರದಲ್ಲಿ ರವಿವಾರ ಕನ್ನಡ ಭವನದಲ್ಲಿ ಏರ್ಪಟ್ಟಿದ್ದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆಯ ಕಾರ‍್ಯಕಾರಿ ಸಮಿತಿ ಸದಸ್ಯರ ಹಾಗೂ ಎಲ್ಲಾ ತಾಲೂಕಾ ಅಧ್ಯಕ್ಷರುಗಳ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಕನ್ನಡ ಶಾಲೆಗಳ ಅದರಲ್ಲೂ ಗಡಿ ಭಾಗಗಳಲ್ಲಿರುವ ಶಾಲೆಗಳ ಸ್ಥಿತಿ ಗತಿ ಹಾಗೂ ಕನ್ನಡ ಬಾಷಾ ಶಿಕ್ಷಕರ ಲಭ್ಯತೆ ಬಗ್ಗೆ ಪರೀವಿಕ್ಷಣೆ ಮಾಡಿ ಅವುಗಳ ಸುಧಾರಣೆಗಾಗಿ, ಗಡಿ ಬಾಗಗಳಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವ ಕಾರ‍್ಯವನ್ನು ಮಾಡಲಾಗುವುದು. ಎಲ್ಲಾ ತಾಲೂಕಾ ಕಸಾಪ ಅಧ್ಯಕ್ಷರುಗಳು ಈ ನಿಟ್ಟಿನಲ್ಲಿ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷರುಗಳಾದ ಎನ್.ಆರ್.ಠಕಾಯಿ, ಮಲ್ಲಕಾರ್ಜುನ ಕನಶೆಟ್ಟಿ, ರವೀಂದ್ರ ಪಾಟೀಲ, ಈರಣ್ಣಾ ಶಿರಗಾಂವಿ, ಪಾಂಡುರಂಗ ಜಟಗನ್ನವರ, ಭಾರತಿ ಮದಬಾವಿ, ಪ್ರಕಾಶ ಅವಲಕ್ಕಿ, ಡಾ.ಸುರೇಶ ಉಕ್ಕಲಿ, ಬಸಪ್ರಭು ಹಿರೇಮಠ, ಶಿವಗೌಡ ಕಾಗೆ, ಶ್ರೀಕಾಂತ ದಳವಾಯಿ, ಡಾ. ಸಂಜಯ ಶಿಂದಿಹಟ್ಟಿ, ತಮ್ಮಣ್ಣ ಕಾಮನ್ನವರ, ಸುರೇಶ ಹಂಜಿ, ಕರ‍್ಯಕಾರಿ ಸಮಿತಿಯ ಪದ್ಮರಾಜ ವೈಜಣ್ಣವರ, ಆಕಾಶ್ ಥಬಾಜ, ಕಿರಣ ಸಾವಂತನವರ, ವೀರಭದ್ರಪ್ಪ ಅಂಗಡಿ, ವಿದ್ಯಾವತಿ ಆರ್ ಜನವಾಡೆ, ಡಾ.ಜಗದೀಶ ಹಾರುಗೊಪ್ಪ, ಮಲ್ಲಿಕಾರ್ಜುನ ಕೋಳಿ, ಎಫ್.ವಾಯ್.ತಳವಾರ, ಸುದಾ ಪಾಟೀಲ, ಸುನೀಲ್ ಹಲವಾಯಿ, ಪ್ರತಿಭಾ ಕಳ್ಳಿಮಠ ಒಳಗೊಂಡಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಎಂ.ವಾಯ್.ಮೆಣಸಿನಕಾಯಿ ನಿರ್ವಹಿಸಿದರು.
ವರದಿ : ಆಕಾಶ್ ಅರವಿಂದ ಥಬಾಜ