ಸ್ವಂತ ಮನೆಯಿಲ್ಲದೇ ಮರಣಹೊಂದುತ್ತಿರುವ ಬಡಜನರು.!
ಬೆಳಗಾವಿ: ಜಿಲ್ಲೆಯ ರಾಮದುರ್ಗ ನಗರ ನಿವಾಸಿಯಾದ ಮಹಾದೇವ ಭಜಂತ್ರಿ ಸಾಮಾನ್ಯರಲ್ಲಿಯೇ ಸಾಮಾನ್ಯ ಮನುಷ್ಯ. ಆದರೆ ನೈಜ ಸಾಮಾನ್ಯರಾದ ಮನೆರಹಿತ ಬಡಜನರಿಗೆ ರಾಮದುರ್ಗ ಪುರಸಭೆಯ ವತಿಯಿಂದ ಬಂದ ಸರಕಾರಿ ಯೋಜನೆಗಳ ಮುಖಾಂತರ ನಿವೇಶನ ಸೂರು ಒದಗಿಸುವ ಬಗ್ಗೆ ಅರ್ಜಿ ಸಲ್ಲಿಸುತ್ತ, ಕಛೇರಿಗಳಿಗೆ ಅಲೆಯುತ್ತ. ಹೋರಾಟ ಮಾಡುತ್ತ, ಉಪವಾಸ ಸರದಿ ಸತ್ಯಾಗ್ರಹ ಮಾಡುತ್ತಲೇ ಇದ್ದಾರೆ.
ಆದರೆ ಭ್ರಷ್ಟ ರಾಜಕೀಯ ಮುಖಂಡರಿಂದ ಈ ಮಹಾದೇವ ಭಜಂತ್ರಿ ಹಾಗೂ ಬಡಜನರ ಆಶೋತ್ತರ ನೈಜ ರೂಪದಲ್ಲಿ ಈಡೇರಿಲ್ಲ. ದುಷ್ಟ ಮತ್ತು ಪಕ್ಕಾ ಸ್ವಾರ್ಥಿಗಳಾದ. ಶ್ರೀಮಂತರು ಹಾಗೂ ಬಡವರ ಕಷ್ಟಗಳ ಬಗ್ಗೆಕಿಂಚಿತ್ತ ಗೊತ್ತಿರದ ಮಬ್ಬು ರಾಜಕಾರಣಿಗಳು ರಾಮದುರ್ಗ ಪುರಸಭೆಗೆ ಮೊದಲಿನಿಂದಲೂ ಚುನಾವಣೆಯಲ್ಲಿ ಆಯ್ಕೆಯಾಗಿ ಪದೇ ಪದೇ ಬಂದು ವಕ್ಕರಿಸಿಕೊಳ್ಳುತ್ತಿರುವ ಕಾರಣ ಈ ಮಹಾದೇವ ಭಜಂತ್ರಿಯಂತವರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ.
ಮಹಾದೇವ ಭಜಂತ್ರಿ ಅವರು ಮನೆರಹಿತರಿಗೆ ಮನೆಯ ಅನುಕೂಲ ಕಲ್ಪಿಸುವ ಬಗ್ಗೆ ಬಹಳಷ್ಟು ಜನರು ಮಹಿಳೆಯರನ್ನು ಕರೆದುಕೊಂಡು ನೂರಾರು ಬಾರಿ ಶಾಸಕರಿಗೆ ಹಾಗೂ ಅಧಿಕಾರಿಗಳನ್ನು ಭೆಟ್ಟಿಯಾಗಿ ಮನವಿ ಮಾಡಿಕೊಂಡರು ಏನು ಪ್ರಯೋಜನ ಆಗುತ್ತಿಲ್ಲ.
ಬಡಜನರು, ಮಹಿಳೆಯರು ಬಹಳಷ್ಟು ಜನರು ಹೀಗೆ ಹೋರಾಟ ಮಾಡುತ್ತಲೇ. ಮನೆ.. ಮನೆ.. ಎನ್ನುತ್ತಾ.. ಸತ್ತೇ ಹೋದರು!ಇನ್ನು ಮುಂದಾದರೂ ನಮಗೆ ಮನೆ ಕಟ್ಟಿಸಿ ಕೊಡಲು ನೀವಾದರೂ ಸಂಬಂಧಪಟ್ಟವರಿಗೆ ಹೇಳಿರಿಯಪ್ಪಾ ಎಂದು ಅಲ್ಲಿ ನೆರೆದ ಮುಗ್ದ ಬಡಜನರು ಮಾಧ್ಯಮಯೊಂದರ ಮುಖಾಂತರ ಒತ್ತಾಯಿಸಿದರು.
ಪಾಪ.. ಏನ್ ಮಾಡೋದ್.. ರೀ.. ಈ ದುಷ್ಟ ಕಾಲದಾಗ ಬಡವರ ಆಸರೆಗೆ ಯಾರು ಬರುತ್ತಾರೆ. ಎಲ್ಲಾ ಕೀಳು ದುಷ್ಟ ಅಧಿಕಾರದಾಹಿ ರಾಜಕೀಯದ ವಿಷವರ್ತುಲದಲ್ಲಿ ನ್ಯಾಯವಾದ ಸೌಲಭ್ಯಗಳು ಅರ್ಹರಿಗೆ ಸಿಗೋದು ಬಹಳ ಕಡಿಮೆಯೇ ಅಲ್ಲವೇ..!!!!?
ಇನ್ನಾದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅವರ ಸಮಸ್ಯಗಳಿಗೆ ಸ್ಪಂದಿಸುವರೆ ಎಂದು ಕಾದು ನೋಡಬೇಕಾಗಿದೆ.
ವರದಿ:ಸೋಮಶೇಖರ ವೀ. ಸೊಗಲದ.ರಾಮದುರ್ಗ