ರೈತರ ಏಳಿಗೆಯೇ ನನ್ನ ಗುರಿ, ಕೃಷಿಯೇ ನನ್ನ ಧರ್ಮ ಎಂದ ರೈತ ಹೋರಾಟಗಾರ ʼಮಹಾಂತೇಶ ಮತ್ತಿಕೊಪ್ಪʼ
ವರದಿ: ♦ಉಮೇಶ ಗೌರಿ, (ಯರಡಾಲ)
ಬೆವರು ಬಸಿದು ಇಡೀ ನಾಡಿಗೆ ಸಿಹಿ ಉಣಿಸುವ ಬೈಲಹೊಂಗಲ ಭಾಗದ ಕಬ್ಬು ಬೆಳೆಗಾರರು ಈಗ ‘ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ’ಯ ಆಡಳಿತ ಮಂಡಳಿಯ ಚುನಾವಣೆಯತ್ತ ಚಿತ್ತ ಹರಿಸಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಗಾಗಿ ‘ಬಾಳೇಕುಂದರಗಿ ಸಹಕಾರಿ’ ಪೆನೆಲ್, ‘ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರಿ’ ಪೆನೆಲ್ ಮತ್ತು ‘ಕಿಸಾನ್ ಸಹಕಾರಿ’ ಪೆನೆಲ್‌ಗಳ ಮಧ್ಯೆ ಭಾರೀ ತುರುಸಿನ ಜಿದ್ದಾಜಿದ್ದಿ ಆರಂಭವಾಗಿದೆ.
ʼರೈತರ ಅಭಿವೃದ್ಧಿಯೇ ಧರ್ಮʼ ಎಂದು ನಂಬಿ ಮೊಟ್ಟ ಮೊದಲ ಬಾರಿಗೆ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಧುಮುಕಿರುವ ರೈತ ಪರ ಹೋರಾಟಗಾರ, ದೇಸಿ ವ್ಯವಸಾಯ ಪ್ರೇಮಿ, ವೃತ್ತಿಪರ ವಕೀಲರು ಆಗಿರುವ ʼಮಹಾಂತೇಶ ವೀರಪ್ಪ ಮತ್ತಿಕೊಪ್ಪʼ ಅವರು ಕಾರ್ಖಾನೆಯ ಶ್ರೇಯೋಭಿವೃದ್ಧಿಯ ಕನಸು ಕಂಡಿದ್ದಾರೆ.
“ನಮ್ಮ ರೈತರು ಬೆವರು ಸುರಿಸಿ ಬೆಳೆದ ಕಬ್ಬು ಅವರ ಬದುಕಿಗೂ ಸಿಹಿ ಉಣಿಸಬೇಕು” ಜೊತೆಗೆ ಕಾರ್ಖಾನೆ ಮತ್ತು ಕಾರ್ಮಿಕ ವರ್ಗ ಅಭಿವೃದ್ಧಿಯ ಪಥದಲ್ಲಿರಬೇಕು ಎನ್ನುವ ಸದಾಶಯ ಮತ್ತು ದಿಟ್ಟ ನಿಲುವಿನೊಂದಿಗೆ ʼಮಹಾಂತೇಶ ಮತ್ತಿಕೊಪ್ಪʼ ಅವರು ರೈತರ ಏಳಿಗೆ ಬಯಸಿ ʼಬಾಳೇಕುಂದರಗಿ ಸಹಕಾರಿ ಪೆನೆಲ್ʼ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ! “ಪ್ರೆಶರ್ ಕುಕ್ಕರ್” ಚಿಹ್ನೆಯೊಂದಿಗೆ ʼಕಬ್ಬು ಬೆಳೆಗಾರರ ಅ ವರ್ಗʼದಿಂದ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ “ಮಹಾಂತೇಶ ಮತ್ತಿಕೊಪ್ಪ” ಅವರು ಸೋಮೇಶ್ವರ ಕಾರ್ಖಾನೆಯ ರೈತ ಬಂಧುಗಳಲ್ಲಿ ಗೆಲುವಿಗಾಗಿ ವಿನಯತೆಯೊಂದಿಗೆ ಮತಯಾಚಿಸಿದ್ದಾರೆ. ಇನ್ನು ಈ ಸೋಮೇಶ್ವರ ಕಾರ್ಖಾನೆಯನ್ನು ಸ್ಥಾಪಿಸಿದ ಬೈಲಹೊಂಗಲದ ದಿವಂಗತ ಮಾಜಿ ಶಾಸಕ ಮತ್ತು ಸಹಕಾರಿ ಧುರೀಣ ಎಂದೇ ಹೆಸರಾಗಿದ್ದ ರಮೇಶ ಬಾಳೇಕುಂದರಗಿ ಅವರ ಹೆಸರಿನ ಪೆನೆಲ್‌ನಲ್ಲಿಯೇ ಮತ್ತಿಕೊಪ್ಪ ಅವರು ಸ್ಪರ್ಧೆಗೆ ಇಳಿದಿರುವುದು ವಿಶೇ಼ಷ!
ರವಿವಾರ ʼಸೆಪ್ಟೆಂಬರ್ 10ʼ ರಂದು ಎಂದರೆ ʼನಾಳೆಯೇʼ ಕಾರ್ಖಾನೆಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ “ನನ್ನನ್ನು ನಾನು ಎಷ್ಟು ನಂಬುತ್ತೇನೆಯೋ ಅಷ್ಟೇ ಕಾರ್ಖಾನೆಯ ಅಭಿವೃದ್ಧಿಯನ್ನೂ ನಂಬಿ ರೈತ ಬಂಧುಗಳ ಪರವಾಗಿ ನಿಲ್ಲುತ್ತೇನೆ” ಎಂದು ಶಪಥಗೈದಿರುವ ʼಮಹಾಂತೇಶ ಮತ್ತಿಕೊಪ್ಪʼ ಕಾರ್ಖಾನೆಯ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ರೈತ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು ಮತ್ತಿಕೊಪ್ಪ ಕೃಷಿ ಪ್ರಕ್ರಿಯೆ, ಮಾರುಕಟ್ಟೆಯ ಪೈಪೋಟಿ, ರೈತರ ಏಳುಬೀಳು ಅರಿತಿರುವ ʼಮಹಾಂತೇಶ ಮತ್ತಿಕೊಪ್ಪʼ ಅವರು ವಕೀಲಿ ವೃತ್ತಿಯ ಮೂಲಕವೂ ಅಪಾರ ಕಾನೂನು ಜ್ಞಾನ ಹೊಂದಿದ್ದಾರೆ. ಇದರಾಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲೆಯಾದ್ಯಂತ ಹೆಸರಾಗಿ, ರಾಜ್ಯ, ರಾಷ್ಟ್ರ ಮಟ್ಟದ ನಾಯಕರ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರು, ರೈತಪರ ಸಂಘಟನೆಗಳ ಮುಖಂಡರ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದಾರೆ. ಶಿಕ್ಷಣ, ಕಾನೂನು, ರಾಜಕೀಯ ಅರಿತಿರುವ ʼಮಹಾಂತೇಶ ಮತ್ತಿಕೊಪ್ಪʼ ಅವರು ಇವುಗಳೆಲ್ಲದರ ಸಹಾಯ ಮತ್ತು ಶಕ್ತಿಯನ್ನು ಬಳಸಿಕೊಂಡು ರೈತರ, ರ್ಖಾನೆಯ ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಪಣತೊಟ್ಟಿದ್ದಾರೆ!
ʼರೈತ ಬಾಂಧವರೇ, ನಿಮ್ಮ ಕನಸುಗಳ ಈಡೇರಿಕೆಯೇ ನನ್ನ ಮೊದಲ ಗುರಿʼ ಎಂದು ʼಪ್ರೆಶರ್ ಕುಕ್ಕರ್ʼ ಚಿಹ್ನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿರುವ ಮಹಾಂತೇಶ ಮತ್ತಿಕೊಪ್ಪ ಅವರು ನನ್ನನ್ನು ಗೆಲ್ಲಿಸಿರಿ, ಸೋಮೇಶ್ವರ ಕಾರ್ಖಾನೆಯ ಉಳಿವಿಗಾಗಿ ʼಬಾಳೇಕುಂದರಗಿ ಸಹಕಾರಿʼ ಪೆನೆಲ್‌ನ್ನು ಬೆಂಬಲಿಸಿರಿ ಎಂದು ರೈತ ಪ್ರಭುಗಳಲ್ಲಿ ವಿನಂತಿಸುತ್ತಿದ್ದಾರೆ!