ಗ್ರಾಮೀಣ ಪ್ರದೇಶದಲ್ಲಿ ಲಘು ವಿಮಾನ ಹಾರಾಟ ಗಾಬರಿಗೊಂಡ ಜನತೆ

ಉಮೇಶ ಗೌರಿ (ಯರಡಾಲ)

ಗಂಗಾವತಿ: ಇಂದು ಬೆಳಗಿನ ಜಾವ ಲಘು ವಿಮಾನ ಸುಮಾರು ಭಾರಿ ಗಂಗಾವತಿ ತಾಲೂಕಿನಾದ್ಯಂತ ಹಾರಾಟ ನಡೆಸಿದ್ದು ಇದರಿಂದ ಜನರು ಗಾಬರಿಗೊಂಡು ತಾಲೂಕ ಆಡಳಿತದ ಹಾಗೂ ಪೊಲೀಸ್ ಇಲಾಖೆಗೆ ಫೋನ ಮಾಡಿ ಮಾಹಿತಿಯನ್ನು ಕೇಳುತ್ತಿದ್ದಾರೆ.

ಕಳೆದ ತಿಂಗಳಿನಲ್ಲಿಯೋ ಸಹ ಲಘುವಿಮಾನ ಹಾರಾಟ ನಡೆಸಿದ್ದು ಇದು ಎರಡನೇ ಭಾರಿಯಾಗಿದೆ ಪದೇ ಪದೇ ವಿಮಾನ ಹಾರಾಟ ನಡೆಸಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ವಿಮಾನ ಹಾರಾಟದ ಕುರಿತು ಗಂಗಾವತಿ ತಹಸೀಲ್ದಾರ್ ಮಂಜುನಾಥ ಸ್ವಾಮಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸರ್ವೇ ಇಲಾಖೆಯವರು ರಾಜ್ಯದಾದ್ಯಂತ ರಸ್ತೆಗಳನ್ನು ಲಘುವಿಮಾನದ ಮೂಲಕ ಸರ್ವೇ ಮಾಡಿ ದಾಖಲಾತಿ ಸಿದ್ದಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಜನರು ನಿಷ್ಕಾಳಜಿಯಿಂದಾ ತಿರುಗಾಡುತ್ತಿದ್ದಾರೆ.

 

Share This Article
";