ಬೆಳಗಾವಿ : ಮೂರು ವರ್ಷದ ಎಲ್ ಎಲ್ ಬಿ ಕೊರ್ಸ ಅಂತಿಮ ಫಲಿತಾಂಶ ಬಂದಿದ್ದು 10 ರಾಂಕಗಳಲ್ಲಿ ಬೆಂಗಳೂರು ಮಹಾನಗರ ಬಿಟ್ಟು ರಾಜ್ಯದ ಬೆಳಗಾವಿ ಜಿಲ್ಲೆಗೆ ಏಕೈಕ ನಾಲ್ಕನೆ ರಾಂಕ್ ಬಂದಿದ್ದು ಅದು ಬೈಲಹೊಂಗಲದ ಹಿರಿಯ ವಕೀಲರಾದ ಎಮ್. ವಾಯ್. ಸೋಮಣ್ಣವರ ಪುತ್ರಿ ಬೆಳಗಾವಿ ಆರ್. ಎಲ್. ಎಸ್. ಲಾ ಕಾಲೇಜು ವಿದ್ಯಾರ್ಥಿನಿ ಕು.ಮೇಘಾ ಮಲ್ಲಿಕಾರ್ಜುನ ಸೋಮಣ್ಣವರ ಮೂರು ವರ್ಷದ ಎಲ್ ಎಲ್ ಬಿ ಕೊರ್ಸನಲ್ಲಿ ನಾಲ್ಕನೆ ರಾಂಕ್ ಪಡೆಯುವ ಮೂಲಕ ಕಾನೂನು ಪದವಿ ಆಯ್ಕೆ ಮಾಡಿಕೊಳ್ಳುವ ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ.
ರಾಂಕ್ ಪಡೆದ ವಿಷಯ ತಿಳಿದ ಪಾಲಕರಾದ ಎಮ್ ವಾಯ್.ಸೋಮಣ್ಣವರ, ತಾಯಿ ಸುಮತಿ, ಸಹೋದರ ಚಾಣಕ್ಯ ಸಂಬಂಧಿಗಳಾದ ಭೂಮಿಕಾ, ಭವ್ಯಶ್ರೀ ಸಿದ್ದನಗೌಡರ ಸಿಹಿ ತಿನಿಸುವ ಮೂಲಕ ಸಂಬೃಮ ಹಂಚಿಂಕೊಂಡರು. ಬೈಲಹೊಂಗಲ ನಾಡು ಅನೇಕ ಹೋರಾಟಗಳಿಗೆ ಹೆಸರಾಗಿದ್ದು ಇಂದು ಶಿಕ್ಷಣ ಕ್ಷೆತ್ರದಲ್ಲಿ ಅದರಲ್ಲು ಕಾನೂನು ಪದವಿಯಲ್ಲಿ ನಾಡಿಗೆ ಪ್ರಥಮ ಬಾರಿಗೆ ರಾಂಕ್ ಬಂದಿದ್ದು ಈ ಭಾಗದ ವಕೀಲರಿಗೆ ಸಂತೋಷವಾಗಿದೆ. ವಾರ್ಷಿಕ 10 ರಾಂಕ್ ಗಳಲ್ಲಿ ಬೆಂಗಳೂರು ನಗರಕ್ಕೆ 9ರಾಂಕ್ ಸೀಮಿತವಾದರೆ ಬೆಂಗಳೂರು ಹೊರತುಪಡಿಸಿ ಉಳಿದ ಒಟ್ಟು ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆಯ ಅರ್.ಎಲ್.ಎಸ್.ಲಾ ಕಾಲೇಜು ವಿದ್ಯಾರ್ಥಿನಿ ಮೇಘಾ ಕಾನೂನು ಪದವಿಯಲ್ಲಿ ಒಬ್ಬಳೆ ಒಬ್ಬಳು ನಾಲ್ಕನೆ ರಾಂಕ್ ಪಡೆದಿರುವದು ಆವಳ ಪ್ರತಿಭೆಗೆ ಸಂದ ಗೌರವವಾಗಿದೆ ಎಂದು ಶಿಕ್ಷಣ ಪ್ರೇಮಿಗಳು ಕೊಂಡಾಡಿದ್ದಾರೆ. ಬಾಲ್ಯದಿಂದಲು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಮೇಘಾ ಸೊಮಣ್ಣವರ ಈ ಸಾಧನೆಗೆ ಕಾಲೇಜು ಸಿಬ್ಬಂದಿ, ಉಪನ್ಯಾಸಕರು, ಆಡಳಿತ ಮಂಡಳಿ ಹಾಗೂ ಕುಟುಂಬ ಹಿತೈಸಿಗಳು ಶುಭಹಾರೈಸಿದ್ದಾರೆ.
ಇತ್ತಿಚ್ಚಿಗೆ ವಕೀಲ ವೃತ್ತಿಗೆ ಬಾರಿ ಬೇಡಿಕೆ ಬಂದಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಉತ್ಸಹಕರಾಗುತ್ತಿದ್ದಾರೆ. ಈ ಮೊದಲು ಬಹಳಷ್ಟು ವಿದ್ಯಾರ್ಥಿಗಳು ಎಲ್ಲಾ ಪದವಿಗಳಲ್ಲಿ ಸ್ಥಾನ ಸಿಗದೆ ಇದ್ದಾಗ ಕಾನೂನು ಪದವಿಗೆ ಬರುವ ಇಚ್ಚೆ ವ್ಯಕ್ತ ಪಡಿಸುತಿದ್ದರು ಆದರೆ ಇಂದು ಕಾನೂನು ಕಾಲೇಜುಗಳಲ್ಲಿ ಪ್ರವೇಶ ಪಡೆಯುವರ ಸಂಖ್ಯೆ ಹೆಚ್ಚಾಗುತ್ತಿದೆ.
ನನ್ನ ಪ್ರಯತ್ನಕ್ಕೆ ಪ್ರಥಮ ಅಥವಾ ದ್ವಿತೀಯ ಸ್ಥಾನ ಬರಬಹುದು ಅನ್ನೊ ವಿಶ್ವಾಸವಿತ್ತು. ಆದರೂ ರಾಜ್ಯದ ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಿಯಾಗಿ ಎಲ್.ಎಲ್.ಬಿ ಯಲ್ಲಿ ನಾಲ್ಕನೆ ಸ್ಥಾನ ಬಂದಿರುವದು ಸಂತಸ ತಂದಿದೆ. ಹಾಗೂ ಬೈಲಹೊಂಗಲ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೋಳ್ಳಿ ರಾಯಣ್ಣನಂತವರ ಈ ಪುಣ್ಯ ಭೂಮಿಯಲ್ಲಿ ಶೂರತನದ ಜೋತೆಗೆ ವಿದ್ಯೆಯ ಪ್ರತೀಭೆಯು ಇದೆ. ಮುಂದೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಪ್ರಾರಂಭಿಸಲು ಆಸಕ್ತಿಯಾಲ್ಲಿದ್ದು ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಆಸೆ ಇದೆ
ಮೇಘಾ ಮಲ್ಲಿಕಾರ್ಜುನ ಸೋಮಣ್ಣವರ
ಕಾನೂನು ಪದವಿಯಲ್ಲಿ ನಾಲ್ಕನೆ ಸ್ಥಾನ ಪಡೆದ ವಿದ್ಯಾರ್ಥಿನಿ.