“ನಮ್ಮ ನಡೆ ಗ್ರಾಮದ ಕಡೆ” ಕಾಂಗ್ರೆಸ್ ಪಕ್ಷ 2023ಕ್ಕೆ ಅಧಿಕಾರಕ್ಕೆ ಬಂದೆ ಬರುತ್ತೆ : ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್.

ಚಿಕ್ಕಬಳ್ಳಾಪುರ : ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ ನೀಡಿರುವ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಕಳೆದ 7 ವರ್ಷಗಳಲ್ಲಿ ಪಕ್ಷಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಸ್ವಲ್ಪ ಹಿನ್ನಡೆ ಆಗಿರಬಹುದು, ಅದೇ ಅಂತಿಮವಲ್ಲ.

ಮುಂದಿನ ದಿನಗಳಲ್ಲಿ ಖಂಡಿತವಾಗಿ ನಮ್ಮ ಪಕ್ಷ ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಈ ದಿಸೆಯಲ್ಲಿ ನಾವು ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ದಿನಕ್ಕೊಂದು ಗ್ರಾಮಕ್ಕೆ ಭೇಟಿ “ನಮ್ಮ ನಡೆ ಗ್ರಾಮದ ಕಡೆ” ಎಂಬ ಕಾರ್ಯಕ್ರಮ ಹಮ್ಮಿಕೊಂಡು ದಿನಕ್ಕೊಂದು ಗ್ರಾಮಕ್ಕೆ ಬೇಟಿ ಕೊಟ್ಟು ಅಲ್ಲಿರುವ ಜನರ ಕಷ್ಟಗಳಿಗೆ ಕೈಲಾದಷ್ಟು ಸಹಾಯದ ಹಸ್ತ ಮಾಡುತ್ತಿರುವ ಜಿಎಚ್ ಫೌಂಡೆಶನ್, ಮೈಲಪ್ಪನಹಳ್ಳಿ ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ, ಯಾರ ಮೇಲೆ ಯಾರಿಗೂ ವಿಶ್ವಾಸವಿಲ್ಲ ಎಂಬುದು ವಿರೋಧಿಗಳ ಹೇಳಿಕೆಯಾಗಿದ್ದು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಎಲ್ಲಾ ವಿಚಾರಗಳು ಮತದಾರರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ. 2023ಕ್ಕೆ ಖಂಡಿತವಾಗಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರಲಿದೆ. ಕ್ಷೇತ್ರದ ಜನತೆ ಈ ವಿಚಾರದಲ್ಲಿ ನನಗೆ ಆಶೀರ್ವಾಧ ಮಾಡಬೇಕು ಎಂದು ಮನವಿ ಮಾಡಿದರು.

ನಾನು ಮೂಲತಃ ಉದ್ಯಮಿಯಾಗಿದ್ದು ಭಗವಂತ ಎಲ್ಲವನ್ನೂ ನೀಡಿದ್ದಾನೆ. ನಾನು ಹಣ ಮಾಡಲು ರಾಜಕಾರಣಕ್ಕೆ ಬಂದವನಲ್ಲ ಬದಲಿಗೆ ಜನಸೇವೆ ಸಲ್ಲಿಸುವ ಪ್ರಾಮಾಣಿಕ ಸಂಕಲ್ಪದಿಂದ ಬಂದಿದ್ದೇನೆ. ಇದಕ್ಕೆ ರಾಜಕೀಯದ ಬಲವಿದ್ದರೆ ಹೆಚ್ಚಿನ ಕೆಲಸ ಮಾಡಬಹುದು. ನಗರದಲ್ಲಿ ಉಚಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವುದು ನನ್ನ ಕನಸಾಗಿದೆ. ಇದಕ್ಕೆ ಭಗವಂತ ಆದಷ್ಟು ಬೇಗ ಸಮಯ ನೀಡಲಿ ಎಂದರು.

ಸುಧಾಕರ್ ಅಭಿವೃದ್ದಿಯ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದು ಉತ್ತಮ ರಾಜಕಾರಣಿಯ ಕೆಲಸವಲ್ಲ. ಜನಸೇವೆ ಮಾಡಲು ಬಂದ ಯಾರೇ ಆಗಲಿ ಚುನಾವಣೆಯಲ್ಲಿ ವಿಜಯ ಸಾಧಿಸಿದ ಮೇಲೆ ಎಲ್ಲರನ್ನೂ ಸಮಭಾವದಿಂದ ಕಾಣಬೇಕು. ಅದನ್ನು ಬಿಟ್ಟು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಬಿಜೆಪಿ ಪಕ್ಷದ ಬೆಂಬಲಿತರಿಗೆ ಹೆಚ್ಚಿನ ಅನುಧಾನ ಉಳಿದವರಿಗೆ ಕಡಿಮೆ ಮಾಡುವುದು ಬಿಡಬೇಕು ಎಂದು ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮುನಿರಾಜು, ಶೇಖರಪ್ಪ, ಕಳವರ ಅರುಣ್, ಸಮೀವುಲ್ಲಾ, ಸತೀಶ್, ನಾಯನಹಳ್ಳಿ ನಾರಾಯಣಸ್ವಾಮಿ, ಮಂಜು ವೆಂಕಟೇಶ್, ರಾಮು ಹಾಗೂ ಮೈಲಪ್ಪನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು ಇದ್ದರು.

ವರದಿ: ಎ ಧನಂಜಯ್. ಚಿಕ್ಕಬಳ್ಳಾಪುರ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";