ಸುದ್ದಿ ಸದ್ದು ನ್ಯೂಸ್
ವರದಿ: ಬಸವರಾಜ ಚಿನಗುಡಿ ಕಿತ್ತೂರು
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇತ್ತಿಚೆಗೆ ನಿರ್ಮಾಣ ಮಾಡಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕಾಮಗಾರಿ ಮುಗಿದ ಬೆನ್ನಲ್ಲೇ ಚರಂಡಿ ಮೂಲಕ ನೀರು ಹರೆಯದೆ ರಸ್ತೆಯ ಮೇಲೆ ನಿಂತು ರಸ್ತೆಯು ಸಹ ಹಾಳಾಗಿದೆ.
ಈ ಹಿನ್ನಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದರು ಸಹ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಗುತ್ತಿಗೆದಾರ ಚರಂಡಿ ನಿರ್ಮಾಣ ಮಾಡಿ ಚರಂಡಿ ಸುತ್ತಲು ಮಣ್ಣು ಹಾಕದೆ ಅಲ್ಲಲ್ಲಿ ನೀರು ನಿಂತು ರಸ್ತೆಯಲ್ಲಿ ಸಂಚರಿಸಲು ಸಂಚಕಾರ ಬಂದೋದಗೆದೆ ಎಂದು ಪಟ್ಟಣದ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣ ಪಂಚಾಯತ ವ್ಯಾಪ್ತಿಯ ವಾರ್ಡ ನಂಬರ್ 7 ರಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಸುಮಾರು ಆರೇಳು ತಿಂಗಳು ಕಳೆದರು ಕಾಮಗಾರಿ ಮುಕ್ತಾಯ ಹಂತಕವನ್ನು ತಲುಪಿಲ್ಲ. ಕಾಮಗಾರಿ ಸಂಪೂರ್ಣ ಮಾಡದೆ ಅರ್ಧಕ್ಕೆ ನಿಲ್ಲಿಸಿ ರಸ್ತೆಯನ್ನು ಹಾಳು ಮಾಡಿ ರಸ್ತೆಯಲ್ಲಿ ಸಂಚಾರ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ದಿನಗಳಿಂದ ಕಾಮಗಾರಿ ಅರ್ಧಕ್ಕೆ ನಿಂತು ಈ ರಸ್ತೆಯಲ್ಲಿ ತಿರುಗಾಡುವ ಜನರು ಬೇಗನೆ ಚರಂಡಿ ಕಾಮಗಾರಿ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಇನ್ನಾದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಎಚ್ಚತ್ತೂಗೊಂಡು ಚರಂಡಿ ಕಾಮಗಾರಿಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಾರೇ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.