ಚನ್ನಮ್ಮನ ಕಿತ್ತೂರು: ಪ್ರತಿವರ್ಷ ಪದ್ದತಿಯಂತಿ ಈ ವರ್ಷ ಕೂಡಾ ಉತ್ತರ ಕರ್ನಾಟಕದ ನಾಡ ಹಬ್ಬ ಎಂದು ಪ್ರಸಿದ್ದವಾದ ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಅತಿ ವಿಜ್ರಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ.
ಪ್ರವಾಹ ಮತ್ತು ಕೋವಿಡ್-19 ಕಾರಣದಿಂದ ನೇಪಥ್ಯಕ್ಕೆ ಸರಿದಿದ್ದ ಕಿತ್ತೂರು ಉತ್ಸವ 25 ನೇ ಬೆಳ್ಳಿಹಬ್ಬ ವರ್ಷಾಚರಣೆ ಘಟ್ಟದಲ್ಲಿ ಈ ವರ್ಷ ಅದ್ದೂರಿಯಾಗಿ ಜರುಗುವ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ. ಜಿಲ್ಲಾ ಹಂತಕ್ಕೆ ಸೀಮಿತವಾಗಿರುವ ಕಿತ್ತೂರು ಉತ್ಸವ ಇಂದು ರಾಜ್ಯ ಹಂತಕ್ಕೆ ಬೆಳೆದು ನಿಂತಿರುವುದು ಕಿತ್ತೂರು ಸಂಸ್ಥಾನದ ಮತ್ತು ಉತ್ತರ ಕರ್ನಾಟಕ ನಾಡಿನ ಜನರ ಹಿರಿಮೆ ಗರಿಮೆ.
ಇದೆ ತಿಂಗಳು 23 ಮತ್ತು 24 ರಂದು ಜರುಗುವ ಕಿತ್ತೂರು ಉತ್ಸವಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದಿಯ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಬೃಹತ್ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ, ಮುಜರಾಯಿ ಹಾಗೂ ವಕ್ಪ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಇಂದನ ಮತ್ತು ಸಂಸ್ಕೃತಿ ಖಾತೆ ಸಚಿವ ಸುನೀಲಕುಮಾರ ಸೇರಿದಂದೆ ಉಬಯ ಸರ್ಕಾರಗಳ ಅನೇಕ ಸಚಿವರು, ಸಂಸದರು, ಶಾಸಕರು ಕಿತ್ತೂರು ಉತ್ಸವ ಬೆಳ್ಳಿಹಬ್ಬದ ವರ್ಷಾಚರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ನಾಡ ಹಬ್ಬವೆಂದೆ ಪ್ರಚಲಿತ ಇರುವ ಕಿತ್ತೂರು ಉತ್ಸವಕ್ಕೆ ನಾಡ ದೊರೆಗಳು ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ನಾಡಿಗೆ ಏನು ಕೊಡುತ್ತಾರೆ ಎಂದು ನಾಡಿನ ಜನರು ಮತ್ತು ರಾಣಿ ಚನ್ನಮ್ಮನ ಅಭಿಮಾನಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಭಾಗದ ಹಲವಾರು ದಿನಗಳ ಬೇಡಿಕೆ ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು. ಕಿತ್ತೂರು ಪ್ರಾಧಿಕಾರದ ಅಭಿವೃದ್ಧಿದಾಯಕ ಚಟುವಟಿಕೆಗಳಿಗೆ ಸ್ಥಳದ ಅಭಾವದ ಕೊರತೆ ಇದೆ ಜೊತೆಗೆ ಥ್ಯಾಕರೆ ಸಮಾಧಿ, ರಾಣಿ ರುದ್ರಮ್ಮಳ ಸಮಾಧಿ, ದೊರೆ ಮಲ್ಲಸರ್ಜ ದೇಸಾಯಿ ಸಮಾಧಿ ಸೇರಿದಂತೆ ಇನ್ನೂ ಅನೇಕರ ಸಮಾಧಿಗಳು ಅವಸಾನದ ಅಂಚಿನಲ್ಲಿವೆ ಅವುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರಾ ಎಂಬ ವಿವೇಚನೆಯಲ್ಲಿ ಈ ಭಾಗದ ನಾಗರಿಕರು ಇದ್ದಾರೆ.
ಕೇಂದ್ರದ ಪ್ರಭಾವಿ ಸಚಿವರು ಗಂಡು ಮೆಟ್ಟಿನ ನಾಡಿನ ಹುಬ್ಬಳ್ಳಿಯ ಪ್ರಲ್ಹಾದ ಜೋಶಿಯವರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ಕೇಂದ್ರ ಸರ್ಕಾರದ ಯಾವುದಾದರೂ ಬೃಹತ್ ಯೋಜನೆಯನ್ನು ಕಿತ್ತೂರು ನಾಡಿಗೆ ತರುವರೇ,ಎಂಬ ಕುತೂಹಲ ಕಿತ್ತೂರು ನಾಡಿನ ಜನರಲ್ಲಿ ಮನೆ ಮಾಡಿದೆ.ಜೊತೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕಿತ್ತೂರು ಉತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದು ಈ ಸಂದರ್ಭದಲ್ಲಿ ಅವರು ನಮ್ಮ ನಾಡಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವ ಪ್ರಯತ್ನ ಮಾಡುವರೆ ಎಂಬ ಕುತೂಹಲ ಕೆರಳಿಸಿದೆ.
ಇವರೆಲ್ಲರ ಜೊತೆಗೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಬೆಳಗಾವಿ ಜಿಲ್ಲೆ ಮತ್ತು ಐತಿಹಾಸಿಕ ಕಿತ್ತೂರು ತಾಲೂಕಿನ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ಏನಾದರೂ ಹೊಸದೊಂದು ಯೋಜನೆಯನ್ನು ಕೊಟ್ಟಾರೆ ಕಿತ್ತೂರು ಮತ್ತಷ್ಟು ಪ್ರಸಿದ್ದಿಹೊಂದಿತೆ ಎಂದು ಕಿತ್ತೂರು ನಾಡಿನ ಜನರು ಕಾಯ್ದು ನೋಡುತ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಸಹ ಕಿತ್ತೂರು ಉತ್ಸವದ ಉದ್ಘಾಟನೆಗೆ ಆಗಮಿಸುತ್ತಿರುವ ಕಾರಣ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್ನಲ್ಲಿ ಘೋಷಿಸಿದಂತೆ ಎರಡು ನೂರು ಕೋಟಿ ರೂಪಾಯಿಗಳನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುವರು ಇದರ ಜೊತೆಗೆ ಮತ್ತಷ್ಟು ಏನಾದರೂ ಯೋಜನೆಗಳನ್ನು ಕಿತ್ತೂರು ತಾಲೂಕಿಗೆ ಕೊಟ್ಟರೆ ವಿಶೇಷವಾಗಿ ಕಿತ್ತೂರು ತಾಲೂಕಿಗೆ ಅಳಿದುಳಿದ ಸರಕಾರಿ ಕಚೇರಿಗಳು ಬಂದಾವೆ ಎಂಬ ನಿರೀಕ್ಷೆ ಜನರಲ್ಲಿ ಮನೆ ಮಾಡಿದೆ
ಕಿತ್ತೂರು ರಾಣಿ ಚನ್ನಮ್ಮನ ಉತ್ಸವಕ್ಕೆ ಯಾರೆ ಬಂದರು ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಡನಂಬಿಕೆ ರಾಜಕೀಯ ವಲಯದಲ್ಲಿ ಇದ್ದರು ಅದನ್ನು ಹೋಗಲಾಡಿಸಲೆಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಉತ್ಸವದ ಉದ್ಘಾಟನೆಗೆ ಆಗಮಿಸುತ್ತಿರುವುದು ಕಿತ್ತೂರು ನಾಡಿನ ಜನರಲ್ಲಿ ಹರ್ಷ ತಂದಿದೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್ನಲ್ಲಿ ಘೋಷಿಸಿದಂತೆ ರೂಪಾಯಿ ೨ ನೂರು ಕೋಟಿ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುವುದರ ಜೊತೆಗೆ ಕಿತ್ತೂರು ನಾಡು ಮತ್ತು ರಾಣಿ ಚನ್ನಮ್ಮನ ಮೇಲೆ ಅಪಾರ ಅಭಿಮಾನ ಹೊಂದಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ತಾಲೂಕಿಗೆ ಮತ್ತಷ್ಟು ಏನಾದರೂ ಜನಪರ ಯೋಜನೆಗಳನ್ನು ಕೊಟ್ಟರೆ ಎಂದು ನಾಡಿನ ಅಭಿಮಾನಿಗಳು ಕಾಯುತ್ತಿದ್ದಾರೆ. ವಿಶೇಷವಾಗಿ ಕಿತ್ತೂರು ತಾಲೂಕಿಗೆ ಅಳಿದುಳಿದ ಸರಕಾರಿ ಕಚೇರಿಗಳು ಬಂದಾವೆ ಎಂಬ ನಿರೀಕ್ಷೆ ಜನರಲ್ಲಿ ಮನೆ ಮಾಡಿದೆ.
ವರದಿ: ಬಸವರಾಜ ಚಿನಗುಡಿ
ಚನ್ನಮ್ಮನ ಕಿತ್ತೂರು
ಮೋಬೈಲ್ ನಂ: 9008869423