“ಮಾಡಿದನೆಂಬುದು ಮನದಲ್ಲಿ ಹೊಳದರೆ ಏಡಿಸಿ ಕಾಡಿತ್ತು ಶಿವನ ಡಂಗುರ, ಮಾಡಿದೆನೆಂಬುದು ಮನದಲಿಲ್ಲದಿದ್ದರೆ ಬೇಡಿದ್ದನೀವ ಕೂಡಲಸಂಗಮದೇವ” ಎಂಬ ವಚನಕಾರರ ನುಡಿಮುತ್ತಿನಂತೆ ಬದುಕಿ ಪರೋಪಕಾರಕ್ಕಾಗಿ ಬಾಳಿದ ಕರ್ಮಯೋಗಿ ಶ್ರಮಜೀವಿ ಭೂಮರಡ್ಡಿ ಬಸಪ್ಪನವರು. ರಾಯಚೂರು ಜಿಲ್ಲೆಯ ಬನ್ನಿಕೊಪ್ಪ ಎಂಬ ಗ್ರಾಮದಲ್ಲಿ ಶರಣ ವೆಂಕಟಪ್ಪ ಮತ್ತು ಶರಣೆ ತಂಗೆಮ್ಮನ್ನವರ ಉದರದಲ್ಲಿ 1885 ಮೇ 10 ರಂದು ಜನಸಿದ ಎರಡನೇಯ ಮಗನೆ ಬಸಪ್ಪನವರು. ಹುಟ್ಟೂರಿನಲ್ಲಿಯೆ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಇವರು ಲೆಕ್ಕಪತ್ರದಲ್ಲಿ ಬಹಳ ಜಾಣರಾಗಿದ್ದರು. ಹೆಚ್ಚಿನ ವಿದ್ಯಾಭ್ಯಾಸ ಮಡಲು ಆರ್ಥಿಕ ಮುಗ್ಗಟ್ಟು ಅವರ ಬಾಳಿಗೆ ಕೈಕೊಟ್ಟಿತು.
ಕವಲೂರಿನ ಶ್ರಿಮಂತರು ಕುಲಕರ್ಣಿಕೆ ಮತ್ತು ಗೌಡಿಕೆ ಮಾಡುವ ವಿರುಪಾಕ್ಷಗೌಡರಿಗೆ ಇವರ ಅಕ್ಕ ಬಸಮ್ಮಳನ್ನು ಕೊಡಲಾಗಿತ್ತು ಸ್ವಗ್ರಾಮದಲ್ಲಿ ಇದ್ದ ಇವನನ್ನು ಅಕ್ಕ ತನ್ನ ಮನೆಗೆ ಕರೆತಂದು ಮಾಮನ ಲೆಕ್ಕಪತ್ರ ಮತ್ತು ಕುಲಕರ್ಣಿಕೆಯನ್ನು ಮಾಡುತ್ತ ಸುಮಾರು ದಿನ ಅಕ್ಕನ ಮನೆಯಲ್ಲಿ ಕಳೆದರು. ನಂತರ ಕಾರಣಾಂತರದಿAದ ಮಾವನ ಮನೆ ತೊರೆದು ಬನ್ನಿಕೊಪ್ಪಕ್ಕೆ ಗಾಮಕ್ಕೆ ಹಿಂತುರಿಗಿ ಬಂದು ಎಣ್ಣೆ ಅಂಗಡಿಯಲ್ಲಿ ಒಂದರಲ್ಲಿ ಗುಮಾಸ್ತನಾಗಿ ಸೇರಿಕೊಂಡು ವ್ಯವಹಾರದ ಜ್ಞಾನವನವನು ಪಡೆದು ಸ್ವ ಕಿರಾಣಿ ಅಂಗಡಿ ಪ್ರಾರಂಭಿಸುವುದರ ಜೊತೆಗೆ ಆಯಾ ಸುಗ್ಗಿಯಲ್ಲಿ ಬರುವ ಹತ್ತಿ, ಕಾಳು,ಮೆನಸಿನಕಾಯಿ ಇತ್ಯಾದಿ ವಸ್ತುಗಳನ್ನು ಗ್ರಾಮೀಣ ಪ್ರದೇಶದ ರೈತರಿಂದ ಖರೀದಿಸಿ ದಲಾಲಿ ಅಂಗಡಿಗಳಲ್ಲಿ ಮಾರತೊಡಗಿದರು. ಇವರ ಪ್ರಾಮಣಿಕತೆ ಮತ್ತು ದಕ್ಷತೆಯನ್ನು ನೋಡಿ ಯರಾಸಿ ಮತ್ತು ತಿಮ್ಮಪ್ಪ ಎಂಬ ಶ್ರೀಮಂತರು ತಮ್ಮ ದಲಾಲಿ ಅಂಗಡಿಯಲ್ಲಿ ಖಜಾಂಚಿ ಕೆಲಸಕ್ಕೆ ತೆಗೆದುಕೊಂಡರು. ನಂತರ ಇವರ ಪ್ರಾಮಾಣಿಕ ಕಾಯಕಕ್ಕೆ ಮೆಚ್ಚಿ ಎರಡು ಅಣೆ ಪಾಲು ಕೊಟ್ಟು ಮಾಲಿಕನನ್ನಾಗಿ ಮಾಡಿಕೊಂಡರು. ಅದರಲ್ಲಿ ಪರಿಣಿತರಾಗಿ ಅನೇಕ ದಲಾಲಿ ಅಂಗಡಿಗಳಲ್ಲಿ ಪಾಲುದಾರರಾದರು.
ದಲಾಲಿ ಅಂಗಡಿಗೆ ಬರುವ ರೈತರು ಮತ್ತು ಉದ್ಯೋಗ ಮಾಡುತ್ತಿರು ದಲಾಲಿ ಅಂಗಡಿ ಮಾಲಿಕರಿಗೆ ಕುದುರೆ, ಕತ್ತೆ, ಎತ್ತಿನಗಾಡಿ ಸೇರಿದಂತೆ ಕಾಲುನಡುಗೆಯಲ್ಲಿ ವ್ಯಾಪಾರಕ್ಕೆ ಹೋಗಬೇಕಿತ್ತು ಇದನ್ನು ಅರಿತು ಬಸಪ್ಪನವರು ತಮ್ಮ ದಲಾಲಿ ಅಂಗಡಿಯ ಸ್ನೇಹಿತರೊಂದಿಗೆ ಪಾಲದಾರಿಕೆಯಲ್ಲಿ ಸಾರಿಗೆ ಕಂಪನಿ ಕಟ್ಟಿದರು 1917 ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಪ್ರಥವi ಬಾರಿಗೆ ಇಲಕಲ್ ಮತ್ತು ಬಾಗಲಕೋಟೆ ಮಾರ್ಗವಾಗಿ ಬಸ್ ಓಡಿಸಿದ ಕಿರ್ತಿಗೆ ಪಾತ್ರರಾದರು. ಅದರೆ ಅದರಿಂದ ಅವರಿಗೆ ಅಷ್ಟೇನು ಲಾಭ ಬರಲಿಲ್ಲ ಆದರೂ ಅವರು ಹಿಡಿದ ಕಲಸವನ್ನು ಬಿಡಲಿಲ್ಲ ಮತ್ತೋಂದು ಬಸ್ ಖರೀದಿಸಿ ಆಲಮಟ್ಟಿ, ಮುದ್ದೇಬಿಹಾಳ, ತಾಳಿಕೋಟಿ ಮಾರ್ಗವಾಗಿ ಒಡಾಡಿಸಲು ಪ್ರಾರಂಭ ಮಾಡಿದರು. 1919 ರಲ್ಲಿ ಬಸ್ ಒಡಾಟದ ಪರವಾಣಿಕೆಯನ್ನು ಬಂದ ಮಾಡಿದ ಕಾರಣ ಬಸ್ಸುಗಳ ಒಡಾಟವನ್ನು ಬಂದ ಮಾಡಬೇಕಾಯಿತು.
ನಂತರ 1920 ರಲ್ಲಿ ಬೀದರ ಜಿಲ್ಲೆಯಲ್ಲಿ ಆಳುತ್ತಿದ್ದ ಹೈದರಾಬಾದ ನಿಜಾಮ ಸರ್ಕಾರಕ್ಕೆ ಹಣ ತುಂಬಿ 5 ವರ್ಷದ ಅವಧಿಗೆ ಏಕಸ್ವಾಮ್ಯ ಪೂರ್ಣಾಧಿಕಾರ ಬರೆಯಿಸಿಕೊಂಡು “ಬಿ.ವ್ಹಿ. ಭೂಮರಡ್ಡಿ ಗ್ಯಾರೆಟೆಂಡ್ ಮೋಟಾರ್ ಸರ್ವೀಸ್’’ ಎಂಬ ಹೆಸರಿನ ಸಾರಿಗೆ ಕಂಪನಿ ಪ್ರಾರಂಭ ಮಾಡಿ ಹುಮ್ನಾಭಾದ, ಬಸವಕಲ್ಯಾಣ, ಬೀದರ, ಜಯರಾಬಾದಗಳಿಗೆ ಎರಡು ಬಸ್ ಬಿಡುತ್ತಾರೆ. ಬಸಪ್ಪನವರ ಪ್ರಾಮಾಣಿಕ ಪ್ರಯತ್ನದಿಂದ ಕಂಪನಿಗೆ ಲಾಭ ಪ್ರಾರಂಭವಾಗ ಹತ್ತಿತು. ಅವರು ಚಾಲಕರಿಗೆ ಮತ್ತು ನಿರ್ವಾಹಕರಿಗೆ ದುಡಿಮೆ ಎನ್ನು ರಾಜಮಾರ್ಗದಲ್ಲಿ ನಡೆದರೆ ಯವತ್ತು ಯಾರಿಗೂ ಹೆದರಬೇಕಾದ ಪ್ರಮೇಯವಿಲ್ಲ ಎಂದು ಹೇಳಿ ಅವರವರ ಶ್ರಮಕ್ಕೆ ಪ್ರತಿಫಲವಾಗಿ ಆಗಿನ ಕಾಲದಲ್ಲಿ ದಿನಕ್ಕೆ 50 ರಿಂದ 60 ರೂಪಾಯಿ ಸಂಬಳ ಕೊಡತ್ತಿದ್ದರು ಆದ್ದರಿಂದ ನೌಕರರು ತಮ್ಮ ಸ್ವಂತದ್ದು ಎಂದು ತಿಳಿದು ಹಗಲಿರಳು ದುಡಿದು ಹೆಚ್ಚೆಚ್ಚು ಸಂಬಳವನ್ನು ಪಡೆಯುವುದರು ಜೊತೆಗೆ ಮಾಲಿಕರಿಗೂ ಲಾಭ ಮಡಿಕೊಟ್ಟರು.
ಕೆಲ ದಿನಗಳ ನಂತರ ಇವರ ಏಳಿಗೆಯನ್ನು ಅಸೂಯೆಪಟ್ಟು ಇವರ ಬಸ್ ಸರ್ವೀಸ್ ಮೇಲೆ ಇಲ್ಲಸಲ್ಲದ ಆರೋಪ ಪ್ರತ್ಯಾರೋಪಗಳನ್ನು ಮಾಡಿ ತಕರಾರು ಮಾಡಿದರು. ಈ ಸದರ್ಭದಲ್ಲಿ ಇವರ ಬರೆಯಿಸಿಕೊಂಡು ಏಕಸ್ವಾಮ್ಯ ಪೂರ್ಣಾಧಿಕಾರ ರದ್ದು ಆಯಿತು. ಸ್ವಲ್ಪ ದಿನ ಬಿಟ್ಟು ಸ್ವತ ಅವರೆ ಹೈದರಾಬಾದ ನಿಜಾಮರನ್ನು ಕಂಡು ಚಾಣಾಕ್ಷತಣದಿಂದ ಅವರಿಗೆ ಕಾಣಿಕೆ ನೀಡಿ ಮೊದಲಿನ ಹೆಸರನ್ನು ಕಡಿಮೆ ಮಾಡಿ ನೀಜಾಮರಗೆ ಪ್ರೀಯವಾದ ಉಸ್ಮಾನಿಯಾ ಮೋಟರ್ ಸರ್ವೀಸ್ ಎಂದು ಬದಲಾಂಯಿಸಿ ಮತ್ತೆ 15 ವರ್ಷದ ಅವಧಿಗೆ ಪರವಾಣಿಕೆ ಪಡದುಕೊಂಡರು. ನಂತರ 1936 ರಲ್ಲಿ ಸರಕಾರವೆ ಬಸ್ಸುಗಳ ಒಡಾಟವನ್ನು ಪ್ರಾರಂಭಮಾಡುತ್ತವೆ ಆಗ ಅವರು ಅವರ ಎಲ್ಲಾ ಬಸ್ಸುಗಳನ್ನ ಸರಕಾರಕ್ಕೆ ಒಪ್ಪಿಸಿ ಬಂದ ಹಣದಿಂದ ಬಸಪ್ಪನವರು ಎಣ್ಣೆ ಕಾರ್ಖಾನೆ ತೆಗೆಯುವಲ್ಲಿ ತೊಡಗಿಸಿ ಕರ್ನಾಟಕ ಆಂದ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಎಣ್ಣೆ ಕಾರ್ಖಾನೆ ಪ್ರಾರಂಬಿಸಿ ದೇಶವ್ಯಾಪಿ ಕೀರ್ತಿ ಗಳಿಸಿ “ಆಯಿಲ್ ಕಿಂಗ್” ಎಂದು ಪರಿಚಿತರಾದರು. ಆಯಿಲ್ ವ್ಯಾಪಾರಕ್ಕಾಗಿ ಮುಂಬೈಗೆ ಬರವ ಕನ್ನಡಿಗರಿಗೆ 1930 ರಲ್ಲಿ ಗೌರಿಶಂಕರ ಎಂಬ ಖಾನಾವಳಿ ಪ್ರಾರಂಭಿಸಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು.
ಆಯಿಲ್ ಕಾರ್ಖಾನೆಯಲ್ಲಿ ಉತ್ತಮ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ 1636 ರಲ್ಲಿ ಜರ್ಮನಿಯ ತಂತ್ರಜ್ಞಾನ ಅರಿಯಲು ಜರ್ಮನ ದೇಶಕ್ಕೆ ಪ್ರವಾಸ ಕೈಗೂಂಡು ಅಲ್ಲಿನ ವಿಶೇಷ ತಂತ್ರಜ್ಞಾನ ಅಳವಡಿಸಿ ೧೯೪೩ ರಲ್ಲಿ ಮುಂಬೈನ ಪಾಕಲಾಂಡನಲ್ಲಿ ಹೈಟೆಕ್ ಕೃಷ್ಣ ಆಯಿಲ್ ಮಿಲ್ ಪ್ರಾರಂಬಿಸಿದರು. 1930 ರಲ್ಲಿ ಬಸವಪ್ಪನವರು ಕರ್ನಾಟಕ ಕೆಮಿಕಲ್ಸ್ ಎನ್ನುವ ಔಷಧ ಕಂಪನಿಯನ್ನು, 1943 ರಲ್ಲಿ ಮುಂಬೈಯಲ್ಲಿ ನ್ಯೂ ಕರ್ನಾಟಕ ಪ್ರಿಂಟಿ0ಗ್ ಮತ್ತು ಪಬ್ಲಿಷಿಂಗ್ ಪ್ರೆಸ್ ಹೆಸರಿನ ಮದ್ರಣಾಲ 19546 ರಲ್ಲಿ ಗದಗದಲ್ಲಿ ರವಾ ಮಿಲ್, 1959 ರಲ್ಲಿ ಪೂಣಾ ಮತ್ತು ಮುಂಬಯಿ ಮದ್ಯ ಠಾಣಾದಲ್ಲಿ ಬಿ.ವಿ.ಭೂಮರಡ್ಡಿ ಕಲ್ಲಿನ ಕ್ವಾರಿಯನ್ನು ಪ್ರಾರಂಭಿಸಿದರು.
ಇತಹ ಬೃಹತ್ತ ಉದ್ಯಮ ಕಟ್ಟಿದ ಇವರಿಗೆ ಪ್ರಾಮಾಣಿಕ ನೌಕರರ ಸಮಸ್ಯ ಕಾಡಲರಂಬಿಸಿತು ಕೆಲವು ಸಣ್ಣಪುಟ್ಟ ವ್ಯಾಪರಸ್ಥರು ಮೋಸದಿಂದ ಇವರ ಮೇಲೆ ಆರೋಪ ಪ್ರತ್ಯಾರೋಪ ಮಾಡಿ ಸರಕಾರಕ್ಕೆ ೨೦ ಲಕ್ಷ ಮುಂಗಡ ಆದಾಯ ತೆರಿಗೆ ಕಟ್ಟಬೇಕು ಎಂದು ಒತ್ತಡ ಹೇರಿಸಿದರು. ಇದನ್ನು ಅರಿತು ಅವರು ಇವರ ಸಹವಾಸವೆ ಬೇಡ ಎಂದು ತಮ್ಮ ಸಂಬ0ದಿಕರಿಗೆಲ್ಲ ತಮ್ಮ ಆಸ್ತಿಯ ಸ್ವಲ್ಪ ಭಾಗವನ್ನು ಬರೆದು ಕೂಟ್ಟರು ಇನ್ನುಳಿದ್ದದನ್ನು ಶಿಕ್ಷಣ ಕ್ಷೇತ್ರವನ್ನು ಶಾಶ್ವತವಾಗಿರಿಸಲು ಅವರು ಆಗಿನ ಕಾಲದಲ್ಲಿ 20 ಲಕ್ಷಕ್ಕೂ ಅದಿಕ ನಗದು ದಾನ ಮಾಡಿ ಹುಬ್ಬಳ್ಳಿಯಲ್ಲಿ ಬಿವ್ಹಿಬಿ ಇಂಜನೀಯರಿ0ಗ್ ಕಾಲೇಜು ಸ್ಥಾಪನೆ ಮಾಡಿ ಮಹಾದಾನಿಯಾದರು. ಉದ್ಯಮದಲ್ಲಿ ಯಾರೂ ಮಾಡದ ಸಾಧನೆ ಮಾಡಿ ಸಾಧನೆಗಳ ಸರದಾರರಾಗಿ 1968 ಆಗಷ್ಟ 24 ರಂದು ಲಿಂಗೈಕ್ಯರಾದರು.
ಲೇಖನ: ಬಸವರಾಜ ಶಂ ಚಿನಗುಡಿ
ಚನ್ನಮ್ಮನ ಕಿತ್ತೂರು
ಮೋಬೈಲ್ ನಂ: 9008869423