ನೇತಾಜಿ ಸುಭಾಸ ಚಂದ್ರ ಬೋಸ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಸುವಂತೆ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಗ್ರಹ

ಬೆಳಗಾವಿ 26 : ನೇತಾಜಿ ಸುಭಾಸ ಚಂದ್ರ ಭೋಸರು ಯುವಕರಿಗೆ ಸ್ಪೂರ್ತಿಯಾಗಿದ್ದರು. ನನಗೆ ರಕ್ತಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಹೇಳಿದ್ದರು. ದೇಶದ ಪ್ರತಿ ಹಳ್ಳಿಗಳಲ್ಲಿ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದವರು ಬಹಳಷ್ಟು ಹುತಾತ್ಮರಿದ್ದು ಅಂಥವರ ಚರಿತ್ರೆಯು ಸಂಶೋಧನೆಯಾಗಬೇಕು. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿಯವರ ಕರ‍್ಯ ಬಲಿದಾನದ ಸಂಗತಿ ಅವೀಸ್ಮರಣೀಯವಾಗಿದ್ದು ನೇತಾಜಿ ಸುಭಾಸಚಂದ್ರ ಬೋಸ್ ಅವರ ಕುರಿತು ಚರಿತ್ರೆ ಶಾಲೆಗಳ ಪಠ್ಯದಲ್ಲಿ ಅಳವಡಿಕೆ ಮಾಡುವಂತೆ ಆಗ್ರಹಿಸಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೆತಾಜಿ ಸುಭಾಸಚಂದ್ರ ಬೋಸ್ ಅವರ ೧೨೫ನೇ ಜಯಂತೋತ್ಸವದ ಅಂಗವಾಗಿ ಏರ್ಪಡಿಸಿದ ಜಾಲಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಈ ಸಂಧರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಹಿರಿಯ ಸಾಹಿತಿ ಪಾಂಡುರಂಗ ಯಲಿಗಾರ ವಿಶೇಷ ಉಪನ್ಯಾಸ ನೀಡುತ್ತಾ ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ನೇತಾಜಿ ಸುಭಾಸಚಂದ್ರ ಬೋಸ್ ಒಬ್ಬರು. ಅವರ ಹೋರಾಟ ಮತ್ತು ಸಂಘಟನೆಯ ಚತುರತೆ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಅವರು ಆಜಾದ ಹಿಂದ್ ಪೌಜ್ ಎಂಬ ಸೈನ್ಯದ ಮೂಲಕ ಭಾರತ ಸ್ವಾತಂತ್ರ್ಯದ ಮೊಟ್ಟ ಮೊದಲ ರಾಷ್ಟ್ರ ಧ್ವಜವನ್ನು ರಂಗೂನ್ ನಲ್ಲಿ ಹಾರಿಸಿ ಸ್ವತಂತ್ರ ಸರಕಾರವನ್ನು ಸ್ಥಾಪನೆ ಮಾಡಿದ್ದರು. ಸುಭಾಸಚಂದ್ರ ಬೋಸ್ ಅವರಿಗೆ ಕರ್ನಾಟಕದ ಜೊತೆಗೆ ನಿಕಟ ಸಂಪರ್ಕವಿದ್ದು ಹಾವೇರಿಯಲ್ಲಿ ಸ್ವಾತಂತ್ರ್ಯ  ಹೋರಾಟಗಾರ ಹೊಸಮನಿ ಸಿದ್ದಪ್ಪ ಅವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿದ್ದರು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಪರಮ ಶಿಷ್ಯರಾಗಿದ್ದ ಬೋಸ್ ದೇಶಪ್ರೇಮ, ರಾಷ್ಟ್ರೀಯ ಐಕ್ಯತೆ ಕುರಿತು ಹಾಗೂ ಭಾರತ ದೇಶದ ಸ್ವಾಭಿಮಾನದ ರಕ್ಷಣೆಗಾಗಿ ಯುವಕರಿಗೆ ಕರೆ ನೀಡಿದ್ದ ಅವರು ವಿಶ್ವದ ಎಲ್ಲ ಸಮುದಾಯದ ಸ್ಪೂರ್ತಿಯ ಸಂಕೇತವಾಗಿದ್ದರು ಇಂತಹ ಮಹಾನ್ ದೇಶಭಕ್ತ ನ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದು ಯುವ ಜನಾಂಗ ತಮ್ಮ ಜೀವನದಲ್ಲಿ ನೇತಾಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ದಿಗಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಜಾಲಗೋಷ್ಠಿಯಲ್ಲಿ ಹಿರಿಯ ಲಾವಣಿಕಾರ ಬಿ.ಆರ್.ಪೋಲಿಸ್ ಪಾಟೀಲ, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ, ವಿಜಯ ಬಡಿಗೇರ, ಜ್ಯೋತಿ ಬದಾಮಿ, ಜಯಾ ಚುರುಮರಿ, ಶ್ರೀಪಾದ ಕುಂಬಾರ, ಡಾ.ಶ್ರೀಶೈಲ ದಳವಾಯಿ, ಪ್ರಕಾಶ ಅವಲಕ್ಕಿ ಇತರರು ಭಾಗವಹಿದ್ದರು.
ಪ್ರತಿಭಾ ಕಳ್ಳಿಮಠ ನಾಡಗೀತೆ ಹೇಳಿದರು. ಎಂ.ವಾಯ್.ಮೆಣಸಿನಕಾಯಿ ಸ್ವಾಗತಿಸಿದರು. ಪಾಂಡುರಂಗ ಜಟಗನ್ನವರ ಜಾಲಗೋಷ್ಠಿಯನ್ನು ಸಂಯೋಜನೆಗೊಳಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";