ಕ್ರೀಡಾಂಗಣವನ್ನು ಕಲಘಟಗಿಯಲ್ಲಿಯೇ ನಿರ್ಮಿಸಲು ಕರವೇ ಒತ್ತಾಯ.

ಧಾರವಾಡ:ಜಿಲ್ಲೆ ಕಲಘಟಗಿ ಪಟ್ಟಣಕ್ಕೆ ಮಂಜೂರಾದ ಒಳಾಂಗಣ ಕ್ರೀಡಾಂಗಣವನ್ನು ದಾಸ್ತಿಕೊಪ್ಪ ಹತ್ತಿರದ ಆದರ್ಶ ಶಾಲೆಯಿಂದ ಕಲಘಟಗಿ ಪಟ್ಟಣಕ್ಕೆ ಸ್ಥಳಾಂತರಿಸುವಂತೆ ತಹಸಿಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು. ಕಲಘಟಗಿ ಪಟ್ಟಣದ ಜನತೇಯ ದಶಕಗಳ ಕನಸಾದ ಒ ಳಾಂಗಣ ಕ್ರೀಡಾಂಗಣ ಮಂಜುರಾಗಿದ್ದು,  ಕ್ರೀಡಾಂಗಣವನ್ನು ಪ್ರಯೋಜನವಾಗದ ಜಾಗೆಯಲ್ಲಿ ನಿರ್ಮಾಣವಾಗುತ್ತಿದೆ .

ಕ್ರೀಡಾಂಗಣ ನಿರ್ಮಿಸಲು ಗುರುತಿಸಿರುವ ಜಾಗೆಯು ಕಲಘಟಗಿ ಪಟ್ಟಣದಿಂದ ಸುಮಾರು 5 ಕಿಮಿ ದೂರವಿದೆ ಹಾಗೆಯೇ ದಾಸ್ತಿಕೊಪ್ಪ ಗ್ರಾಮದಿಂದ 2 ಕಿ ಮಿ ದೂರವಿದೆ . ಇಲ್ಲಿಂದ ಅಲ್ಲಿಗೆ ಹೊಗಲು ಸರಿಯಾಗಿ ರಸ್ತೆಯ ವ್ಯವಸ್ಥೆಯು ಇಲ್ಲ ಹಾಗೆಯೇ ಸರಿಯಾಗಿ ಯಾವುದೇ ವಾಹನದ ವ್ಯವಸ್ಥೆಯು ( ಬಸ್ಸು ಟ್ಯಾಕ್ಸಿ ) ಇರುವದಿಲ್ಲ . ಅತಿ ಇಕ್ಕಟ್ಟಾದ ರಸ್ತೆ ಇದೆ ಯಾವ ದೃಷ್ಟಿಯಿಂದ ನೋಡಿದರು . ಈ ಜಾಗೆಯು ಕ್ರೀಡಾಂಗಣಕ್ಕೆ ಸರಿಯಾದ ಜಾಗವಲ್ಲ ಎಂದು ಕಲಘಟಗಿ ಪಟ್ಟಣದ ಪ್ರತಿಯೊಬ್ಬರ ಅನಿಸಿಕೆಯಾಗಿದೆ . ಹಾಗೂ ಸರ್ಕಾರದಿಂದ ಇದಕ್ಕೆ ಸುಮಾರು ಅಂದಾಜು ಮೊತ್ತ 5 ಕೋಟಿ ರೂಪಾಯಿಗಳ ಟೆಂಡರ ಕೂಡ ಕರೆಯಲಾಗಿದೆ

ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ .ಕ್ರೀಡಾಂಗಣ ನಿರ್ಮಿಸಲು ಗುರುತಿಸಿರುವ ಸ್ಥಳಕ್ಕೆ ಹೋಗಿ ಅಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಸಾಧ್ಯವಾಗುವದಿಲ್ಲ . ಕಾರಣ ಈಗಾಗಲೆ ಕಲಘಟಗಿ ಎಲ್ಲ ರೀತಿಯಿಂದಲು ಹಿಂದುಳಿದ ತಾಲೂಕಾಗಿದ್ದು ಇಲ್ಲಿ ಬರುವ ಪ್ರತಿಯೊಂದು ಯೋಜನೆಯು ಕ್ರಮಬದ್ದವಾಗಿ ಜಾರಿ ಆಗದ ಹೊರತು ಈ ತಾಲೂಕು ಎಂದಿಗೂ ಮುಂದುವರೆಯುವದಿಲ್ಲ , ಕಲಘಟಗಿಯಲ್ಲಿ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುವಲು ಕ್ರೀಡಾಪಟ್ಟುಗಳನ್ನು ಹೊಂದಿದ್ದರು . ಕ್ರೀಡಾಂಗಣ ವಿಲ್ಲದಿರುವದರಿಂದ ಅನೇಕ ಪ್ರತಿಭೆಗಳು ಅಳಿದು ಹೋಗುತ್ತಿವೆ . ಇಷ್ಟೆಲ್ಲಾ ಸಮಸ್ಯೆಗಳು ಇದ್ದರು ಕೂಡಾ ತಾಲೂಕಿನ ಜನ ಪ್ರತಿನಿಧಿಗಳು ಶಾಸಕರು ಹಾಗೂ ಸಂಸದರು ಯಾವ ಕಾರಣಕ್ಕೆ ಕ್ರೀಡಾಂಗಣವನ್ನು ಯಾರು ಹೊಗದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲು ಹೊರಟಿದ್ದಾರೆ ಎನ್ನುವದೆ ವಿಪರ್ಯಾಸ .

ಇಲಾಖೆಯ ಈ ನಡೆ ಪಾರದರ್ಶಕವಾಗಿಲ್ಲ . ಈಗಾಗಲೇ ಸಂಭಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ವಿನಂತಿಸಿಕೊಂಡರು . ಪ್ರಯೋಜನವಾಗಿಲ್ಲವಾದ್ದರಿಂದ ಕಲಘಟಗಿ ತಾಲೂಕಿನ ಸಾರ್ವಜನಿಕರು ಯುವಕ ಯುವತಿಯರು ಹಿರಿಯರು ಮಕ್ಕಳು ಸೇರಿ, ಈ ಕೂಡಲೆ  ಟೆಂಡರ ಪ್ರಕ್ರಿಯನ್ನು ರದ್ದು ಪಡಿಸಿ ಸೂಕ್ತವಾದ ಸ್ಥಳವನ್ನು ತಾಲೂಕಾ ಕೇಂದ್ರ ಸ್ಥಳವಾದ ಕಲಘಟಗಿ ಪಟ್ಟಣದಲ್ಲಿ ಜಾಗೆಯನ್ನು ಗುರುತಿಸಿ ಅಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲು ಕಲಘಟಗಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆಯು ಮನವಿ ಮುಖಾಂತರ ಒತ್ತಾಯಿಸುತ್ತದೆ ಎಂದು ರಕ್ಷಣಾ ವೇದಿಕೆ ಅಧ್ಯಕ್ಷರಾದ ಸಚಿನ್ ಪವಾರ್ ತಿಳಿಸಿದರು. ಇಲ್ಲದೇ ಹೋದರೆ ನಾವು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವದು ಎಂದರು.

 ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಮಂಜು ಭೂಮಿ. ಗಿರೀಶ್ ಜನಗಿ ಶಂಕರ್ ಜಾಧವ ಪಕ್ಕಿರೆಶ ಕಟ್ಟಿಮನಿ ಶಂಕರಗೌಡ ಪಾಟೀಲ ಬಸವರಾಜ ಬೇಲವತರ ಅಭಿಷೇಕ ಮೌನೇಶ್ ಕರವೇ ಕಾರ್ಯಕರ್ತರು  ಉಪಸ್ಥಿತರಿದ್ದರು.

ವರದಿ: ಶಶಿಕುಮಾರ್ ಕಟ್ಟಿಮನಿ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";