ಕನ್ನಡಿಗ ರಜನಿಕಾಂತ್ ಮುಡಿಗೆ ದಾದಾಸಾಹೇಬ್ ಫಾಲ್ಕೆ ಗರಿ!

ಉಮೇಶ ಗೌರಿ (ಯರಡಾಲ)

ನವ ದೆಹಲಿ(ಅ.25):ಅಪ್ಪಟ ಕನ್ನಡಿಗ ಕನ್ನಡ, ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ನಟನೆ ಮೂಲಕ ಇಡೀ ಭಾರತದ ಚಿತ್ರರಂಗವೇ ಹುಬ್ಬೇರಿಸಿ ನೋಡುವಂತೆ ಮಾಡಿದ ರಜನಿಕಾಂತ್ ಇದೀಗ ಭಾರತ ಸರ್ಕಾರ ನೀಡುವ ಚಿತ್ರರಂಗದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ಇಂದು ನಡೆದ 67 ನೇ ‘ನ್ಯಾಶನಲ್ ಫಿಲ್ಮ್ ಅವಾರ್ಡ್‘ ಕಾರ್ಯಕ್ರಮದಲ್ಲಿ ಉಪರಾಷ್ಟ್ಯಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಜನಿ ಪರಿಚಯ:  ಡಿಸೆಂಬರ್ ೧೨ ೧೯೪೯ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶಿವಾಜಿರಾವ್ ಗಾಯಕವಾಡ ರಜನಿಕಾಂತ್ ಹೆಸರಿನಲ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯಾಗಿ ಮಿಂಚಿದವರು.
ಕನ್ನಡ ಅಷ್ಟೇ ಅಲ್ಲದೇ, ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ.

ಟೆಕೇಟ್ ಟಿಕೇಟ್: ಹೌದು ರಜನಿ ಮೂಲತಃ ಓರ್ವ ಕಂಡಕ್ಟರ್ ವೃತ್ತಿಯಲ್ಲಿದ್ದವರು. ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದುಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. 1973 ರಲ್ಲಿ ಇವರು ಅಭಿನಯದಲ್ಲಿ ಡಿಪ್ಲೊಮಾ ಪಡೆಯಲು ಮದ್ರಾಸ್ ಚಲನಚಿತ್ರ ಸಂಸ್ಥೆ ಸೇರಿಕೊಂಡರು. “ಅಪೂರ್ವ ರಾಗಂಗಳ್” ಇವರ ಮೊದಲ ಚಿತ್ರ, ನಂತರ ಕೆಲ ಸಮಯ ತಮಿಳು ಚಿತ್ರಗಳಲ್ಲಿ ಇವರ ವೃತ್ತಿ ವಿರೋಧಿ ಪಾತ್ರಗಳಿಂದ ಶುರುವಾಯಿತು. ಕೆಲ ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ “ಸೂಪರ್ ಸ್ಟಾರ್” ಎಂದು ಕರೆಯಲಾಯಿತು, ಮತ್ತು ಅಂದಿನಿಂದ ಈ ಬಿರುದನ್ನು ಉಳಿಸಿಕೊಂಡಿದ್ದಾರೆ. ಇವರ ಲಕ್ಷಣತೆ ಮತ್ತು ವಿಭಿನ್ನ ಶೈಲಿಯ ಅಭಿನಯ ಮತ್ತು ಸಂಭಾಷಣೆಗಳ ಮೂಲಕ ಅಸಂಖ್ಯಾತ ಅಭಿಮಾನಿಗಳ ಪಾಲಿನ ಸೂಪರ್ ಸ್ಟಾರ್ ಆದವರು.

ಶಿವಾಜಿ ಚಿತ್ರದ ಪಾತ್ರಕ್ಕೆ 26 ಕೋಟಿ ರುಪಾಯಿಗಳನ್ನು ಪಡೆದ ನಂತರ, ಇವರು ಏಷಿಯಾದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕೆಗೆ ಪಾತ್ರರಾದವರು.
ಪ್ರಶಸ್ತಿಗಳು: ಇವರಿಗೆ ತಮಿಳುನಾಡಿನ ೬ ರಾಜ್ಯ ಚಲನಚಿತ್ರ ಪ್ರಶಸ್ತಿ,೪ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಉತ್ತಮ ನಟನೆಗೆ ಎರಡು ವಿಶೇಷ ಪುರಸ್ಕಾರ ನೀಡಲಾಗಿದೆ. ಫಿಲ್ಮ್ ಫೇರ್ ಪ್ರಶಸ್ತಿಗೂ ಭಾಜರರಾಗಿದ್ದು ಇದೀಗ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುವ ಮೂಲಕ ತಮ್ಮ ಸಾಧನೆಗಳ ಬತ್ತಳಿಕೆಗೆ ಮತ್ತೊಂದು ಕಿರೀಟ ಪಡೆದಿದ್ದಾರೆ.

ಚಿತ್ರ ನಿರ್ಮಾಪಕರಾಗಿ, ಕಥೆಗಾರರಾಗಿ ಗುರುತಿಸಿಕೊಂಡ ಇವರು ಪ್ರವೃತ್ತಿಯಿಂದ ಓರ್ವ ಸಮಾಜ ಸೇವಕನಾಗಿ, ಅಧ್ಯಾತ್ಮ ಜೀವಿಯಾಗಿ, ರಾಜಕೀಯದಲ್ಲಿ ಡಿ.ಎಂ.ಕೆ ಪಕ್ಷದಲ್ಲಿ ಪ್ರಭಾವ ಬೀರಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";