ವಿಕಲಚೇತನರ ಆತ್ಮಸ್ಥೈರ್ಯ ಇತರರಿಗೂ ಮಾದರಿ; ವಿಕಲಚೇತನ ವರದಿಗಾರ ಕಲ್ಲಪ್ಪ ಅಗಸಿಮನಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ವರದಿ: ಬಸವರಾಜ ಚಿನಗುಡಿ

ಚನ್ನಮ್ಮನ ಕಿತ್ತೂರ: ವಿಕಲಚೇತನರು ತಾವು ಯಾರಿಗೂ ಕಮ್ಮಿಇಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಧನೆಗಳ ಮೂಲಕ ಸಾಬೀತು ಮಾಡಿದ್ದಾರೆ. ಮಾತ್ರವಲ್ಲದೆ, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಎಂದು ಸಮಾಜ ಸೇವಕ ಹಾಗೂ ಪತ್ರಕರ್ತ ಕಲ್ಲಪ್ಪ ಅಗಸಿಮನಿ ಹೇಳಿದರು.

ಪಟ್ಟಣದ ಸೋಮವಾರ ಪೇಟೆ ಸರ್ಕಾರಿ ಶಾಸಕರ ಮತಕ್ಷೇತ್ರದ ಮಾದರಿ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವವಿಕಲ ಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ  ಮಾತನಾಡಿದವರು.

 ವಿಕಲಚೇತನರ ಕುರಿತು ಮಾತನಾಡುತ್ತಿರುವ ವಿಕಲಚೇತನ ವರದಿಗಾರರಾದ ಕಲ್ಲಪ್ಪ ಅಗಸಿಮನಿ

ಸರ್ಕಾರಗಳು ವಿಕಲಚೇತನರನ್ನು ಮುಖ್ಯವಾಹಿನಿಗೆ ಕರೆತರಲು ಹಾಗೂ ಸ್ವಾಲಂಬಿಗಳನ್ನಾಗಿಸಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಅವುಗಳನ್ನು ವಿಕಲಚೇತನರು ಪಡೆದುಕೊಳ್ಳಬೇಕು. ಸಮಾಜದಲ್ಲಿ ಇವರನ್ನು ಅಶಕ್ತನಾದವನು ಎಂದು  ಗುರುತಿಸುತ್ತಿದೆ. ಆದರೆ ವಿವಿಧ ಕ್ಷೇತ್ರದಲ್ಲಿ ತಮ್ಮ ಶಕ್ತಿ ಹಾಗೂ ಯುಕ್ತಿಯಿಂದ ತಮ್ಮದೇ ಅದ ಛಾಪುಮೂಡಿಸುವಲ್ಲಿ ಯಶಸ್ವಿಯಾಗಿದ್ದರೆ. ಸಮಸ್ಯೆಗಳು ಎಷ್ಟೇ ಇದ್ದರೂ ಸಾಧಿಸಿ ತೋರಿಸಬೇಕೆನ್ನುವ ಛಲ ಅವರಲ್ಲಿದ್ದರೆ ಅವರೇ ದೇಶಕ್ಕೆ ದೊಡ್ಡ ಆಸ್ತಿಯಾಗುತ್ತಾರೆ ಎಂದು ಹೇಳಿದ ಅವರು ವಿಕಲಚೇತನರಿಗೆ ಅನುಕಂಪ ತೋರದೇ ಅವರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಮೂಹ ಸಂಪನ್ಮೂಲ ಅಧಿಕಾರಿ ಗಾಯತ್ರಿ ಅಜ್ಜನವರ ವಿಕಲಚೇತನ ಮಕ್ಕಳು ದೇವರಿಗೆ ಸಮಾನ ದೈಹಿಕ ವಿಕಲತೆ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು. 1962 ರಿಂದ ವಿಕಲಚೇತನರ ದಿನವನ್ನು ಆಚರಿಸುತ್ತಾ ಬರುತ್ತಿದ್ದು 2006 ರಲ್ಲಿ ವಿಕಲಚೇತನರ ಅಧಿನಿಯಮ ಜಾರಿಗೆ ಬಂದಿತು. ಈ ಕಾಯ್ದೆಯಲ್ಲಿ ವಿಕಲಾಂಗ ಚೇತನರ ಹಕ್ಕುಗಳ ಮೇಲೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. 281 ವಿವಿಧ ತರಹದ ನೂನ್ಯತೆಗೊಳಗಾದವರನ್ನು ಅಂಗವಿಕಲರೆಂದು ಗುರುತಿಸಲಾಗಿದೆ. ಈಗಾಗಲೇ ಕೆಆರ್‌ಪಿ ಕೇಂದ್ರದಿಂದ ಸಾಕಷ್ಟು ಸಲಕರಣೆ ಸರ್ಕಾರ ನೀಡುತ್ತಿದೆ. 93 ವಿಕಲಾಂಗ ಮಕ್ಕಳಿಗೆ ಸಲಕರಣೆ ಬಂದಿವೆ,  ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಆತಿಥಿಯಾಗಿ ಆಗಮಿಸಿ ಶಿಕ್ಷಕಿ ಲಕ್ಷ್ಮೀ ಭೂಸನ್ನವರ ಮಾತನಾಡಿ ಹಲವಾರು ಕಾರಣಗಳಿಂದ ಕೆಲವರು ಅಂಗವೈಕಲ್ಯದಿಂದ ಹುಟ್ಟುತ್ತಾರೆ. ಆದರೆ ದೇವರು ಅವರಿಗೆ ವಿಶೇಷ ಶಕ್ತಿಯನ್ನು  ಕೊಟ್ಟಿರುತ್ತಾನೆ. ಪಾಲಕರು ಇದನ್ನ ಅರಿತು ಸ್ವಾವಲಂಬಿ ಬದುಕು ನಡೆಸುವಂತೆ ದಾರಿ ತೋರಬೇಕು. ಅವರನ್ನು ಸಮಾಜದಡೆಗೆ ಕರೆತಂದು ಪರಿಚಯಿಸಬೇಕು. ವಿಕಲಚೇತನರು ಅಬಲರಾಗದೇ ಸಬಲರಾಗಬೇಕು ಅಂದಾಗ ಮಾತ್ರ ನಮ್ಮನ್ನು ಸಮಾಜ ಎತ್ತಿ ಹಿಡಿಯುತ್ತದೆ ಎಂದರು.

ಅತಿಥಿಯಾಗಿ ಆಗಮಿಸಿದ ಶಿಕ್ಷಕ ವಿವೇಕಾನಂದ ಹೊಳಿ ಮಾತನಾಡಿ ವಿಕಲಚೇತನರ ಬಗ್ಗೆ ಹಿಂದಿನ ದಿನಮಾನಗಳಲ್ಲಿ ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು. ಪ್ರಸ್ತುತ ಆ ದೃಷ್ಟಿಕೋನ ಬದಲಾಗಿದೆ. ಅಂತಹದೊಂದು ದೊಡ್ಡಶಕ್ತಿಯನ್ನು ದೇವರು ಅವರಿಗೆ ಕರುಣಿಸಿದ್ದಾನೆ ಎಂದ ಅವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಮನವಿ ಮಾಡಿದರು.

ಬಿ ಡಿ ಕಲಭಾಂವಿ ಅಂಗವಿಕಲರ ಕುರಿತು ಪ್ರಾಸ್ತಾವಿಕವಾಗಿ ವಿವರಣೆ ನೀಡಿದರು.

ಇದೇ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನರಿಗೆ ಹಾಗೂ ವಿಕಲಚೇತನರ ದಿನಾಚರಣೆಯ ನಿಮಿತ್ತ ಕ್ರೀಡಾ ಮತ್ತು ಸಾಸಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸುವುದರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಫಲಾನುಭವಿಗಳಿಗೆ ವ್ಹೀಲ್ ಚೇರ್ ಸೇರಿದಂತೆ ಇತರೆ  ಸಲಕರಣೆಗಳನ್ನು ವಿತರಿಸಲಾಯಿತು.

ಈ ವೇಳೆ ವೈದ್ಯಾಧಿಕಾರಿ ಡಾ. ರಿತಿಕಾ ಶೆಟ್ಟಿ, ಬಿಆರ್‌ಪಿ ವಿನೋಧ ಪಾಟೀಲ, ಆರತಿ ಕಲಘಟಗಿ,  ನಂದೀಶ,  ವಿಕಲಾಂಗ ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಇದ್ದರು.

ಶಿಕ್ಷಕ ಎಲ್.ಎಂ. ಕುರಬೇಟ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿ ಜ್ಯೋತಿ ಕೊಟಬಾಗಿ ನಿರೂಪಣೆ ಮಾಡಿ ಸರ್ವರನ್ನು ಸ್ವಾಗತಿಸಿದರು, ಆದರ್ಶಾ ಗೋಡಗೇರಿ ವಂದಿಸಿದರು.

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";