ಬೆಳಗಾವಿ: ರಾಜ್ಯ ಗುತ್ತಿಗೆದಾರರ ಸಂಘದ ಗಂಭೀರ ಆರೋಪವಾದ ಶೇ. 40% ರ ವಿವಾದವನ್ನು ಸದನದಲ್ಲಿ ಪ್ರಸ್ತಾಪಿಸುವುದನ್ನು ಹಾಗೂ ರಾಜ್ಯದಲ್ಲಿ ನಡೆದಿರುವ ಜಲಜೀವನ ಮಿಷನ್ ಯೋಜನೆಯ ದುರ್ಬಳಕೆಯ ಭ್ರಷ್ಟಾಚಾರ. ಮೇಕೆದಾಟು ಹಾಗೂ ಮಹಾದಾಯಿ ಕುರಿತು ಸದನದಲ್ಲಿ ಪ್ರಸ್ತಾಪಿಸದೇ ಹೊರಗಡೆ ಪಾದಯಾತ್ರೆಯ ನಾಟಕ.ಮತ್ತು ಐ.ಪಿ.ಎಸ್. ಪೊಲೀಸ್ ಅಧಿಕಾರಿ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆ ತಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಜಗದೀಶ ಕೆ.ಎನ್.ಮಹಾದೇವ ಅವರನ್ನು ನ್ಯಾಯಾಂಗ ಬಂಧನ ದಲ್ಲಿರಿಸಿರುವ ಗಂಭೀರ ವಿಷಯವನ್ನು ಚರ್ಚಿಸದೆ ಈ ವಿರೋಧಿ ಪಕ್ಷ ನಿರೂಪಯುಕ್ತ ವಿಷಯವನ್ನು ದೊಡ್ಡದಾಗಿಸಿ ಆಡಳಿತ ಪಕ್ಷದ ಜೊತೆಗೆ ಶಾಮಿಲಾಗಿ ಅಧಿವೇಶನದ ಮೌಲ್ಯವನ್ನು ಹಾಳು ಮಾಡುತ್ತಿದೆ ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಬಿ.ಎಮ್. ಚಿಕ್ಕನಗೌಡರ ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಿಗೆ ಸಮಾಜ ಪರ ಭಾವನೆಗಳನ್ನು ಪ್ರಸ್ತಾಪಿಸಲು ಸರ್ವೋತ್ತಮ ಪವಿತ್ರ ವೇದಿಕೆ ಎಂದರೆ ವಿಧಾನ ಮಂಡಳ ಅಧಿವೇಶನ ಮಾತ್ರ. ಸದನದ ಹೊರಗೆ ಬಿಜೆಪಿ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪನವರ ವಿವಾದಿತ ಮಾತಿಗೆ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿ ಅಧಿವೇಶನಕ್ಕೂ ಅಡ್ಡಿ ಮಾಡಿ ಸಾರ್ವಜನಿಕರ ಹಣದ ವ್ಯರ್ಥ ಮತ್ತು ದುರ್ಬಳಕೆಯನ್ನು ಮಾಡುತ್ತಿರುವ ಕಾಂಗ್ರೇಸ್ ನಾಯಕರಿಗೆ ಅಧಿವೇಶನದ ಮಹತ್ವ ತಿಳಿದುಕೊಂಡು ನಡೆದರೆ ಒಳಿತು ಎಂದು ಬೆಳಗಾವಿಯಲ್ಲಿ ಮಾಧ್ಯಮ ಒಂದಕ್ಕೆ ಬಿ.ಎಮ್. ಚಿಕ್ಕನಗೌಡರ ತಿಳಿಸಿದ್ದಾರೆ.
ಅಧಿವೇಶನದ ನಂತರ ಪಾದ ಯಾತ್ರೆಗಳನ್ನು ಕೈಗೊಳ್ಳುವ ಮೊದಲು ಸದನದಲ್ಲಿ ದೊರೆತಿರುವ ಅವಕಾಶವನ್ನು ಸದ್ಬಳಕೆ ಮಾಡುವಂತೆ ಸದನಕ್ಕೆ ಅಡ್ಡಿ ಪಡಿಸುವ ಮಾಜಿ ಸಚಿವರಿಗೆ ಹಾಗು ಶಾಸಕರಿಗೆ ಮನವಿ ಕೂಡ ಮಾಡಿರುತ್ತಾರೆ.