ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕೆ ಪದ್ಮರಾಜನ್ ಕಣಕ್ಕಿಳಿಯಲು ನಿರ್ಧಾರ

ಬಸವರಾಜ ಚಿನಗುಡಿ

ಚನ್ನಮ್ಮನ ಕಿತ್ತೂರು:ಕರ್ನಾಟಕದಲ್ಲಿ ಬರುವ ಮೇ 10 ರಂದು ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಮೇ 13 ರಂದು ಫಲಿತಾಂಶ ಹೊರ ಬಿಳಲಿದೆ. ಕರ್ನಾಟಕದ ಹಾಲಿ  ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ 233 ಚುನಾವಣೆಗಳಲ್ಲಿ ದೇಶದ ಘಟಾನುಗಟಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ವಿರುದ್ಧ ಸೋಲು ಕಂಡಿದ್ದ ವ್ಯಕ್ತಿ ಸ್ವತಂತ್ರ ಅಭ್ಯರ್ಥಿಯಾಗಿ ಕೆ ಪದ್ಮರಾಜನ್ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಕೆ ಪದ್ಮರಾಜನ್ ಪ್ರತಿಭಾರಿ ಇವರು ವಿವಿಧ ಪಕ್ಷಗಳ ಪ್ರಮುಖ ನಾಯಕರ ವಿರುದ್ಧವೇ ಸ್ಪರ್ಧಿಸಿದ್ದಾರೆ. 2018 ರಲ್ಲಿ ಅವರು ಈಗಿನ ಮಾಜಿ ಮುಖ್ಯಮಂತ್ರಿ ಸಿದ್ದರಮಯ್ಯ ವಿರುದ್ಧ ಚಾಮುಂಡೇಶ್ವರಿಯಿಂದ ಕಣಕ್ಕಿಳಿದಿದ್ದರು. ಕೆ ಪದ್ಮರಾಜನ್. 2023ನೇ ಚುನಾವಣೆ ಅವರ ಜೀವನದಲ್ಲಿನ 234ನೇ ಚುನಾವಣೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಾರಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

1988ರಿಂದ ಉಮೇದುವಾರಿಕೆ ಸಲ್ಲಿಸುತ್ತಿರುವ ಕೆ ಪದ್ಮರಾಜನ್‌ ಅವರು ಸೇಲಂನ ಮೆಟ್ಟೂರು ಮೂಲದ ನಿವಾಸಿಯಾಗಿದ್ದಾರೆ. ಅವರು ಅಧಿಸೂಚನೆ ಪ್ರಕಟಗೊಂಡ ಮೊದಲ ದಿನವೇ ಗುರುವಾರ ಅವರು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕಿಳಿಯಲು ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು.

ಸಿಎಂ-ಪಿಎಂ ಮುಂದೆಯು ಸ್ಪರ್ಧೆ: ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳ ಸಾರ್ವತ್ರಿಕ ಚುನಾವಣೆಗಳಲ್ಲಿ, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಲ್ಲೂ ಅವರ ಸ್ಪರ್ಧೆಗೆ ಇಳಿದಿದ್ದಾರೆ.ಆಗ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿಗಳಾದ ಕರುಣಾನಿಧಿ ಮತ್ತು ಜೆ ಜಯಲಲಿತಾ ಸೇರಿದಂತೆ ಹೀಗೆ ಪ್ರಬಲ ನಾಯಕರ ವಿರುದ್ಧ ಸ್ಪರ್ಧಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";