ಬೈಲಹೊಂಗಲ ನ್ಯಾಯಾಲಯದ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿದ: ನ್ಯಾಯಾಧೀಶೆ ಆರ್. ಉಷಾರಾಣಿ

ಉಮೇಶ ಗೌರಿ (ಯರಡಾಲ)

ಬೈಲಹೊಂಗಲ-. ಇಂದಿನ ಜಾಗತಿಕ ಮಟ್ಟದ ಸ್ಫರ್ಧಾತ್ಮಕ ಯುಗದಲ್ಲಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಕಾನೂನಿನ ಅರಿವು ಹೊಂದಿ, ತನ್ನ ಹಕ್ಕನ್ನು ಪ್ರತಿಪಾದಿಸುವುದು ಇಂದು ಅತ್ಯ  ಅವಶ್ಯವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಉಷಾರಾಣಿ ಆರ್. ಹೇಳಿದರು.

ಅವರು ಮಂಗಳವಾರ ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ನ್ಯಾಯವಾದಿಗಳ ಸಂಘದ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ
ಮಾತನಾಡಿ, ಇಂದಿನ ಪ್ರಸಕ್ತ ದಿನಮಾನಗಳಲ್ಲಿ ಬದಲಾಗುತ್ತಿರುವ ಕಾಲದಲ್ಲಿ ಮಹಿಳೆ ತನ್ನ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಲ್ಲುವವ ಶಕ್ತಿ ಹೊಂದಿದ್ದಾಳೆ. ಸರಕಾರದ ಎಲ್ಲ ಸೌಲಭ್ಯ ಪಡೆದುಕೊಳ್ಳಲು ಸಮಾನ ಹಕ್ಕು ಹೊಂದಿದ್ದಾರೆ ಎಂದರು.

ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂಚೂಣಿಗೆ ಬರುತ್ತಿದ್ದಾರೆ. ಸಮಾಜವನ್ನು ಬಲಿಷ್ಠವಾಗಿ ರೂಪಿಸಲು ಮಹಿಳೆಯ ಪಾತ್ರ ಅತ್ಯಮೂಲ್ಯವಾಗಿದೆ ಎಂದು ವಕೀಲೆ ಸುಜಾತಾ ಚಿಕ್ಕಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಮಗಳು ಮುಂದೆ ಬರಲು ಸಮಾಜ ಸ್ಪಂದಿಸಬೇಕು.

ಎಲ್ಲಿ ಹೆಣ್ಣು ಮಗಳಿಗೆ ಗೌರವ ಇದೆಯೋ ಅಲ್ಲಿ ದೇವತೆಗಳು ಸಂತುಷ್ಠರಾಗಿ ಹರಸುತ್ತಾರೆ. ಕನ್ನಡತಿ ಪೈಲೆಟ್ ದಿಶಾ ಮಲ್ಲೂರ ಎಂಬ ದಿಟ್ಟ ಹೆಣ್ಣು ಮಗಳು ಉಕ್ರೇನ
ಯುದ್ದ ಭೂಮಿಯಿಂದ 742 ಭಾರತೀಯರನ್ನು ತಾಯ್ನಾಡಿಗೆ ತಂದ ಕೀರ್ತಿಗೆ ಭಾಜನಳಾಗಿದ್ದು ಇತಿಹಾಸ ಎಂದರು.

ವಕೀಲ ಎಸ್.ಎಸ್. ಆಲದಕಟ್ಟಿ ಮಾತನಾಡಿ, ಮಹಿಳೆಯರ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹ ಕೊಡುವ ಕೆಲಸವಾಗಬೇಕು. ಪುರುಷ, ಮಹಿಳೆ ತಾರತಮ್ಯ ಹೊಗಲಾಡಿಸಲು ಜಾಗೃತಿ ಉಂಟು ಮಾಡಬೇಕು ಎಂದರು.

ಸಹಾಯಕ ಸರಕಾರಿ ಅಭಿಯೋಜಕಿ ಸುನಿತಾ ಆರ್, ವಕೀಲರಾದ ಸ್ನೇಹಾ ವೆಂಕಣ್ಣವರ, ಸೀಮಾ ಮಾಲದಾರ ಮಾತನಾಡಿ, ಈ ಗಂಡು ಮೆಟ್ಟಿನ ನಾಡಿನ ಮಣ್ಣಿನ ಕಣದಲ್ಲಿ ಆಗಾಧ ಶಕ್ತಿ ಇದ್ದು, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸ, ಆದರ್ಶ ತತ್ವಗಳನ್ನು ಜೀವನದಲ್ಲಿ ಮೈಗೊಡಿಸಿಕೊಂಡು ಮುನ್ನಡೆಬೇಕು ಎಂದರು.

ವಕೀಲರಾದ ಆರ್.ಎ. ಪಾಟೀಲ ಮಾತನಾಡಿ, ಹೆಣ್ಣು ಮಕ್ಕಳು ಕಾನೂನಿನ ಎಲ್ಲ ಸೌಲಭ್ಯ ಪಡೆದುಕೊಳ್ಳಲು ಮುಂದೆ ಬರಬೇಕೆಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಾನಂದ ಆನಿಗೋಳ ಮಾತನಾಡಿ, ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಯವಾದಿಗಳ ಸಂಘದಿಂದ ಮಹಿಳೆಯರ ಹಕ್ಕು, ಸ್ಥಾನಮಾನಗಳ ಕುರಿತು ವಿಶೇಷ ಕಾರ್ಯಕ್ರಮದ ಉಪನ್ಯಾಸದ ಲಾಭಂಶವನ್ನು ಪಡೆದು ಕೊಳ್ಳಬೇಕೆಂದರು. ವೇದಿಕೆಯ ಮೇಲೆ ಜಯಶ್ರೀ ಬೂದಿಹಾಳ, ಎಸ್.ಎಸ್. ಮಾಳಗಿ ಇದ್ದರು. ಉಪಾಧ್ಯಕ್ಷ ಎಂ.ಆರ್. ಸೋಮನ್ನವರ, ಎಂ.ಆರ್.ಮೆಳವಂಕಿ, ಎಸ್.ಜಿ. ಬೂದಯ್ಯನವರಮಠ, ಬಿ.ಬಿ. ಹುಲಮನಿ, ಬಿ.ಎಂ. ಮೂಲಿಮನಿ, ಮುತ್ತು ಅಲ್ಲಯ್ಯನವರಮಠ, ಆಯ್.ಎಸ್. ಪಾಟೀಲ ಹಾಗೂ ಮಹಿಳಾ ನ್ಯಾಯವಾದಿಗಳು ಇದ್ದರು.

ಈ ಸಂದಭ೯ದಲ್ಲಿ ನೂರಾರು ವಕೀಲರು ಇದ್ದರು. ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಸಂತೋಷ ಬಾಂವಿ ಸ್ವಾಗತಿಸಿ, ವಂದಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";