ಬೆಳಗಾವಿ: ಎತ್ತ ನೋಡಿದತ್ತ ಆಕಾಶದೆತ್ತರಕ್ಕೆ ನಿಂತ ಕಟೌಟಗಳು, ಒಂದು ಕಡೆ ಅಭಿಮಾನಿಗಳ ಜೈಕಾರ, ಮತ್ತೊಂದೆಡೆ ರಕ್ತದಾನ, ಉಪಹಾರ ವಿತರಣೆ ಇವುಗಳೆಲ್ಲದರ ನಡುವೆ ಮದುವೆ ಹೆಣ್ಣಿನಂತೆ ಸಿಂಗಾರಗೊಂಡ ಚಲನ ಚಿತ್ರ ಟಾಕೀಸಗಳು. ಯಾವ ಹಬ್ಬಕ್ಕೂ ಕಡಿಮೆ ಇಲ್ಲ ಎನ್ನುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಮತ್ತು ಜೇಮ್ಸ್ ಮೂವಿ ಬಿಡುಗಡೆಯನ್ನ ಬೆಳಗಾವಿಗರು ಅದ್ದೂರಿಯಿಂದ ಮಾಡಿದ್ದು ಒಂದೊಂದು ಕ್ಷಣವು ನೋಡುಗರ ಕಣ್ಣು ಕುಕ್ಕುವಂತಿದ್ದವು.
ಹೌದು, ಬೆಳ್ಳಂ ಬೆಳಿಗ್ಗೆ ಕನ್ನಡ ಬಾವುಟವನ್ನು ಹಿಡಿದು ಘೋಷನೆ ಕೂಗುತ್ತ ಸಿನೀಮಾ ಟಾಕೀಸಗಳಿಗೆ ಆಗಮಿಸಿದ ಪುನೀತ ಅಭಿಮಾನಿಗಳು ಹುಟ್ಟು ಹಬ್ಬವನ್ನು ಮತ್ತು ಜೇಮ್ಸ್ ಮೂವಿ ಬಿಡುಗಡೆಯನ್ನು ಹಬ್ಬದಂತೆ ಆಚರಿದ್ದಾರೆ. ನಗರದ ಚಿತ್ರಾ ಟಾಕೀಸನಲ್ಲಿ ಅಪ್ಪು ಕಟೌಟಗೆ ಹಾಲೆರೆದು, ಯುವರತ್ನನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ, ಪುಷ್ಪಮಳೆಗೈದಿದ್ದಾರೆ.
ಇನ್ನು ಟಾಕೀಸ್ ಒಳಗಡೆ ಜೇಮ್ಸ್ ಮೂವಿ ಪ್ರದರ್ಶನ ಪ್ರಾರಂಭವಾಗಿದ್ದರೆ ಹೊರಗಡೆ ರಕ್ತಧಾನ ಶಿಬಿರವನ್ನು ಹಮ್ಮಕೊಳ್ಳಲಾಗಿತ್ತು. ಪುನೀತ್ ರಾಜಕುಮಾರ ಅಭಿಮಾನಿಗಳು ಮತ್ತು ವಿವಿದ ಸಂಘಟನೆಗಳ ಕಾರ್ಯಕರ್ತರು ರಕ್ತದಾನ ಮಾಡುವುದರ ಮೂಲಕ ಸರಳ ವ್ಯಕ್ತಿತ್ವದ ರಾಜಕುಮಾರನಿಗೆ ಗೌರವ ನಮನ ಸಲ್ಲಿಸಿದರು. ಇನ್ನು ಮುತ್ತು ರಾಜನನ್ನು ನೆನೆದು ಅಭಿಮಾನಿಗಳು ಕಣ್ಣೀರು ಹಾಕಿದ್ದು ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂದುಕೊಂಡು ಸಮಾಧಾನ ಪಟ್ಟುಕೊಳ್ಳುವ ಸನ್ನಿವೇಶಗಳು ಕಂಡು ಬಂದವು.
ಮತ್ತೊಂದೆಡೆ ಪುನೀತ ರಾಜಕುಮಾರ್ ಅಭಿಮಾನಿಗಳ ತಂಡ ಟಾಕೀಸಗೆ ಬಂದವರಿಗೆ ಉಪಹಾರ ವಿತರಣೆ ಮಾಡುವಲ್ಲಿ ನಿರತರಾಗಿದ್ದರು. ಇನ್ನು ಎಲ್ಲಿ ನೋಡಿದಲ್ಲಿ ಕನ್ನಡ ಬಾವುಟ ಹಿಡಿದು ಅಪ್ಪು ಘೋಷಣೆ ಕೂಗುತ್ತ ಓಡಾಡುವವರ ಸಂಖ್ಯೆಯಂತೂ ಕಡಿಮೆ ಇರಲಿಲ್ಲ
ಬೆಳಿಗ್ಗೆ ಇಂದಲೇ ಜೇಮ್ಸ್ ಮೂವಿ ಪ್ರದರ್ಶನ ಪ್ರಾರಂಭವಾಗಿದ್ದು ಟಾಕೀಸ್ ಹೌಸ್ ಪುಲ್ ಆಗಿತ್ತು. ಹಿಂಡು ಹಿಂಡಾಗಿ ಟಾಕೀಸನತ್ತ ಆಗಮಿಸುತ್ತಿದ್ದ ಅಪ್ಪು ಅಭಿಮಾನಿಗಳು ಟಿಕೆಟ್ ಸಿಗದೆ ನಿರಾಶೆಯಿಂದ ನಿಂತಿರುವ ಸನ್ನಿವೇಶಗಳು ಕೂಡ ಅಲ್ಲಲ್ಲಿ ಕಂಡು ಬಂದವು.
ಒಟ್ಟಿನಲ್ಲಿ ಜೇಮ್ಸ್ ಮೂವಿ ಬಿಡುಗಡೆ ಮತ್ತು ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಒಟ್ಟೊಟ್ಟಿಗೆ ಬಂದಿದ್ದು ಅಭಿಮಾನಿಗಳಿಗೆ ನೋವಲ್ಲೂ ನಗು ಬಂದಂತಾಗಿದೆ.