ಬೆಳಗಾವಿ : ಸಧ್ಯ ಬಾರಿ ಕುತೂಹಲ ಮೂಡಿಸಿರುವ ಬೈಲಹೊಂಗಲ ಮತಕ್ಷೇತ್ರದ ಟಿಕೆಟ್ ಯಾರಿಗೆ ಎಂಬ ಗೊಂದಲದಕ್ಕೆ ನಾಳೆ ತೆರೆ ಬಿಳುವ ಸಾಧ್ಯತೆ ಇದೆ.
ಮಾಜಿ ಶಾಸಕ ಜಗದೀಶ ಮೆಟಗುಡ್ಢ ಅವರ ಅಭಿವೃದ್ಧಿ ಕಾರ್ಯ ಹಾಗೂ ಪಕ್ಷ ಸಂಘಟನೆ ಮತ್ತು ಬಿಜೆಪಿ ಸರ್ವೇ ಪ್ರಕಾರ ಅವರ ಪರ ಬ್ಯಾಟ್ ಬೀಸಿದ ಪ್ರಬಲ ಶಕ್ತಿಗಳಿಂದ ಬೈಲಹೊಂಗಲ ಟಿಕೆಟ್ ಮೆಟಗುಡ್ಡ ಅವರಿಗೆ ಬಹುತೇಕ ಖಚಿತವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬೈಲಹೊಂಗಲ ಟಿಕೆಟ್ ನನಗೆ ಎಂಬ ಅದಮ್ಯ ವಿಶ್ವಾಸದಲದಲಿರುವ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಮಾಜಿ ಶಾಸಕ,ಕಾಡಾ ಅಧ್ಯಕ್ಷರಾದ ವ್ಹಿ.ಐ .ಪಾಟೀಲ ಅವರಿಗೆ ಕೊಂಚ ಹಿನ್ನಡೆ ಉಂಟಾಗಿದ್ದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವ್ಹಿ.ಐ .ಪಾಟೀಲರ ಪರವಾಗಿ ಸಂಘಟನೆಯ ಪ್ರಮುಖ ನಾಯಕರು ಬ್ಯಾಟ್ ಬೀಸಿದ್ದು ಈ ಹಿಂದೆ ಇದ್ದ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿ ಎರಡು ಸುತ್ತಿನ ಸಭೆ ಮುಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದದಲ್ಲಿ ಕೊನೆಯ ಸಭೆ ಬಳಿಕ ತಡರಾತ್ರಿ ಅಥವಾ ನಾಳೆ ಬಿಜೆಪಿ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ.