ಸುದ್ದಿ ಸದ್ದು ನ್ಯೂಸ್ .
ಘೋಡ್ಸೆ ಗಾಂಧಿಯನ್ನು ಯಾಕೆ ಕೊಂದ ಎಂಬ ಸುಳ್ಳು ಕಥೆಗಳನ್ನು ಹಾವಿನಪುರದ ಧರ್ಮಾಂಧ ಹಾವುಗಳ ಸಂತತಿ ಸ್ರಷ್ಟಿಸುತ್ತಲೆ ಇದೆ. ನಾವು ಗಾಂಧಿ ಕೊಲೆಯ ಹಿಂದಿನ ಸತ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಲೇ ಬೇಕಿದೆ. ಗಾಂಧಿಯನ್ನು ಧರ್ಮಾಂಧರು ಯಾಕೆ ಕೊಂದರು ಎನ್ನುವುದು ಪೇರಿಯಾರ ಮಾತುಗಳಲ್ಲಿ ಕೇಳಿರಿ….
ಗಾಂಧಿ ಪೇರಿಯಾರ್ ಸಂಭಾಷಣೆ…..
1927, ಬೆಂಗಳೂರು
ಇದು ಸರಿಯಾಗಿ ಪೇರಿಯಾರ್ ಅವರು ಕಾಂಗ್ರೆಸ್ ಪಕ್ಷ ತ್ಯಜಿಸಿ ಎರಡು ವರ್ಷಗಳ ನಂತರ ಅವರು 1925 ರಲ್ಲಿ ಸ್ವಾಭಿಮಾನಿ ಚಳುವಳಿ ಆರಂಭಿಸಿದ ನಂತರ ಗಾಂಧಿಜೀಯವರು ಪೇರಿಯಾರ್ ಅವರನ್ನು ಬೆಂಗಳೂರಿಗೆ ಚರ್ಚೆಗೆ ಅವ್ಹಾನಿಸಿದಾಗಿನ ಸಂಗತಿ….
ಪೇರಿಯಾರ್ ಅವರು ಗಾಂಧಿಜೀಯವರ ಅವ್ಹಾನವನ್ನು ಸ್ವೀಕರಿಸಿ ರಾಜಗೋಪಾಲಚಾರಿ (ರಾಜಾಜೀ) ಅವರೊಂದಿಗೆ ಬೆಂಗಳೂರಿಗೆ ಬರುತ್ತಾರೆ.
ಅವರಿಬ್ಬರ ನಡುವೆ ನಡೆದ ಸಂಭಾಷಣೆ ಹೀಗಿತ್ತು :
ಗಾಂಧಿಜೀ : ನಾವು ಹಿಂದುತ್ವವನ್ನು ಒಪ್ಪಿಕೊಂಡೇ ಸಾಮಾಜಿಕ ಪರಿವರ್ತನೆಯ ಪ್ರಯತ್ನವನ್ನೇಕೆ ಮಾಡಬಾರದು ?
ಪೇರಿಯಾರ್ : ಇಲ್ಲ ನೀವು ಹೀಗೆ ಮಾಡಲು ಬ್ರಾಹ್ಮಣರು ನಿಮ್ಮೊಂದಿಗೆ ಕೈಜೋಡಿಸುವುದಿಲ್ಲ ಮತ್ತು ಸಹಕಾರವನ್ನೂ ಕೊಡಲಾರರು. ವರ್ಣಾಶ್ರಮ ಧರ್ಮವೆನ್ನುವ ವಿಷಕಾರಿ ಜಾತಿವ್ಯವಸ್ಥೆಯನ್ನು ಬುಡಮೇಲು ಮಾಡದ ಹೊರತುˌ ಹಠಮಾರಿತನದಿಂದ ಅಸ್ಪೃಶ್ಯತೆ ಆಚರಿಸುವ ಬ್ರಾಹ್ಮಣರು ನಮ್ಮ ಈ ಪ್ರಯತ್ನಕ್ಕೆ ಎಂದಿಗೂ ಬೆಂಬಲಿಸಲಾರರು.
ಗಾಂಧಿಜೀ : ಅಂದರೆ ಎಲ್ಲ ಬ್ರಾಹ್ಮಣರು ಜಾತಿವಾದಿಗಳೆ ನಿಮ್ಮ ಸ್ನೇಹಿತ ರಾಜಗೋಪಾಲಚಾರಿನೂನಾ ? ( ರಾಜಾಜೀ ಅಲ್ಲೇ ಪಕ್ಕದಲ್ಲೇ ಕುಳಿತಿರುತ್ತಾರೆ )
ಪೇರಿಯಾರ್ : ರಾಜಾಜೀ ಒಬ್ಬ ಶ್ರೇಷ್ಠ ಚಿಂತಕ. ಆದರೆ ಆತನ ಜ್ಞಾನವನ್ನು ತಮ್ಮ ಸಮುದಾಯದ ಏಳಿಗೆಗಾಗಿ ಉಪಯೋಗಿಸುತ್ತಾರೆ ಹೊರತು ಸಾಮಾನ್ಯ ಜನರಿಗಾಗಿ ಅಲ್ಲ.
ಗಾಂಧಿಜೀ : ಓಹೋ ! ಹಾಗಾದರೆ ನಿಮಗೆ ಇಲ್ಲಿಯ ವರೆಗೆ ಒಬ್ಬನೂ ಒಳ್ಳೆಯ ಬ್ರಾಹ್ಮಣ ಕಾಣಲಿಲ್ಲವೆˌ ಗೋಪಾಲಕ್ರಷ್ಣ ಗೋಖಲೆ ಕೂಡ ಕೆಟ್ಟವರೆ ?
ಪೇರಿಯಾರ್ : ಮಹಾತ್ಮರಾದ ತಮ್ಮ ಕಣ್ಣುಗಳೇ ಇಲ್ಲಿಯ ವರೆಗೆ ಕೇವಲ ಒಬ್ಬ ಒಳ್ಳೆಯ ಬ್ರಾಹ್ಮಣನನ್ನು ಗುರುತಿಸಿವೆ ಎಂದರೆ ಸಾಮಾನ್ಯನಾದ ನನಗೆ ಹೇಗೆ ಸಾಧ್ಯ !
ಇಷ್ಟನ್ನು ಹೇಳಿ ಪೇರಿಯಾರ ನಿರ್ಗಮಿಸಿದರು. ಅವರು ನಿರ್ಗಮಿಸುವ ಮುಂಚೆ ಮತ್ತೊಂದು ಮಾತನ್ನು ಗಾಂಧಿಜೀಯವರಿಗೆ ಹೇಳಿದರು.
ನೀವು ಎಲ್ಲಿಯ ವರೆಗೆ ಹಿಂದುತ್ವವನ್ನು ಬೆಂಬಲಿಸುತ್ತೀರೋ ಅಲ್ಲಿಯ ವರೆಗೆ ಬ್ರಾಹ್ಮಣರು ನಿಮ್ಮೊಂದಿಗೆ ಇರುತ್ತಾರೆ. ಒಂದು ವೇಳೆ ನೀವು ಅವರ ವಿರುದ್ಧ ಹೋಗುವುದಾಗಲಿˌ ಹಿಂದುತ್ವದ ಕೆಡಕುಗಳ ಕುರಿತು ಮಾತನಾಡುವುದಾಗಲಿ ಮಾಡಿದಿರೋ ಅವರು ನಿಮ್ಮನ್ನು ಜೀವಂತ ಇಡಲಾರರು.
ಅವರು ಮತ್ತೊಂದು ಮಾತನ್ನು ಬಹಳ ಒತ್ತುಕೊಟ್ಟು ಹೇಳಿದರು : ” ನೀವು ಸ್ವರಾಜ್ಯ ಚಳುವಳಿ ಆರಂಭಿಸುವ ಮೊದಲು ಬ್ರಾಹ್ಮಣರೇ ತುಂಬಿದ ಕಾಂಗ್ರೆಸ್ ಸಮಿತಿˌ ಜಾತಿಯತೆ ಪೋಷಿಸುವ ಹಿಂದುತ್ವˌಮತ್ತು ಸಮಾಜದ ಮೇಲಿನ ಬ್ರಾಹ್ಮಣರ ಹಿಡಿತ ಈ ಮೂರು ನಿಮ್ಮನ್ನು ಬಹುವಾಗಿ ಕಾಡಲಿವೆ.”
1947
ಸ್ವತಂತ್ರ ನಂತರ ಮದ್ರಾಸ ಮತ್ತು ಮಹಾರಾಷ್ಟ್ರ ಪ್ರಾಂತ್ಯದ ಸರಕಾರಗಳು ದಮನಿತರಿಗೆ ಉದ್ಯೋಗದಲ್ಲಿ ಮೀಸಲಾತಿಯ ಘೋಷಣೆ ಮಾಡಿದವು. ಇದರಿಂದ ಕೆಂಡಾಮಂಡಲರಾದ ಬ್ರಾಹ್ಮಣರು ಅಂದಿನ ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿ ಶ್ರೀ ಓಮಂಡುರರ್ ಅವರನ್ನು ಗಡ್ಡವಿಲ್ಲದ ಪೇರಿಯಾರ್ ಎಂದು ಟೀಕಿಸಲಾರಂಭಿಸಿದರು. ಗಾಂಧಿಜೀಯವರಿಗೆ ಬ್ರಾಹ್ಮಣರು ಈ ವಿಷಯದಲ್ಲಿ ಪಿರ್ಯಾದು ನೀಡಿˌ ಮೀಸಲಾತಿ ನೀಡಬಾರದೆಂದು ಅಗ್ರಹಿಸಿದರು. ಗಾಂಧಿಜೀ ಬ್ರಾಹ್ಮಣರ ನಿಯೋಗ ಮತ್ತು ಓಮಂಡುರರ್ ಇಬ್ಬರೊಡನೆ ಪ್ರತ್ಯೇಕವಾಗಿ ಮಾತನಾಡಿ ಬ್ರಾಹ್ಮಣರ ನಿಯೋಗಕ್ಕೆ ಹೀಗೆ ಹೇಳಿದರು…
“ಬ್ರಾಹ್ಮಣರು ವೇದಗಳನ್ನು ಓದಿ ತನ್ನ ದಿನ ನಿತ್ಯದ ಧಾರ್ಮಿಕ ಕರ್ಮಗಳ ಮೂಲಕ ದೇವರ ಸೇವೆ ಮಾಡಲು ಹುಟ್ಟಿದವರು. ಈ ಸರಕಾರಿ ಉದ್ಯೋಗಗಳೆಲ್ಲ ಶೂದ್ರರಿಗೆ ಬಿಟ್ಟುಕೊಟ್ಟು ತಾವುಗಳು ತಮ್ಮ ಕರ್ಮಗಳಿಗೆ ವೇದಿಕೆ ಸಿದ್ಧಪಡಿಸಿಕೊಳ್ಳಿ.”
ಗಾಂಧಿಜೀಯವರ ಈ ಮಾತಿನಿಂದ ಬ್ರಾಹ್ಮಣರಿಗೆ ನಿರಾಶೆಯಾಯಿತು ಮತ್ತು ಆಕ್ರೋಶವೂ ಆಯಿತು.
ಈ ಘಟನೆ ಪೇರಿಯಾರ್ ಅವರಿಗೆ ತಿಳಿದಾಗ ಅವರು ಈ ಕೆಳಗಿನಂತೆ ಪ್ರತಿಕ್ರೀಯಿಸಿದರು..
ಓಹೋ ! ಗಾಂಧಿಜೀ ಈ ರೀತಿ ಹೇಳಿದರೆ. ಹಾಗಾದರೆ ಗಾಂಧಿಜೀಯವರ ಜೀವ ಅಪಾಯಕ್ಕೆ ಸಿಕ್ಕಿಕೊಂಡಿತು. ಬ್ರಾಹ್ಮಣರು ಅವರನ್ನು ಇನ್ನು ಜೀವಿಸಲು ಬಿಡಲಾರರು.
ಇದಾದ ಕೆಲವೇ ತಿಂಗಳಲ್ಲಿ ಬ್ರಾಹ್ಮಣನೊಬ್ಬನಿಂದ ಗಾಂಧಿಜೀ ಹತ್ಯೆ ನಡೆದೇಹೋಯಿತು.
ಪೇರಿಯಾರ್ ಸತ್ಯವಾದದ್ದನ್ನೇ ಗ್ರಹಿಸಿದ್ದರು. ಗಾಂಧಿಜೀಯವರ ಹತ್ಯೆ ಅವರನ್ನು ಘಾಡವಾಗಿ ನೋಯಿಸಿತ್ತು. ಪೇರಿಯಾರ್ ಅವರು ತಮ್ಮ ಶ್ರದ್ಧಾಂಜಲಿ ನೋಟ್ ಬರೆಯುವಾಗ ” ಈ ರಾಷ್ಟ್ರವನ್ನು ಗಾಂಧಿ ರಾಷ್ಟ್ರವೆಂದು ನಾಮಕರಣ ಮಾಡಬೇಕು ” ಎಂದು ಬರೆದಿದ್ದರು.
ಈ ಇಂಗ್ಲೀಷ ಲೇಖನವು ” ವಿ ದ್ರಾವಿಡಿಯನ್ಸ್ ” ಎಂಬ ಫೇಸ್ಬುಕ್ ಪೇಜಿನಿಂದ ಪಡೆದು ಕನ್ನಡಕ್ಕೆ ಅನುವಾದಿಸಿದ್ದೇನೆ.
ಲೇಖಕರು: ಡಾ. ಜೆ ಎಸ್ ಪಾಟೀಲ.