12 ನೇ ಶತಮಾನದಲ್ಲಿ ಚನ್ನಬಸವಣ್ಣನವರು ವಾಸವಿದ್ದ ಉಣಕಲ್ಲ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ

ಉಳವಿ ಚನ್ನಬಸವಣ್ಣನವರು
ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್
ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ನಡುವೆ ಇರುವ ಉಣಕಲ್ಲ ಪ್ರದೇಶದಲ್ಲಿ ಸುಮಾರು 750 ಎಕರೆ ಬೃಹದಾಕಾರವಾಗಿ ಹರಡಿರುವ ಉಣಕಲ್ಲ ಕೆರೆ ಸುಂದರ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಈ ಕೆರೆ ಆಕರ್ಷಿಸುತ್ತದೆ.
ಹುಬ್ಬಳ್ಳಿಲ್ಲಿ ವಾಸಿಸುವ ನಾಗರಿಕರಿಗೆ ಮೊದಲು ಈ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಬೈಲಹೊಂಗಲ ತಾಲೂಕಿನ ನಯಾನಗರ ಹತ್ತಿರ ಇರುವ ಮಲಪ್ರಭಾ ನದಿಯಿಂದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾದ ನಂತರ ಉಣಕಲ್ಲ ಕೆರೆಯ ನೀರನ್ನು ಉಪಯೋಗಿಸದೆ ಒಂದು ಸುಂದರವಾದ ಪಿಕ್ನಿಕ್ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಯಿತು.
12 ನೇ ಶತಮಾನದಲ್ಲಿ ಉಳವಿಗೆ ಹೋಗುವ ದಾರಿಯಲ್ಲಿ ವಿಶ್ವಗುರು ಬಸವಣ್ಣನವರ ಸೋದರ ಅಳಿಯ ಚನ್ನಬಸವಣ್ಣನವರು ಉಣಕಲ್ಲ ಕೆರೆಗೆ ಬಂದು ಕೆಲವು ದಿನಗಳ ಕಾಲ ಇಲ್ಲಿಯೇ ವಾಸವಿದ್ದು ಉಣಕಲ್ಲ ಮತ್ತು ಸುತ್ತಮುತ್ತ ಇರುವ ಪ್ರದೇಶದಲ್ಲಿ ವಾಸವಿರುವ ಜನರನ್ನು ಶರಣರನ್ನಾಗಿ ಮಾಡಿ ತಮ್ಮ ಇಡೀ ಬದುಕನ್ನೇ ಸಮಾಜದಲ್ಲಿನ ತಾರತಮ್ಯ ನಿರ್ಮೂಲನೆ

        ಉಳವಿ ಚನ್ನಬಸವಣ್ಣನವರು ಹೆಸರಿನ ಬೋರ್ಡ ಅಳವಡಿಸಿದ್ದು

, ಸಮಾನತೆ, ಕಂದಾಚಾರ, ಮೌಢ್ಯ ನಿಷೇಧಕ್ಕಾಗಿ ಮೀಸಲಿರಿಸಿ ತಮ್ಮ ಅಮೋಘ ಪಾಂಡಿತ್ಯ ಧಾರೆಯೆರೆದು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ್ದರು. ಈ ಕಾರಣದಿಂದ ಕೆರೆಯ ದಂಡೆಯಲ್ಲಿ ಶ್ರೀ ಚನ್ನಬಸವಣ್ಣನವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಚನ್ನಬಸವಣ್ಣನವರ ದೇವಸ್ಥಾನದಲ್ಲಿ ವರ್ಷವಿಡಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ, ವಚನ ಸಾಹಿತ್ಯದ ಕುರಿತು ಚಿಂತನ ಮಂಥನ, ಇಷ್ಟಲಿಂಗ ದಿಕ್ಷೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಉಣಕಲ್ಲ ಕೆರೆಗೆ ಚನ್ನಬಸವ ಸಾಗರ ಎಂದು ಹೆಸರು ಇಡಲು ಬಹಳ ವರ್ಷಗಳಿಂದ ಬೇಡಿಕೆ ಇತ್ತು ಸುಮಾರು 18 ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್ನಿನ ಸಾಮಾನ್ಯ ಸಭೆಯಲ್ಲಿ ಈ ಕೆರೆಗೆ ಚನ್ನಬಸವಣ್ಣನವರ ಹೆಸರಿಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾದರು ಸಹಿತ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ನಾಗರಿಕ ಸಂಸ್ಥೆಯು ಕೆರೆಗೆ ಹೆಸರಿಟ್ಟಿರಲಿಲ್ಲ.

ಕೆರೆಗೆ ಹೆಸರಿಸಲು ಹೆಚ್.ಡಿ.ಎಂ.ಸಿ ವಿಳಂಬ ಮಾಡಿದ ಕಾರಣ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ನಗರದ ಕೆಲವು ಜನರು ಧಾರವಾಡ ಹೈಕೋರ್ಟ್ ಪೀಠಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ಕೆರೆಗೆ ಚನ್ನಬಸವ ಸಾಗರ ಎಂದು ಹೆಸರಿಸಲು ಆದೇಶಿಸಿತ್ತು. ಹೆಸರು ಇಡಲು ವಿಳಂಬವಾದ ಕಾರಣ ಸಾರ್ವಜನಿಕರು ಹೆಸರಿಟ್ಟು ಬೋರ್ಡ ಅಳವಡಿಸಿದ್ದಾರೆ

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";