ಸುದ್ದಿ ಸದ್ದು ನ್ಯೂಸ್
ನಮ್ಮಲ್ಲಿ ಯಾರಿಗೂ ಸಂಸ್ಕೃತ ಭಾಷೆ ಬಗ್ಗೆ ದ್ವೇಷವಿಲ್ಲ, ಕಲಿಯಲು ಬಯಕೆ ಇರುವವರು ಧಾರಾಳವಾಗಿ ಕಲಿಯಬಹುದು, ಪ್ರಾಥಮಿಕ,ಪ್ರೌಢ, ಪದವಿಪೂರ್ವ ಹಾಗೂ ಪದವಿ ಶಿಕ್ಷಣಗಳಲ್ಲಿ ಐಚ್ಚಿಕ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ನಮ್ಮ ಶಿಕ್ಷಣದಲ್ಲಿ ಪ್ರಥಮ ಭಾಷೆ, ದ್ವಿತೀಯ ಭಾಷೆ ತೃತೀಯ ಭಾಷೆ ಅಂತ ವಿಂಗಡಣೆ ಮಾಡಿದ್ದಾರೆ, ತಾವು ಓದುವ ಮಧ್ಯಮವನ್ನ ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡು, ಇನ್ನುಳಿದಲ್ಲಿ ಐಚ್ಚಿಕ ವಿಷಯ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲಾ ವಿದ್ಯಾರ್ಥಿಗಳಿಗೆ ಇದೆ.ಇಷ್ಟು ದಿನ ತಮಗೆ ಬೇಕಾದ ವಿಷಯವನ್ನು ವಿದ್ಯಾರ್ಥಿಗಳು ಕಲಿಯುತ್ತ ಬಂದಿದ್ದಾರೆ, ಯಾರು ಅದನ್ನು ವಿರೋಧಿಸಿಲ್ಲ, ಆ ಭಾಷೆ ಬೇಕು, ಈ ಭಾಷೆ ಬೇಡ ಅಂತೆಲ್ಲ ಯಾರು ಅಡ್ಡಿ ಪಡಿಸಿಲ್ಲ.
ಈಗೆ ಸಮಸ್ಯೆ ಇರೋದು ಭಾಷಾ ಕಲಿಕೆಯಲ್ಲಿ ಅಲ್ಲಾ, ಅವುಗಳಿಗೆ ನೀಡುತ್ತಿರುವ ಪ್ರಾಶಸ್ತ್ಯತೆ ಬಗ್ಗೆ.ಕರ್ನಾಟಕದ ಆಡಳಿತ ಭಾಷೆ ಕನ್ನಡ ಇಲ್ಲಿ ಮೊದಲ ಪ್ರಾಶಸ್ತ್ಯ ಕನ್ನಡಕ್ಕೆ ನೀಡಬೇಕು, ಹೆಚ್ಚಿನ ಸೌಲಭ್ಯಗಳು, ಅನುದಾನಗಳು ಕನ್ನಡ ಭಾಷೆಗೆ ಬಳಕೆಯಾಗಬೇಕು. ಕನ್ನಡ ವಿಶ್ವವಿದ್ಯಾಲಯಗಳಿಗೆ ಎರಡು ಮೂರು ಕೋಟಿ ನೀಡಲು ಸರ್ಕಾರಗಳ ಬಳಿ ಹಣವಿಲ್ಲ,ಆದ್ರೆ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ 100 ಎಕರೆ ಜಾಗ ಹಾಗೂ 350 ಕೋಟಿಗಳಷ್ಟು ಹಣ ನೀಡಲು ಮುಂದಾಗಿದೆ. ಕನ್ನಡಿಗರ ಅಸಹನೆ ಇದ್ದಿದ್ದು ಇದರ ಬಗ್ಗೆಯೇ ಹೊರತು ಮತ್ತ್ಯಾವ ಭಾಷೆಯ ವಿರುದ್ಧವಲ್ಲ.
ಮೊದಲು ಕನ್ನಡ ವಿಶ್ವವಿದ್ಯಾಲಯಗಳನ್ನ ಉಳಿಸಿ, ಬೆಳಿಸಿ, ನಮ್ಮ ಕನ್ನಡ ವಿಶ್ವವಿದ್ಯಾಲಯಗಳಿಗೆ ಬೇಕಾದ ಅನುದಾನ ಸರಿಯಾಗಿ ನೀಡಿ, ಸೌಲಭ್ಯ ಕಲ್ಪಿಸಿಕೊಡಿ.. ನಂತರ ಬೇರೆ ಭಾಷೆಗಳ ಬಗ್ಗೆ ಗಮನ ಹರಿಸಿ.