ಸುದ್ದಿ ಸದ್ದು ನ್ಯೂಸ್
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ 01-04-2022 ರಿಂದ ಸಾವಿನ ಸಂದರ್ಭದಲ್ಲಿ ಪರಿಹಾರವನ್ನು ಪ್ರಸ್ತುತ 12500 ರೂ. ನಿಂದ 2 ಲಕ್ಷ ರೂಪಾಯಿಗಳಿಗೆ ಹಾಗೂ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ನೀಡಲಾಗುವ ಹಣವನ್ನು ಪ್ರಸ್ತುತ 12,500 ರೂ.ನಿಂದ 50,000 ರೂ.ಗೆ ಹೆಚ್ಚಿಸಿದೆ.
ಈ ಅಧಿಸೂಚನೆಯು ಫೆಬ್ರವರಿ 25 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಈ ಯೋಜನೆಯನ್ನು “ಹಿಟ್ ಮತ್ತು ರನ್ ಮೋಟಾರು ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ಯೋಜನೆ, 2022” ಎಂದು ಕರೆದಿದ್ದು ಮುಂಬರುವ ತಿಂಗಳ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ. “ಈ ನಿಧಿಯನ್ನು ಹಿಟ್ ಮತ್ತು ರನ್ ಅಪಘಾತ ಸಂದರ್ಭದಲ್ಲಿ ಪರಿಹಾರವನ್ನು ಒದಗಿಸಲು, ಅಪಘಾತವಾದ ಸಂತ್ರಸ್ತರಿಗೆ ಚಿಕಿತ್ಸೆ ಮತ್ತು ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಯಾವುದೇ ಇತರ ಉದ್ದೇಶಕ್ಕಾಗಿ ಬಳಸಲಾಗುವುದು” ಎಂದು ಪ್ರಕಟಣೆ ತಿಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2019 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ‘ಹಿಟ್-ಅಂಡ್-ರನ್’ ಎಂದು ವರ್ಗೀಕರಿಸಲಾದ ಅಪಘಾತಗಳಲ್ಲಿ 536 ಜನರು ಸಾವನ್ನಪ್ಪಿದ್ದಾರೆ ಮತ್ತು 1,655 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯಸಭೆಗೆ ತಿಳಿಸಿದರು.
ಇತ್ತೀಚಿನ ಸರ್ಕಾರದ ಅಂಕಿಅಂಶಗಳ ಪ್ರಕಾರ, ಒಟ್ಟು 2020ರಲ್ಲಿ ಭಾರತದಲ್ಲಿ 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, 1,31,714 ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.