ಬೆಳಗಾವಿ: ಕೆಲಸಕ್ಕೆ ಬಾರದವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಮುಗಿದೋಯ್ತು. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳುವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಿಎಂ ಭಾವನಾತ್ಮಕ ಭಾಷಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೇಳಿದ ಭವಿಷ್ಯ ಸುಳ್ಳಾಗಿಲ್ಲ. ಅಧಿಕಾರ ಶಾಶ್ವತ ಅಲ್ಲ ಅಂತಾ ಅವರು ಹೇಳಿದ್ದಾರೆ. ಅದು ಸಹಜವಾಗಿ ಬಂದ ಮಾತು, ಬದಲಾವಣೆ ಅನ್ನೋದು ಸಹಜ. ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಸಿಎಂ ಬಿಟ್ಟು ಹೊಸ ವ್ಯವಸ್ಥೆ ಬರುತ್ತದೆ ಎಂದರು.
ಇದೇ ವೇಳೆ ಯತ್ನಾಳ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಕೊಟ್ಟು ಸಿಎಂ ಮಾಡಿದರೆ ನಾನು ತೋರಿಸ್ತೇನೆ. ಕೆಲಸಕ್ಕೆ ಬಾರದವರನ್ನ ಮಾಡಿದರೆ ಮುಗಿದೋಯ್ತು. ಪ್ರಾಮಾಣಿಕ ನಿರ್ಣಯ ತೆಗೆದುಕೊಳ್ಳವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ ಎಂದು ಹೇಳಿದರು.