ವರದಿ:♦ಉಮೇಶ ಗೌರಿ, (ಯರಡಾಲ)
ಸೋಮೇಶ್ವರ ಫ್ಯಾಕ್ಟರಿ ಎಲೆಕ್ಷನ್; ಮಾಜಿ ಡೈರೆಕ್ಟರ್ ಪ್ರಕಾಶ ಜಪ್ತಿ ಪತ್ನಿ ಗೆಲುವಿಗೆ ಬಿಗ್ ಪ್ಲ್ಯಾನ್.!
ಬೈಲಹೊಂಗಲ ಮಾಜಿ ಶಾಸಕ ದಿವಂಗತ ರಮೇಶ ಬಾಳೇಕುಂದರಗಿ ಅವರು ಹುಟ್ಟು ಹಾಕಿದ್ದ ಬೈಲಹೊಂಗಲದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ರವಿವಾರ ಸೆಪ್ಟೆಂಬರ್ 10 ರಂದು (ನಾಳೆಯೇ) ಚುನಾವಣೆ ನಡೆಯಲಿದೆ. ಪ್ರಮುಖವಾಗಿ ಮೂರು ಪೆನೆಲ್‌ಗಳು ಅಧಿಕಾರದ ಗದ್ದುಗೆ ಏರಲು ಚುನಾವಣಾ ಸ್ಪರ್ಧೆಗೆ ಧುಮುಕಿವೆ!
ರೈತರ ಕಬ್ಬು ಶೀಘ್ರ ಕಟಾವು, ರೈತರ ಬ್ಯಾಂಕ್ ಖಾತೆಗೆ ಶೀಘ್ರ ಹಣ ಜಮೆ, ಷೇರುದಾರರಿಗೆ ಅಧಿಕ ಪ್ರಮಾಣದ ಸಕ್ಕರೆ ಸೇರಿದಂತೆ ರೈತಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ನಿರ್ದೇಶಕ ಪ್ರಕಾಶ ಜಪ್ತಿ ಈ ಬಾರಿ ತಮ್ಮ ಧರ್ಮ ಪತ್ನಿ ಜಯಶ್ರೀ ಜಪ್ತಿ ಅವರನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ. ಅ ವರ್ಗದ ಮಹಿಳಾ ಮೀಸಲು ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ʼಜಯಶ್ರೀ ಜಪ್ತಿʼ ʼಬಾಳೇಕುಂದರಗಿ ಸಹಕಾರʼ ಪೆನೆಲ್ ಮೂಲಕ ʼಗ್ಯಾಸ್ ಸಿಲಿಂಡರ್ʼ ಚಿಹ್ನೆಯೊಂದಿಗೆ ರೈತರಲ್ಲಿ ಮತಗಳಿಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕಳೆದ 2013 ರಿಂದ 2018ರ ವರೆಗೆ ʼಬಾಳೇಕುಂದರಗಿʼ ಪೆನೆಲ್ ಮೂಲಕವೇ ಪ್ರಕಾಶ ಜಪ್ತಿ ಕಾರ್ಖಾನೆಯ ನಿರ್ದೇಶಕರಾಗಿ ಅವರು ರೈತರ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಸೇವೆ ಸಲ್ಲಿಸಿದ್ದಾರೆ. ಕಾರ್ಖಾನೆಯ ಏಳಿಗೆಗಾಗಿ ನೂತನ ಯೋಚನೆ, ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮಸಿದ್ದಾರೆ. ಸೂಕ್ತ ಸಮಯಕ್ಕೆ ರೈತರಿಂದ ಕಾರ್ಖಾನೆಗೆ ಕಬ್ಬು ತರಿಸಿಕೊಳ್ಳುವುದು, ರೈತರ ಕಬ್ಬು ಕಟಾವಿಗೆ ಕಾರ್ಮಿಕರ ತಂಡಗಳ ನಿಯೋಜನೆ, ಶೀಘ್ರವೇ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ, ಪ್ರತಿ ಷೇರು ಸದಸ್ಯರಿಗೆ ನೀಡುತ್ತಿದ್ದ 25 ಕೆಜಿ ಸಕ್ಕರೆಯನ್ನು 50 ಕೆಜಿಗೆ ಏರಿಸುವಲ್ಲಿ ಪ್ರಮುಖ ಪಾತ್ರ ಸೇರಿದಂತೆ ರೈತಪರ ಕಾರ್ಯಗಳನ್ನು ಕೈಗೊಂಡು ʼರೈತ ಸ್ನೇಹಿʼ ಎನ್ನುವ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ವ್ಯವಸಾಯದ ಆಳ ಅಗಲ ಅರಿತಿರುವ ʼಪ್ರಕಾಶ ಜಪ್ತಿʼ ಅವರು ʼರೈತರ ಕಲ್ಯಾಣ, ಕಾರ್ಮಿಕರ ಕ್ಷೇಮಾಭಿವೃದ್ಧಿ ಮತ್ತು ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತೇವೆʼಎಂದು ಬಾಳೇಕುಂದರಗಿʼ ಪೆನೆಲ್‌ಗೆ ಮತ ನೀಡುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ.ಪಕ್ಷಾತೀತವಾಗಿ ರೈತರೊಂದಿಗೆ ನಿಲ್ಲುವ ʼರೈತ ಸ್ನೇಹಿʼಯಾಗಿದ್ದಾರೆ
ಈ ಹಿಂದೆ ಬಾಳೇಕುಂದರಗಿʼ ಪೆನೆಲ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರೈತ ಪರ ಸೇವೆ ಮಾಡಿರುವ ಜಪ್ತಿ ಅವರು ರೈತರು, ಕಾರ್ಖಾನೆಯ ಅಭಿವೃದ್ಧಿಗೆ ದುಡಿದಿದ್ದ ಪ್ರಕಾಶ ಜಪ್ತಿ ಈ ಬಾರಿ ರೈತರ ಸೇವೆಗಾಗಿ ತಮ್ಮ ಧರ್ಮ ಪತ್ನಿ ಜಯಶ್ರೀ ಜಪ್ತಿ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. ಪತ್ನಿಯ ಗೆಲುವಿಗಾಗಿ ಜಪ್ತಿ ಕಾಲಿಗೆ ಚಕ್ರ ಕಟ್ಟಿಕೊಂಡು ರೈತ ಮತದಾರ ಪ್ರಭುಗಳ ಬಳಿಗೆ ದೌಡಾಯಿಸುತ್ತಿದ್ದಾರೆ !
ಮತ್ತೊಮ್ಮೆ ತಮ್ಮ ಸೇವೆ ಮಾಡಲು ತಮ್ಮ ಅಮೂಲ್ಯ ಮತಗಳನ್ನು ನೀಡಿ ಚುನಾವಣೆಯಲ್ಲಿ ಗೆಲ್ಲಿಸಿರಿ ಎಂದು ಮತಯಾಚಿಸುತ್ತಿರುವ ʼಜಯಶ್ರೀ ಜಪ್ತಿʼ ಹಾಗೂ ಪ್ರಕಾಶ ಜಪ್ತಿ ಅವರು ʼಬಾಳೇಕುಂದರಗಿ ಸಹಕಾರʼ ಪೆನೆಲ್‌ನ್ನು ಬೆಂಬಲಿಸುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.