10,000 ಸಹಜ ಹೆರಿಗೆ ಮಾಡಿಸಿದ ಹಾಸನಾಂಬೆ.!
ಹಾಸನ ಜಿಲ್ಲೆ ಆಲೂರು ತಾಲೂಕಿನ ಪಾಳ್ಯಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕಳೆದ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ನಿಸಾರ್ ಫಾತಿಮಾರವರು ಇದುವರೆಗೂ ಸುಮಾರು ಹತ್ತು
ಸಾವಿರಕ್ಕೂ ಹೆಚ್ಚು ಸಹಜ ಹೆರಿಗೆ ಮಾಡಿಸಿದ್ದಾರೆ.
ಗರ್ಭಿಣಿಯರು ಹಾಗೂ ಸಾಮಾನ್ಯ ರೋಗಿಗಳಿಗೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಬರುವ ಗಾಯಾಳುಗಳ ಪಾಲಿಗೆ ಇವರು ಸಂಜೀವಿನಿಯಿದ್ದಂತೆ.
ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿ ಸೋಮಾರಿಗಳ, ಜೂಜುಕೋರರ ಅಡ್ಡೆಯಾಗಿದ್ದ ಆಸ್ಪತ್ರೆ ಆವರಣವನ್ನು ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲದಂತೆ ನೋಡಿಕೊಳ್ಳುತ್ತಿರುವ ಈ ಜನಾನುರಾಗಿ ವೈದ್ಯೆ ಹಾಸನದ ಜನರ ಪಾಲಿಗೆ ಸಾಕ್ಷಾತ್ ದೇವತೆ ಇದ್ದಂತೆ ಎಂದರೆ ತಪ್ಪಾಗಲಾರದು.
ಜಾತಿ ಮತ ಪಂಥ ಪಕ್ಷ ಅನ್ನದೆ ಇಂತವರನ್ನು ಗುರುತಿಸುವ ಕಾರ್ಯ ಆಗಬೇಕು. ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಇಂತಹ ಲಕ್ಷಾಂತರ ಕಾರ್ಯಕರ್ತರಿಗೆ ಹೃದಯಪೂರ್ವಕ ನಮನಗಳು