ಭಾವೈಕ್ಯತೆಗಾಗಿ ಹವಾಯಿ ಮಲ್ಲಯ್ಯ ಮುತ್ಯಾರ ನೇತೃತ್ವದಲ್ಲಿ ಮಹಾತ್ಮರ ಭಾವಚಿತ್ರಗಳ ಭವ್ಯ ಮೆರವಣಿಗೆ

ಉಮೇಶ ಗೌರಿ (ಯರಡಾಲ)

ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಜೈಭಾರತ ಮಾತಾ ಸೇವಾ ಸಮಿತಿ ಭಾವೈಕ್ಯತೆಗಾಗಿ ಹವಣಾಯಿ ಮಲ್ಲಿನಾಥ ಮುತ್ಯಾ ಮಹಾರಾಜರ ನೇತೃತ್ವದಲ್ಲಿ ಮಹಾತ್ಮರ ಭಾವಚಿತ್ರಗಳ ಭವ್ಯ ಮೆರವಣಿಗೆ ಶುಕ್ರವಾರ ನಡೆಯಿತು. ಹುಮನಾಬಾದ ಪ್ರವೇಶಿಸಿದ ಸದ್ಭಾವನಾ ಮೆರವಣಿಗೆಗೆ ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ರಾಜಶೇಖರ ಪಾಟೀಲ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಸದ್ಭಾವನಾ ಮೆರವಣಿಗೆ ಕುರಿತು ಉತ್ಸವ ಸಮಿತಿ ಪ್ರಮುಖ ಸಂಜೀವಕುಮಾರ ವಿವರಿಸಿದರು.ಜೈಭಾರತ ಮಾತಾ ಸೇವಾ ಸಮಿತಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಗುಂಡುರೆಡ್ಡಿ ಹಣಮಂತವಾಡಿ, ಸಮಿತಿ ರಾಷ್ಟ್ರೀಯ ವಕ್ತಾರ ವೈಜಿನಾಥ, ಮಲ್ಲಿಕಾರ್ಜುನ ಧಾರವಾಡ, ಫಕೀರಪ್ಪ, ಜಿಯಾಉಲ್ಲಾ ಮೊದಲಾದವರು ಭಾಗವಹಿಸಿದ್ದರು

Share This Article
";