ಮಾಣಿಕನಗರದಲ್ಲಿ ಮಾ.12ರಂದು ಮಾಣಿಕ ಪಬ್ಲಿಕ್ ಶಾಲೆ ಸಂಸ್ಥಾಪನಾ ದಿನದ ಸುವರ್ಣಮಹೋತ್ಸವ

ಉಮೇಶ ಗೌರಿ (ಯರಡಾಲ)

ಬೀದರ್: ಜಿಲ್ಲೆಯ ಹುಮನಾಬಾದ್ ತಾಲ್ಲೂಕು ಮಾಣಿಕನಗರದ ಪ್ರಸಿದ್ಧ ಮಾಣಿಕ ಪಬ್ಲಿಕ್ ಶಾಲೆಯ ಸಂಸ್ಥಾಪನಾ ದಿನದ ಸುವರ್ಣಮಹೋತ್ಸವ ಕಾರ್ಯಕ್ರಮ ಮಾ.12ರಂದು ಸಂಜೆ 5 ಕ್ಕೆ ಶಾಲಾ ಪ್ರಾಂಗಣದಲ್ಲಿ ನೆರವೇರಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಬೀದರ್ ವಾಯುಸೇನೆ ವಿಂಗ್ ಕಮಾಂಡರ್ ನರೇಂದ್ರ ವರ್ಮಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾಣಿಕಪ್ರಭು ಸಂಸ್ಥಾನ ಪೀಠಾಧಿಪತಿ ಪೂಜ್ಯ ಡಾ.ಜ್ಞಾನರಾಜ ಮಾಣಿಕಪ್ರಭು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡುವರು.

ಇದೇ ವೇಳೆ ವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಮಾಣಿಕಪ್ರಭು ಶಿಕ್ಷಣ ಸಮಿತಿ ಅಧ್ಯಕ್ಷ ಆನಂದರಾಜ ಪ್ರಭು ತಿಳಿಸಿದ್ದಾರೆ.

Share This Article
";