‘ಸರ್ಕಾರಿ ನೌಕರ’ರ ಸಾಮಾನ್ಯ ವರ್ಗಾವಣೆ ಅಧಿಕಾರ ಸಚಿವರ ಹೆಗಲಿಗೆ.!

ಉಮೇಶ ಗೌರಿ (ಯರಡಾಲ)

ಬೆಂಗಳೂರು: ಮುಂಬರುವ ಏಪ್ರಿಲ್ ನಿಂದ ಸರ್ಕಾರಿ ನೌಕರರ  ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯನ್ನು ಕೈಗೊಳ್ಳುವ ಅಧಿಕಾರವನ್ನು ಆಯಾ ಇಲಾಖೆಯ ಸಚಿವರಿಗೆ ವಹಿಸೋದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ.

ಈ ಸಂಬಂಧ ಸಿಎಂ ಬೊಮ್ಮಾಯಿ ಸಂಪುಟದ ಸಚಿವರು ಆಗ್ರಹಿಸಿದ್ದರು. ಅವರ ಆಗ್ರಹಕ್ಕೆ ಮಣಿದಿರುವಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಇದೀಗ ನೌಕರರ ಸಾಮಾನ್ಯ ವರ್ಗಾವಣೆ ಅಧಿಕಾರವನ್ನು ಇನ್ನೂ ಸಚಿವರ ಹೆಗಲಿಗೆ ವಹಿಸೋದಕ್ಕೆ ಕ್ರಮ ಕೈಗೊಳ್ಳಲು ತೀರ್ಮಾನಿಸಿರೋದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಪ್ರತಿ ವರ್ಷ ಹೊಸ ಆರ್ಥಿಕ ವರ್ಷಾರಂಭದಲ್ಲಿ, ನಿರ್ಧಿಷ್ಟ ಮಿತಿಗೆ ಒಳಪಟ್ಟು ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಈ ಪ್ರಕ್ರಿಯೆಯು ಬಹುತೇಕ ಸಿಎಂ ಕಾರ್ಯಾಲಯದ ಉಸ್ತುವಾರಿಯಲ್ಲೇ ನಡೆಯುವುದು ಪದ್ಧತಿಯಾಗಿದೆ.

Share This Article
";