ಎಂ ಗಂಗಣ್ಣ ಮಾಜಿ ಶಾಸಕರ ಅಭಿಮಾನಿ ಬಳಗದಿಂದ ಕೋಟೆಯ ಸ್ವಚ್ಛತಾ ಕಾರ್ಯಕ್ರಮ.

ಉಮೇಶ ಗೌರಿ (ಯರಡಾಲ)

ಮುದಗಲ್ಲ: ಕೆಲ ದಿನಗಳಿಂದ ʼಐತಿಹಾಸಿಕ ಕೋಟೆʼ ರಕ್ಷಣೆಗೆ ದೊಡ್ಡ ಪ್ರಯತ್ನ ಆರಂಭಗೊಂಡಿದೆ!
ಹೌದು. ಮುದಗಲ್ಲ ಕೋಟೆಯ ಜಾಲಿಗಿಡದ ಪೊದೆಯಲ್ಲಿ ಮುಚ್ಚಿ ಹೋಗಿದ್ದ ಐತಿಹಾಸಿಕ ಕೋಟೆ ಸ್ವಚ್ಛಗೊಳಿಸುವ ಕಾರ್ಯ ಸುಮಾರು ದಿನಗಳಿಂದ ಆರಂಭಿಸಲಾಗಿದೆ.

ಇಂದಿನ ಸ್ವಚ್ಛತೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಎಂ ಗಂಗಣ್ಣ ಅವರ ಪುತ್ರ  ಚಂದ್ರಶೇಖರ್ ಮಾತನಾಡಿದ ಅವರು ಮುದಗಲ್ಲ ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆಯಲ್ಲಿ ಜಾಲಿಗಿಡಗಳು ಬೆಳೆದು ಶಿಥಿಲಾವ್ಯವಸ್ಥೆಗೆ ಬಂದಿರುವುದ ರಿಂದ ಮುದಗಲ್ಲನ  ಹಲವಾರು ಸಂಘ-ಸಂಸ್ಥೆ, ಸಮುದಾಯದವರು ಮುತುವರ್ಜಿ ವಹಿಸಿ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡುವದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಆಗ ಶತ್ರುಗಳನ್ನು ಹಿಮ್ಮೆಟ್ಟಿಸಿ ಇಲ್ಲಿನ ಅರಸರು, ಪ್ರಜೆಗಳನ್ನು ಪೋಷಿಸಿದ್ದ ಮುದಗಲ್ಲ ಐತಿಹಾಸಿಕ ಕೋಟೆ ಹಿರಿಮೆ ರಾಜ್ಯದ ಕೋಟೆ ಇತಿಹಾಸದಲ್ಲಿಯೇ ಮಹತ್ವದ್ದು. ಇಂದು ನಾಗರಿಕ ಸಮಾಜದಲ್ಲಿ ಐತಿಹಾಸಿಕ ಸ್ಮಾರಕಗಳ ಬಗ್ಗೆ ಸ್ಥಳೀಯ ಆಡಳಿತ ಮತ್ತು ಜನತೆ ಹಾಗೂ ಹಲವಾರು ಸಂಘ ಸಂಸ್ಥೆಗಳು ಸಹಕಾರ ನೀಡಿದು ಸಂತಸದ ಸಂಗತಿ

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ. ಎಂ ಗಂಗಣ್ಣ ಅವರ ಪುತ್ರ ಚಂದ್ರು,ಗುರುಬಸಪ್ಪ ಸಂಜನ. ಗೋಪಾಲಕೃಷ್ಣ, ಮೈಬೂಬ್ ಬಾರಿಗಿಡ, ಎಸ್ ಎನ್‌  ನಹೀಮ್ ಕರವೇ ಅಧ್ಯಕ್ಷರು, ಅಶೋಕ್ ಗೌಡ ಪಾಟೀಲ್, ವೆಂಕೋಬ ಶಿಕ್ಷಕರು, ಮಂಜುನಾಥ್ ಬನ್ನಿಗೋಳ, ಮೈಬೂಬ್ ಕಡ್ಡಿಪುಡಿ ,ಮಲ್ಲಪ್ಪ ಮಾಟೂರು, ಅನಿಲ್ ಕುಮಾರ್ ಎಂ ವಿ ವಿಶ್ವೇಶ್ವರಯ್ಯ ಮುಖ್ಯೋಪಾಧ್ಯಯರು ಶಾನೂರ್ ಉಪಸ್ಥಿತರಿದ್ದರು.
 

ವರದಿ: ಮಂಜುನಾಥ ಕುಂಬಾರ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";