ಸುದ್ದಿ ಸದ್ದು ನ್ಯೂಸ್
ಎಂ.ಕೆ. ಹುಬ್ಬಳ್ಳಿ: ಬೆಳಗಾವಿ ರಾಜ್ಯದ ಪ್ರಮುಖ ಆಹಾರ ಉತ್ಪಾದನಾ ಸ್ಥಳ. ಇಲ್ಲಿ ವಾಣಿಜ್ಯ ಬೆಳೆಗಳು ಪ್ರಮುಖ ಆರ್ಥಿಕ ಮೂಲಗಳಾದರೆ , ಇಲ್ಲಿಯ ತಾಜಾ ತರಕಾರಿಗಳು ಅನೇಕ ರಾಜ್ಯಗಳಿಗೆ ರಪ್ತಾಗುತ್ತವೆ. ಇನ್ನು ಇಲ್ಲಿಯ ಇತ್ತೀಚಿನ ಬೆಳವಣಿಗೆಗಳು ಕೃಷಿ ಕ್ಷೇತ್ರಲ್ಲಿ ಭರವಸೆಯನ್ನು ನೀಡಿವೆ.ಜಿಲ್ಲೆಯ ಅನೇಕ ರೈತರು ರಾಸಯನಿಕಗಳನ್ನು ಕಡಿಮೆ ಮಾಡಿ ಸಾವಯವದತ್ತ ಮರುಳುತ್ತಿದ್ದಾರೆ. ನೌಕರಿ ಕನಸು ಕಾಣುತ್ತಾ ಕುಳಿತ ಅನೇಕ ಯುವಕರು ನೈಸರ್ಗಿಕ ಕೃಷಿ ಮಾಡಿ ಯಶಸ್ಸು ಕಾಣುತ್ತಿದ್ದಾರೆ.ಮತ್ತೆ ಇನ್ನು ಕೆಲವು ವೃತಿನಿರತರು ತಮ್ಮ ಕಾಯಕದ ನಡುವೆ ಬಿಡುವು ಮಾಡಿಕೊಂಡು ಕೃಷಿಕ್ಷೇತ್ರಕ್ಕೆ ಕಾಯಕಲ್ಪ ನೀಡಿ, ಇತರ ಸೂತ್ತಲಿನ ರೈತರಿಗೆ ಮಾದರಿಯಾದರಿಯಾಗಿದ್ದಾರೆ. ಅಂತಹವರಲ್ಲಿ ಕಿತ್ತೂರಿನ ತಾಲೂಕಿನ ತಾಲೂಕಿನ ಎಮ್.ಕೆ.ಹುಬ್ಬಳ್ಳಿಯ ಜಗದೀಶ ಹಾರೂಗೊಪ್ಪ ದಂತ ವೈದ್ಯರು ಒಬ್ಬರು.ಹಲವು ದಿನಗಳಿಂದ ಕೃಷಿ ನೆಂಟು ಇಟ್ಟುಕೊಂಡು ಅನೇಕ ಮಾದರಿ ರೈತರ ತೋಟಗಳನ್ನು ಕ್ಷೇತ್ರದರ್ಶನ ಮಾಡಿ ಅಲ್ಲಿರುವ ಅನೇಕ ಅಂಸಗಳನ್ನು ತಾವು ಪ್ರಯೋಗ ಮಾಡುತ್ತಿದ್ದಾರೆ.
ಸಾಗಿ ಬಂದ ಬಗೆ
ಕಿತ್ತೂರಿನ ಆಸುಪಾಸು ಮುಂಚೆ ಚೆನ್ನಾಗಿ ಮಳೆ ಬೀಳುತ್ತಿತ್ತು. ಬೆಳೆಗಳಿಗೆ ಕೊರತೆ ಕಂಡುಬರುತ್ತಿರಲಿಲ್ಲ. ಬರುಬರುತ್ತ ಮಳೆ ಕಡಿಮೆಯಾಗಿದೆ. ಅದಕ್ಕಾಗಿ ವಾತವರಣಕ್ಕೆ ಅನುಗುಣವಾಗಿ ನಮ್ಮ ಬೇಸಾಯ ಕ್ರಮಗಳನ್ನು ಬದಲಿಸುವುದು ಅನಿವರ‍್ಯವಾಗಿದೆ. ಇನ್ನು ನೀರು ಕಡಿಮೆ ಮಾಡಿ ಬೇಸಾಯ ಮಾಡಬೇಕಿದೆ.ಇದನ್ನರಿತ ವೈದ್ಯರು ದಶಕಗಳಿಂದ ಜಿಲ್ಲೆಯ ಅನೇಕ ಸಾವಯವ ರೈತರ ಬಳಗದಲ್ಲಿ ಗುರುತಿಸಿಕೊಂಡು, ಅನೇಕ ಕೃಷಿ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ತಮ್ಮ ೬ ಏಕರೆ ಜಮೀನಿನಲ್ಲಿ ವನಾಧಾರಿತ ಕೃಷಿ ಮಾಡಲು ಶುರು ಮಾಡಿದರು. ಸಂಪೂರ್ಣವಾಗಿ ಕೊಟ್ಟಿಗೆ ಗೊಬ್ಬರ ಮತ್ತು ತಮ್ಮ ಸೂತ್ತಲಿನ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಭೂಮಿಗೆ ಕಾಯಕಲ್ಪ ನೀಡಿದರು. ೬ ಏಕರೆ ಭೂಮಿಯಲ್ಲಿ ೧ ಏಕರೆ ಭೂಮಿಯಲ್ಲಿ ಅರಣ್ಯ ಆಧಾರಿತ ಕೃಷಿ ಮಾಡಿ ಜೈವಿಕ ಕ್ರೀಯೆಯ ಜೊತೆ ಆದಾಯ ನೀರಿಕ್ಷೆ ಇಟ್ಟುಕೊಂಡು ಸುಮಾರು ೧೦೦೦ ಸಾವಿರ ಮರಗಳನ್ನು ರಾಜ್ಯದ ಹಲವು ನರ್ಸರಿಗಳಿಂದ ತಂದರು.ಅದರಲ್ಲಿ ಬೇವು ೩೦ ,ಅರಳಿ ೩ ,ಅತ್ತಿ ೨೦ ,ಆಲ ೩ ಮತ್ತು ೩೦ ತರಹದ ಹಣ್ಣಿನ ಮರಗಳು ಬೆಳಸಿದ್ದಾರೆ. ಹಲವು ಔಷಧಿ ಸಸ್ಯಗಳನ್ನು ನೆಟ್ಟಿದ್ದಾರೆ. ೩೪ ತರಹದ ದಾಸವಾಳವನ್ನು ಇವರ ತೋಟದಲ್ಲಿ ನೋಡಬಹುದಾಗಿದೆ.ಮದರಂಗಿ ,ಗೆಣಸು,ತೆಂಗು ಸಾಗವಾನಿ ,ಬಿದಿರು,ಲಿಂಬೆ, ಈ ರೀತಿಯ ಕೃಷಿ ಇರುವದರಿಂದ ಇಲ್ಲಿ ಜೈವಿಕ ಕ್ರೀಯೆ ಜೀವಂತವಾಗಿದೆ. ಹೀಗಾಗಿ ಪರಾಗಸ್ಪರ್ಶ ಕ್ರೀಯೆಗೆ ಸಹಾಯವಾಗುವ ಚಿಟ್ಟೆ , ಜೇನು ಗೂಡುಗಳನ್ನು ಇಲ್ಲಿ ಕಾಣಬಹುದಾಗಿದೆ.ಬಹುಮಹಡಿ ಪದ್ದತಿಯಲ್ಲಿ ದೊಡ್ಡಮರಗಳು, ಬಳ್ಳಿ, ಕುರುಚಲು ಸಸ್ಯ, ಗಡ್ಡೆ ಗೆಣಸು, ಬೇವು ಮತ್ತು ಹೊಂಗೆ ಕಾಂಬೀನೇಷನ ಮರಗಳನ್ನು ಬೆಳೆದಿದ್ದಾರೆ. ಮರಗಳು ಸಾಕಷ್ಟು ಆಳ ಇರುವದರಿಂದ ತೇವಾಂಶದಿAದ ಕೂಡಿದೆ. ಮನೆಗೆ ಬೇಕಾದ ತರಕಾರಿಗಳನ್ನು ಬೆಳೆಯಲಾಗುತ್ತದೆ ಇದರಿಂದ ಒಂದು ಕುಟುಂಬಕ್ಕೆ ಹೊರಗಿನಿಂದ ಎನ್ನನ್ನೂ ತರದೆ ತಮಗೆ ಬೇಕಾದ ಸಕಲವನ್ನು ಜಮೀನಿನಲ್ಲಿ ಕಂಡುಕೊAಡಿದ್ದಾರೆ.ಇನ್ನು ಊಳಿದ ಭೂಮಿಯಲ್ಲಿ ಸೋಯಾ,ಜೋಳ,ತರಕಾರಿಗಳನ್ನು ಬೆಳೆಯುತ್ತಾರೆ. ಈ ಎಲ್ಲ ಮೂಲಗಳಿಂದ ವಾರ್ಷಿಕವಾಗಿ ೫ ಲಕ್ಷ ಆದಾಯ ಪಡೆಯುತ್ತಾರೆ.
ನೀರಿನ ಸದ್ಭಳಕೆ
ಇವರ ತೋಟದ ನೀರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳೆ ಇರುವುದರಿಂದ ನೀರು ಇಂಗಿ ಇಲ್ಲಿ ತೇವಾಂಶವಿದೆ.ಇನ್ನು ಬಿದ್ದ ಮಳೆಯ ನೀರು ಹರಿದು ನಿರುಪಯುಕ್ತವಾಗುದನ್ನು ತಡೆಯಲು ಇವರು ಕೃಷಿಹೊಂಡವನ್ನು ನಿರ್ಮಿಸಿದ್ದಾರೆ.ಈ ಕೃಷಿಹೊಂಡಕ್ಕೆ ಮೀನು ತಂದು ಬಿಡುವ ಯೋಜನೆ ಹಾಕಿಕೊಂಡಿದ್ದಾರೆ.ಇನ್ನು ಮರಗಳಿಗೆ ಹನಿ ನೀರಾವರಿ ಮೂಲಕ ಮರಗಳಿಗೆ ನೀರೂಣಿಸುತ್ತಾರೆ. ಇದರಿಂದ ನೀರು ಪೋಲಾಗುವುದನ್ನು ತಡೆದಿದ್ದಾರೆ.
ಹೊಂಗೆಯ ಮಹತ್ವ
ಹೊಂಗೆ ನೆರಳನ್ನು ತಾಯಿಯ ಮಡಿಲು ಎನ್ನುವಂತೆ ೨೦೦ ಹೊಂಗೆ ಮರಗಳನ್ನು ಬಹುಪಯೋಗಿಯನ್ನಾಗಿ ಮಾಡಿಕೊಂಡಿದ್ದಾರೆ. ಇದು ವಾತಾವರಣದ ಸ್ಥೀರಿಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಈ ಮರ ನೀರು ಕಡಿಮೆ ಉಪಯೋಗಿಸಿ ಎಲೆಗಳನ್ನು ಯಥೇಚ್ಚವಾಗಿ ನೀಡುವದರಿಂದ ದನಗಳ ಕಾಲಲ್ಲಿ ಬಿಡುತ್ತಾರೆ.ಹೀಗಾಗಿ ಎಲೆ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಔಷಧಿಗುಣ ಹೊಂದಿದ ಇದರ ಟೊಂಗೆ ಅಥವಾ ಬೇರನ್ನು ನೀರಿನಲ್ಲಿ ಬಿಡುವದರಿಂದ ಅನೇಕ ಅನುಪಯುಕ್ತ ಕ್ರೀಮಿಗಳು ಸಾಯುತ್ತವೆ.ಇನ್ನು ಹೊಂಗೆ ಇರುವದರಿಂದ ಜೀಕ(ಹುಲ್ಲು) ಬೆಳೆಯುವುದಿಲ್ಲ.ಪಶುಗಳ ಉಣ್ಣೆ ನಿವಾರಣೆಗೆ ಇದರ ಎಲೆಗಳ ರಸವನ್ನು ಉಪಯೋಗಿಸುತ್ತಾರೆ.ಇನ್ನು ಇದರ ಕಾಯಿ ಈಗ ಕೊಯ್ಲಿಗೆ ಬರುತ್ತಿದ್ದು ಬಯೋಡಿಸೈಲ್ ಮಾರುಕಟ್ಟೆ ನೀರಿಕ್ಷೆಯಲ್ಲಿವೆ. ಸಂಪರ್ಕ ಸಂಖ್ಯೆ:೯೪೪೮೪೦೪೬೯೭
ಇಂದಿನ ದಿನಗಳಲ್ಲಿ ಪರಿಸರದ ಪೂರಕ ಬೇಸಾಯ ಅವಶ್ಯವಾಗಿದೆ.ಜೊತೆಗೆ ರೈತ ಆದಾಯ ಕೂಡಾ ಅಷ್ಟೇ ಮುಖ್ಯವಾಗಿದೆ.ಇವೆಲ್ಲವನ್ನು ಗಮನದಲ್ಲಿಟ್ಟು ಬೇಸಾಯ ಮಾಡಿದರೆ ಯಶಸ್ಸು ಸಾಧ್ಯ.
ಡಾ.ಜಗದೀಶ ಹಾರುಗೊಪ್ಪ : ನನಗೆ ಎಲ್ಲಕ್ಕಿಂತ ಮುಖ್ಯವಾಗಿ ಕೃಷಿ ಖುಷಿಯನ್ನು ನೀಡಿದೆ.ಇನ್ನು ವಾತವರಣದ ಸುಗ್ಗಿಗೆ ನನ್ನ ಪಾತ್ರ ಇರುವದರಿಂದ ವನಾಧಾರಿತ ಕೃಷಿಯನ್ನು ಮಾಡುತ್ತಾ ಬಂದಿದ್ದೇನೆ.ನೀರು ಗಾಳಿ ಭೂಮಿ ಈ ಮೂರನ್ನು ಊಳಿಸುವ ನಿಟ್ಟಿನಲ್ಲಿ ಕೃಷಿಕನ ಪಾತ್ರ ದೊಡ್ಡದು.