ನಾಲ್ಕು ದಿನ ಪತ್ರಿಕೆಗಳ ಹಾಗೂ ಭಾರತೀಯ ಜನತಾ ಪಕ್ಷದ ಕಾಲು ಎಳೆದ ನೆಟ್ಟಿಗರು

ಸುದ್ದಿ ಸದ್ದು ನ್ಯೂಸ್ ಕಿತ್ತೂರು: ದೇಶದಾದ್ಯಂತ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಭಾರತ ಐಕ್ಯತಾ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದ್ದು ಕರ್ನಾಟಕದಲ್ಲಿ ಯಾತ್ರೆ ಪ್ರಾರಂಭವಾಗಿ ಯಶಸ್ವಿ ಪಡೆಯುತ್ತಿದ್ದಂತೆ ಭಾರತೀಯ ಜನತಾ ಪಕ್ಷ ಅನೇಕ ದಿನಪತ್ರಿಕೆಗಳಲ್ಲಿ ಅಕ್ಟೋಬರ್ 6 ರ ಗುರುವಾರದಂದು ಸುದ್ದಿ ರೂಪದ ಜಾಹಿರಾತು ಪ್ರಕಟಿಸಿದ ಹಿನ್ನಲೆಯಲ್ಲಿ ಜಾಹೀರಾತುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುವುದರ ಮೂಲಕ ಬಿಜೆಪಿಗೆ ಮುಖಭಂಗವಾಗಿದೆ.
ವಿಶ್ವವಾಣಿ, ಹೊಸದಿಗಂತ, ಸಂಯುಕ್ತ ಕರ್ನಾಟಕ ಮತ್ತು ಕನ್ನಡಪ್ರಭ ದಿನ ಪತ್ರಿಕೆಗಳು ತಮ್ಮ ತಮ್ಮ ಮುಖಪುಟದಲ್ಲಿ ಒಂದೇ ತರಹದ ಸುದ್ದಿ ರೂಪದಲ್ಲಿ ಜಾಹೀರಾತನ್ನು ಪ್ರಕಟಿಸಿದದಾರೆ. ಪ್ರಕಟಿಸಿದ ಎಲ್ಲಾ ಪತ್ರಿಕೆ ಮತ್ತು ಜಾಹೀರಾತು ಕೊಟ್ಟ ಭಾರತೀಯ ಜನತಾ ಪಕ್ಷವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾಹೀರಾತನ್ನು ಸುದ್ದಿಯಂತೆ ಪ್ರಕಟಿಸಿದ ವಿಶ್ವವಾಣಿ, ಹೊಸದಿಗಂತ, ಸಂಯುಕ್ತ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಗಳಿಗೆ ಸಂಪಾದಕ ಮತ್ತು ವಿನ್ಯಾಸಗಾರ ಒಬ್ಬನೇ ನಾ ಬೇರೆ ಬೇರೆನೊ ಎಂದು ಪ್ರಶ್ನಿಸುವ ಮೂಲಕ ಪತ್ರಿಕೆಗಳ ಕಾಲು ಎಳೆದಿದ್ದಾರೆ,
ದಿನ ಪತ್ರಿಕೆಗಳನ್ನು ನೋಡುವಾಗ ಓದುವವರಿಗೆ ಇದು ಒಂದು ಸುದ್ದಿಯಂತೆ ಕಾಣುತ್ತದೆ ಆದರೆ ಇದು ಸುದ್ದಿ ಅಲ್ಲ ಬದಲಾಗಿ ಭಾಜಪಾ ನೀಡಿದ ಜಾಹಿರಾತು. ಜಾಹೀರಾತು ಎಂಬುದನ್ನು ತಿಳಿಯಲು ಪತ್ರಿಕೆಯ ಕೆಳಗೆ “ಪ್ರಕಟಣೆ ಬಿಜೆಪಿ ಕರ್ನಾಟಕ” ಎಂಬುದಾಗಿ ಬರೆದಿರುವುದನ್ನು ಕಾಣಬಹುದು.

ಹೊಸ ದಿಗಂತ ದಿನ ಪತ್ರಿಕೆ ಮುಖಪುಟ
ಕನ್ನಡಪ್ರಭ ದಿನ ಪತ್ರಿಕೆ ಮುಖಪುಟ
ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಮುಖಪುಟ
ವಿಶ್ವವಾಣಿ ದಿನ ಪತ್ರಿಕೆಯ ಮುಖಪುಟ

ಪ್ರಾರಂಭದಲ್ಲಿ ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ಮರು ಮುದ್ರಿಸಲಾಗಿದೆ ಎಂಬ ರೀತಿಯಲ್ಲಿ ವಿವರಣೆಯನ್ನು ಕೊಡಲಾಗಿದೆ.
ಭಾಜಪಾ ಏನೇ ತಿಪ್ಪರಲಾಗಾ ಹಾಕಿದರು ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಮುಟ್ಟಬೇಕಾದ ಕಡೆಗೆ ಮುಟ್ಟಿದೆ ಎಂದು ಹೇಳುವುದರ ಜೊತೆಗೆ ಜಾಹೀರಾತು ಪ್ರಕಟಿಸಿದ ದಿನ ಪತ್ರಿಕೆಗಳ ಮೇಲೆ ಕೆಂಡಾಮಂಡಲವಾಗಿದ್ದಾರೆ. ಜಾಹೀರಾತು ಪ್ರಕಟಿಸಿದ ಪತ್ರಿಕೆಗಳು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

”ಭಾರತೀಯ ಜನತಾ ಪಕ್ಷ ಕೀಳು ಮಟ್ಟದ ರಾಜಕೀಯ ಮಾಡುವುದರಲ್ಲಿ ಎತ್ತಿದ ಕೈ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಸಾಕಷ್ಟು ಯಶಸ್ವಿ ಕಂಡ ಹಿನ್ನಲೆಯಲ್ಲಿ ಬಿಜೆಪಿ ಹತಾಶೆಯಿಂದ ಪ್ರತಿಷ್ಠಿತ ನಾಲ್ಕು ದಿನಪತ್ರಿಕೆಗಳಿಗೆ ಜಾಹಿರಾತು ರೂಪದಲ್ಲಿ ಹಳೆಯ ಸುದ್ದಿಗಳನ್ನು ಪ್ರಕಟಿಸಲು ತಿಳಿಸಲು ಮುಂದಾಗಿದ್ದು ಖಂಡನೀಯ” ಬಾಬಾಸಾಹೇಬ ಪಾಟೀಲ ಕಾಂಗ್ರೇಸ್ ಮುಖಂಡರು ಚನ್ನಮ್ಮನ ಕಿತ್ತೂರು ಮತಕ್ಷೇತ್ರ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";