ಬೆಂಗಳೂರು(ಅ.14): ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಶನಿವಾರ ಮತ್ತೊಂದು ನಕಲಿ ಸ್ಟಾಂಪ್ ಪೇಪರ್ ಹಗರಣವನ್ನು ಭೇದಿಸಿದ್ದು, ಎಚ್‌ಎಎಲ್ ಪೊಲೀಸ್ ವ್ಯಾಪ್ತಿಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ನಕಲಿ ಸ್ಟ್ಯಾಂಪ್ ಪೇಪರ್‌ಗಳಲ್ಲಿ ಭೂ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರಿದ ಹಿನ್ನೆಲೆಯಲ್ಲಿ ಪೊಲೀಸರು ವಂಚನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.ಹಲಸೂರು ಮತ್ತು ಎಚ್‌ಎಎಲ್ ಪೊಲೀಸರು ಕೆಲವು ಸಿವಿಲ್ ದಾಖಲೆಗಳು ನಕಲಿ ಎಂದು ಪತ್ತೆ ಹಚ್ಚಿದ ನಂತರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ, SIT ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸಿದೆ ಮತ್ತು ಸುಳಿವುಗಳ ಆಧಾರದ ಮೇಲೆ ಎರಡು ಪೊಲೀಸ್ ತಂಡಗಳು ದಾಳಿ ನಡೆಸಿ ನಕಲಿ ಸ್ಟಾಂಪ್ ಪೇಪರ್‌ಗಳು, ನಕಲಿ ಸೀಲುಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿವೆ.