ಆಸ್ತಿಗಾಗಿ ಮೃತ ವೃದ್ದೆಯ ಹೆಬ್ಬೆಟ್ ಒತ್ತಿಸಿಕೊಂಡಿದ್ದವನ ಮೇಲೆ ಎಫ್​ಐಆರ್

ಉಮೇಶ ಗೌರಿ (ಯರಡಾಲ)

ಮೈಸೂರು:ಆಸ್ತಿಗಾಗಿ ಖಾಲಿ ಪತ್ರಕ್ಕೆ ಮೃತ ವೃದ್ದೆಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಪ್ರಕರಣ ಸಂಬಂಧಪಟ್ಟಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮೈಸೂರಿನ ಶ್ರೀರಾಂಪುರದ ಜಯಮ್ಮ ನವೆಂಬರ್ 16ರಂದು ಮೃತಪಟ್ಟಿದ್ದರು. ಈ ವೇಳೆ ಮೃತ ಜಯಮ್ಮರ ಸಹೋದರಿ ಮಗ ಸುರೇಶ್​ ಎಂಬಾತ ಬಾಂಡ್​ ಪೇಪರ್​ಗೆ ಮೃತ ವೃದ್ದೆಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದ. ಇದನ್ನು ಮೃತ ಜಯಮ್ಮ ಸಹೋದರನ ಸೊಸೆ ಕಾವ್ಯ ಎಂಬುವವರು ಪ್ರಶ್ನಿಸಿದ್ದರು. ಜೊತೆಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಳ್ಳುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದರು.

ಇದೀಗ ಸುರೇಶ್​ ಎಂಬಾತನ ವಿರುದ್ಧ ಐಪಿಸಿ ಸೆಕ್ಷನ್ 420, 467, 511 ಅಡಿಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Share This Article
";