ರಾಜ್ಯ ಚುನಾವಣೆಗೆ ಉಳಿದೆಲ್ಲಾ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದರೂ ಗಜಪ್ರವಸದಂತಾಗಿದ್ದ ಬಿಜೆಪಿಯ ಮೊದಲ ಪಟ್ಟಿ ಕೊನೆಗೂ ಇಂದು ಏ.11 ರಂದು ಬಿಡುಗಡೆಯಾಗಿದೆ.
ರಾತ್ರಿ 9 ಗಂಟೆ ವೇಳೆಗೆ ಕೇಂದ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದರು.
ರಾಜ್ಯದಲ್ಲಿ ಹೊಸ ತಲೆಮಾರಿನ ನಾಯಕತ್ವ ಬಂದಿದೆ ಎಂದು ಹೇಳುವ ಮೂಲಕ ಹೊಸ ಅಭ್ಯರ್ಥಿಗಳಿಗೆ ಆದ್ಯತೆ ನೀಡಿರುವ ಸುಳಿವನ್ನು ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರ ಸಿಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ, 9 ವೈದ್ಯರಿಗೆ, ನಿವೃತ್ತ ಐಎಎಸ್, ಐಪಿಎಸ್ ಗಳಿಗೆ ಟಿಕೆಟ್ ನೀಡಲಾಗಿದೆ. 32 ಒಬಿಸಿ ಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗೆ ಟಿಕೆಟ್ ಘೋಷಿಸಲಾಗಿದೆ.
ಬೆಳಗಾವಿಯ 18 ಕ್ಷೇತ್ರಗಳ ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ನಾಯಕರಿಗೆ ನೂರೆಂಟು ಸವಾಲು ಎದುರಾಗಿತ್ತು ಎನ್ನಲಾಗಿದ್ದು ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಪ್ರತಿಷ್ಠೆಯ ಗುದ್ದಾಟ ನಡೆದಿತ್ತು, ಈಗ ತೆರೆ ಬಿದ್ದಿದ್ದು ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಕಿತ್ತೂರು – ಮಹಾಂತೇಶ್ ದೊಡ್ಡಗೌಡರ
ಖಾನಾಪುರ – ವಿಠ್ಠಲ ಹಲಗೇಕರ
ಬೈಲಹೊಂಗಲ – ಜಗದೀಶ್ ಮೆಟಗುಡ್
ಸವದತ್ತಿ – ರತ್ನಾ ಮಾಮನಿ
ರಾಮದುರ್ಗ – ಚಿಕ್ಕರೇವಣ್ಣ
ಅಥಣಿ – ಮಹೇಶ್ ಕುಮಠಳ್ಳಿ
ಕಾಗವಾಡ – ಶ್ರೀಮಂತ ಪಾಟೀಲ್
ರಾಯಬಾಗ – ದುರ್ಯೋಧನ ಐಹೊಳೆ
ಕುಡಚಿ – ಪಿ. ರಾಜೀವ್
ಚಿಕ್ಕೋಡಿ : ರಮೇಶ್ ಕತ್ತಿ
ಯಮಕನಮರಡಿ : ಬಸವರಾಜ ಹುಂದ್ರಿ
ಹುಕ್ಕೇರಿ – ನಿಖಿಲ್ ಕತ್ತಿ
ನಿಪ್ಪಾಣಿ – ಶಶಿಕಲಾ ಜೊಲ್ಲೆ
ಗೋಕಾಕ್ – ರಮೇಶ್ ಜಾರಿಕಿಹೊಳಿ
ಅರಭಾವಿ – ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ ಉತ್ತರ – ಡಾ. ರವಿ ಪಾಟೀಲ್
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
ಬೆಳಗಾವಿ ಗ್ರಾಮಿಣ – ನಾಗೇಶ್ ಮನ್ನೋಳಕರ್