ಸಚಿವ ಜಾರಕಿಹೊಳಿ ಮನವೂಲಿಕೆ ಪ್ರತಿಭಟನೆ ಹಿಂದಕ್ಕೆ ಪಡೆದ ರೈತರು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್‌

ಚನ್ನಮ್ಮನ ಕಿತ್ತೂರು: ಕಳೆದ ಎರಡು ದಿನಗಳಿಂದ ತಾಲೂಕಾ ಆಡಳಿತ ಸೌದದ ಮುಂದೆ ನಡೆಸುತ್ತಿದ್ದ ಅಹೋರಾತ್ರಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿ ರೈತರು ಹಾಗೂ ರೈತ ಮುಖಂಡರು ತಮ್ಮ ಪ್ರತಿಭಟನೆಯನ್ನು ಮೊಟಕುಗೊಳಿಸಿ ಹಿಂದಕ್ಕೆ ಪಡೆದಿದ್ದಾರೆ.

ಸಾವಿರಾರು ಎಕರೆ ಖಾಸಗಿ ಅರಣ್ಯ ಭೂಮಿಯಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡಿ ಅದರಲ್ಲಿ ಒಕ್ಕಲುತನ ಮಾಡುತ್ತ ಬಂದಿದ್ದು ನಾವು ಊಳುವ ಭೂಮಿಯನ್ನು ನಮ್ಮ ಹೆಸರಿನಲ್ಲಿ ನೊಂದಾಯಿಸಿ ಫಹಣಿ ಪತ್ರ ವಿತರಿಸುವಂತೆ ಒತ್ತಾಯಿಸಿ ನಿನ್ನೆಯ ದಿನ ಸುಮಾರು ಎರಡು ಗಂಟೆ ರಾಷ್ಟ್ರೀಯ ಹೆದ್ದಾರಿ-4 ಬಂದ್ ಮಾಡುವ ಮೂಲಕ ಕಿತ್ತೂರು ತಾಲೂಕಾ ಆಡಳಿತ ಸೌಧದ ಎದುರಗೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

ಹಿಂದಿನ ದಿನ ಗೆದ್ದಾರಿಯಲ್ಲಿ ಜಾನುವಾರಗಳನ್ನು ಕಟ್ಟಿ ಹೆದ್ದಾರಿ ಬಂದ್‌ ಮಾಡಿದ್ದು

ಇಂದು ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಗೆ ಆಗಮಿಸುವ ಮೊದಲು ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಲೋಖೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಗಮಿಸಿ ಮಾತನಾಡಿ ತಮಗೆ ಕಾನೂನು ಹೋರಾಟ ಮಾಡಲು ಮುಕ್ತ ಅವಕಾಶ ಇದ್ದು ತಾವುಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಯ ರೈತರು ಉಳುಮೆ ಮಾಡುವ ಭೂಮಿಯ ಮರು ಸರ್ವೇ ಮಾಡಲು ಬೈಲಹೊಂಗಲ ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕೀರಪೂರ ಹಾಗೂ ತಹಶೀಲ್ದಾರ ರವೀಂದ್ರ ಹಾದಿಮನಿ ಅವರಿಗೆ ಸೂಚಿಸಿದರು. ನಮ್ಮ ಸರ್ಕಾರ ರೈತರ ಹಾಗೂ ಬಡವರ ಪರವಾದ ಸರ್ಕಾರ ಕಾರಣ ಯಾವತ್ತು ಯಾರಿಗೂ ಅನ್ಯಾಯವಾಗದಂತೆ ಸಮಸ್ಯಯನ್ನು ಪರಿಹರಿಸಲಾಗುದು ಎಂದು ಭರವಸೆ ನೀಡದರು.  ನಂತರ ಕುಲವಳ್ಳಿ ಗ್ರಾಮದ ರೈತರು ತಮ್ಮ ಹೋರಾಟವನ್ನು ಮೊಟಕುಗೊಳಿಸಿ ತಮ್ಮ ತಮ್ಮ ಗ್ರಾಮಗಳಿಗೆ ಮರಳಿದರು.

ಈ ವೇಳೆ ಬೈಲಹೊಂಗಲ ಉಪ ವಿಭಾಗ ಅಧಿಕಾರಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ ರವೀಂದ್ರ ಹಾದಿಮನಿ, ಸಿಪಿಐ ಮಹಾಂತೇಶ ಹೊಸಪೇಠೆ, ಪಿಎಸ್‌ಐ ಪ್ರವೀಣ ಗಂಗೋಳ,ಶಂಕರ ಹೊಳಿ, ರಾವಸಾಹೇಬ ಪಾಟೀಲ, ಪಿ. ಕೆ. ನಿರಲಕಟ್ಟಿ, ಬಿಷ್ಟಪ್ಪ ಶಿಂದೇ, ಅನೀಲ ಎಮ್ಮಿ ಸೇರಿದಂತೆ ಕುಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿ ರೈತರು ಇದ್ದರು.

Share This Article
";