ಮುಸ್ಲಿಮರನ್ನು ಕಂಡಕ್ಷಣ ಉಗ್ರಗಾಮಿಗಳು ಪಾಕಿಸ್ತಾನದವರು, ಅನ್ನುವುದು ಸರಿಯಲ್ಲ: ಮಾಜಿ‌ ಸಚಿವ ಕೆ ಎಸ್ ಈಶ್ವರಪ್ಪ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಶಿವಮೊಗ್ಗ: ಮುಸ್ಲಿಮರನ್ನು ಕಂಡ ಕೂಡಲೇ ಅವರನ್ನು ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ. ಆ ಭಾವನೆಯನ್ನು ದೂರ ತಳ್ಳಿ. ಅವರು ಸಹ ಭಾರತೀಯರು ಅವರನ್ನು ನಮ್ಮ ಕಡೆಗೆ ಸೆಳೆಯುವಂತಹ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ದೇಶದ ಎಲ್ಲಾ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ. ಹಿಂದೂ, ಮುಸಲ್ಮಾನ ಸೇರಿದಂತೆ ಇನ್ನೂ ಅನೇಕ ಧರ್ಮದವರನ್ನ ಕಾಂಗ್ರೆಸ್ ಬೇರೆ ಬೇರೆ ಮಾಡುತ್ತಿದೆ. ಮತ್ತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಾರೆ. ಕಾಂಗ್ರೆಸ್​ ನಾಯಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. 

ನಿರ್ದೋಷಿಯಾಗಿ ಹೊರಬರುತ್ತೇನೆ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದ ಕುರಿತು ತ‌ನಿಖೆ ನಡೆಯುತ್ತಿದ್ದು, ತನಿಖಾಧಿಕಾರಿಗಳು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದಾರೆ. ಆ ಪ್ರಕರಣದಲ್ಲಿ ಒಂದೇ ಒಂದು ಪರ್ಸೆಂಟ್ ನನ್ನ ತಪ್ಪಿದ್ದರೆ ನನಗ ಶಿಕ್ಷೆಯಾಗಲಿ. ಸಂತೋಷ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದಲ್ಲಿ‌ ನಾನು ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Share This Article
";