ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮತ್ತು ಸರಸಿದ್ದಪ್ಪ ಕಂಬಳಿಯವರ ಮುಖಾಮುಖಿ

ಉಮೇಶ ಗೌರಿ (ಯರಡಾಲ)

ನಾಳೆ ಸರ ಸಿದ್ದಪ್ಪ ಕಂಬಳಿಯವರ ಜನ್ಮದಿನ.ಅವರ ಸ್ಮರಣೆಯಲ್ಲಿ ಅವರ ಜೀವನದ ಕೇಲವು ಘಟನಾವಳಿ ಮೇಲುಕು.

1924 ಬೆಳಗಾವಿ ಕಾಂಗ್ರೆಸ್ ಅಧೀವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಬೆಳಗಾವಿಗೆ ಬರುವಾಗ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಇಳಿದು ಧಾರವಾಡದ ಅಂದಿನ ಕಾಂಗ್ರೆಸ್ ಕಾರ್ಯದರ್ಶಿ ಕೋಲಗಂಡೆ ಅವರನ್ನು ಕರೆದು ಮಹಾತ್ಮ ಗಾಂಧೀಜಿ ಅವರು ಹುಬ್ಬಳ್ಳಿಯ ಗಣ್ಯ ವ್ಯಕ್ತಿಯನ್ನು ನೋಡಬೇಕಾಗಿದೆ ಭೇಟಿ ಮಾಡಲು ವ್ಯವಸ್ಥೆ ಮಾಡಿ ಎಂದರು. ಆ ಗಣ್ಯ ವ್ಯಕ್ತಿಯೇ ಬೇರೆ ಯಾರು ಅಲ್ಲ ಅವರೆ ಸಾಮಾಜಿಕ ನ್ಯಾಯದ ಮೊದಲ ಗುಂಡು ಸಿದ್ದಪ್ಪ ಕಂಬಳಿ.

ಸಿದ್ದಪ್ಪ ಕಂಬಳಿ ಅವರು ಆಗತಾನೆ ಅಂದರೆ 1924 ರಲ್ಲಿ ಮುಂಬೈ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು ಇದಕ್ಕೂ ಮುಂಚೆ ಹುಬ್ಬಳ್ಳಿ ನಗರಸಭೆಯ ಅಧ್ಯಕ್ಷರಾಗಿ,ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾಗಿ ಭಾರೀ ಹೆಸರು ಮಾಡಿದ್ದರು.

ಕೋಲಗಂಡೆ ಅವರು ಬಂದು ಗಾಂಧೀಜಿಯವರು ತಮ್ಮನ್ನು ಕಾಣಲು ಕಾತುರರಾಗಿರುವ ವಿಷಯವನ್ನು ಕಂಬಳಿ ಸಿದ್ದಪ್ಪ ಅವರಿಗೆ ತಿಳಿಸಿದರು. ಪರಸ್ಪರ ಸಿದ್ದಪ್ಪ ಕಂಬಳಿ ಮತ್ತು ಗಾಂಧೀಜಿಯವರು ಮುಖಾಮುಖಿಯಾದಾಗ ಗಾಂಧೀಜಿಯವರು ನಿಮ್ಮನ್ನು ಕಂಡದ್ದು ತುಂಬಾ ಸಂತೋಷವಾಯಿತು ಎಂದರು .ಇಮ್ಮಡಿ ಸಂತೋಷ ನನ್ನದಾಯಿತು ಎಂದು ಕಂಬಳಿಯವರು ಮಾರುತ್ತರ ನೀಡಿದರು.

ಗಾಂಧೀಜಿಯವರು ನೀವು ಇಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದ್ದೇನೆ .ಕಂಬಳಿಯವರು ಗಾಂದೀಜೀಯವರ ಕುರಿತು ನೀವು ದೇಶದಲ್ಲಿ ಬಹುದೊಡ್ಡ ಕೆಲಸ ಮಾಡುತ್ತಿದ್ದೀರಿ ಎಂದು ಗಾಂದೀಜೀಯವರಿಗೆ ಉತ್ತರ ನೀಡಿದರು.

ಆಗ ಗಾಂಧೀಜಿಯವರು ನಾನು ಕೈಗೊಂಡಿರುವ ರಾಷ್ಟ್ರಕಾರ್ಯದಲ್ಲಿ ನೀವು ನನ್ನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕೆಂದು ಕಂಬಳಿ ಸಿದ್ದಪ್ಪನವರಲ್ಲಿ ಕೇಳಿದರು.

ಬ್ರಿಟಿಷರ ವಿರುದ್ಧ ಆಂದೋಲನ ಹೂಡಿ ಅಸಹಕಾರದ ಮೂಲಕ ದೇಶಕ್ಕೆ ಸವಲತ್ತು ಗಿಟ್ಟಿಸಬೇಕೆಂದು ಗಾಂದೀಜೀಯವರು ಬಯಸಿದ್ದರೆ, ಬ್ರೀಟಿಷರೊಂದಿಗೆ ಸಹಕರಿಸಿ ಅಕ್ಷರ ವಂಚಿತ ವರ್ಗಗಳ ಜನರಿಗೋಸ್ಕರ ಸವಲತ್ತು ಪಡೆಯಬೇಕೆಂಬುದು ಸಿದ್ದಪ್ಪ ಕಂಬಳಿಯವರ ಹೆಬ್ಬಯಕೆಯಾಗಿತ್ತು.

ಶಿಕ್ಷಣವಂಚಿತ ವರ್ಗಗಳನ್ನು ಮೇಲೆತ್ತಬೇಕು ಎನ್ನುವ ಮಹದಾಸೆ ನನ್ನದು ,ಅಜ್ಞಾನ ಬಡತನ ಅವರನ್ನು ತುಳಿದು ತಿಂದು ಹಾಕಿವೆ ,ಜೀವನದ ವಸ್ತುಗಳಿಂದ ವಂಚಿತರಾಗಿದ್ದಾರೆ ಜೀತದಾಳು ಗಳಿಗಿಂತಲೂ ಅವರ ಸ್ಥಿತಿ ದಯನೀಯವಾಗಿದೆ. ಮನುಷ್ಯ ಮನುಷ್ಯನನ್ನೇ ಶೋಷಣೆ ಮಾಡುವ ರೀತಿ ಬಹಳಷ್ಟು ಕ್ರೂರವಾಗಿದೆ .ಇದರಿಂದ ನಾನು ತಳಮಳಗೊಂಡಿದ್ದೇನೆ ಅವರಿಗೆ ಸ್ಥಾನಮಾನ ಮರ್ಯಾದೆಗಳನ್ನು ತಂದುಕೊಡಬೇಕು ಎನ್ನುವುದೇ ನನ್ನ ಉದ್ದೇಶವಾಗಿದೆ ಎಂದು ಕಂಬಳಿಯವರು ಗಾಂಧೀಜಿಯವರಿಗೆ ಉತ್ತರಿಸಿದರು.

ಗಾಂಧೀಜೀಯವರು ಅಸಹಕಾರ ಚಳುವಳಿಯ ಮೂಲಕ ಶಾಲೆ-ಕಾಲೇಜುಗಳನ್ನು ತೆರೆಯಬೇಕೆಂದು ಕರೆ ನೀಡಿದ್ದರು.ಅಕ್ಷರ ವಂಚಿತ ವರ್ಗದವರಿಗೆ ಅನ್ವಯಿಸುವುದಿಲ್ಲ ಅವರು ಶಾಲೆ-ಕಾಲೇಜುಗಳನ್ನು ಹೆಚ್ಚು ಸಂಖ್ಯೆಯಲ್ಲಿ ತುಂಬ ಬೇಕೆಂಬುದು ನನ್ನ ಅಭಿಪ್ರಾಯ ಎಂದು ಗಾಂಧಿಜೀಯವರು ಕಂಬಳಿಯವರಿಗೆ ಉತ್ತರಿಸಿದರು.

ಮುಂದುವರೆದು ಕಂಬಳಿಯವರು ಗಾಂಧೀಜಿಯವರಿಗೆ ನೀವು ರಾಷ್ಟ್ರ ಮಟ್ಟದಲ್ಲಿ ದೇಶದ ಕಾರ್ಯ ಮಾಡುತ್ತಿದ್ದೀರಿ ನಾನು ಸಣ್ಣ ರೀತಿಯಲ್ಲಿ ಅಕ್ಷರ ವಂಚಿತ ವರ್ಗಗಳ ಕಾರ್ಯ ಮಾಡುತ್ತಿದ್ದೇನೆ. ನೀವು ಮಾಡುತ್ತಿರುವುದು ರಾಷ್ಟ್ರೀಯ ಕಾರ್ಯ ಎನ್ನುವ ಬಗೆಗೆ ಸಂದೇಹವಿಲ್ಲ .

ಆದರೆ ದೇಶದ ಜನಸಂಖ್ಯೆಯಲ್ಲಿ ಮುಕ್ಕಾಲುಪಾಲು ಹೆಚ್ಚಿರುವ ಅಕ್ಷರವಂಚಿತ ವರ್ಗಗಳ ಕಾರ್ಯ ಅರಾಷ್ಟ್ರೀಯ ಕಾರ್ಯವೆಂದು ನೀವು ಹೇಳುತ್ತೀರಾ? ಎಂಬ ಪ್ರಶ್ನೆಯನ್ನು ಗಾಂಧೀಜಿಯವರಿಗೆ ಎಸೆದರು.

ಸಿದ್ದಪ್ಪ ಕಂಬಳಿ ಅವರ ಪ್ರಶ್ನೆಗೆ ಉತ್ತರಿಸದೇ ಗಾಂದೀಜೀಯವರು ವಿಚಲಿತರಾದರು.
ಗುಜರಾತದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಸುಲಭವಾಗಿ ಗೆದ್ದುಕೊಂಡ ಗಾಂಧೀಜಿ ಯವರು ಪಟೇಲ್ರನ್ನು ಬುಟ್ಟಿಗೆ ಹಾಕಿಕೊಂಡಿದ್ದರು ,ಆದರೆ ಕರ್ನಾಟಕದಲ್ಲಿ ಕಂಬಳಿಯವರು ಗಾಂದೀಜೀಯವರಿಗೆ ನುರಿಸಲಾಗದ ಉಕ್ಕಿನ ಕಡಲೆಯಂತಾದರು.

ಆಗ ಗಾಂಧೀಜಿಯವರು ಸಿದ್ದಪ್ಪ ಕಂಬಳಿ ಅವರನ್ನು ಕುರಿತು ನೀವು ನಿಮ್ಮ ರೀತಿಯಿಂದ ಕೆಲಸ ಮಾಡಿರಿ ನಾನು ನನ್ನ ರೀತಿಯಿಂದ ಕೆಲಸ ಮಾಡುತ್ತೇನೆ.

ಸಮಾಂತರ ರೇಖೆಗಳು ಒಂದನ್ನೊಂದು ಪರಸ್ಪರ ಸಂದಿಸದೇ ಇರಬಹುದು. ಆದರೆ ದೇಶದ ಕೆಲಸ ಮಾಡುವವರು ಎಂದಾದರೂ ಒಂದು ದಿನ ಪರಸ್ಪರರನ್ನು ಸಂಧಿಸಲೇಬೇಕು.

ಗಾಂಧೀಜಿಯವರು ಪರಸ್ಪರರ ಭೇಟಿ ಒಂದು ಒಳ್ಳೆಯ ಚರ್ಚೆಗೆ ವೇದಿಕೆಯನ್ನು ಒದಗಿಸಿತು.
ಗಾಂಧೀಜಿ ಮತ್ತು ಕಂಬಳಿಯವರ ಸಂದರ್ಶನದಲ್ಲಿ ಯಾರು ಯಾರನ್ನು ಗೆದ್ದರು? ಅವರಿಬ್ಬರ ಭೇಟಿಯ ಫಲಶ್ರುತಿ ಏನಾಯಿತು ?ಎಂಬುವುದು ಹೊರಜಗತ್ತಿಗೆ ಗೊತ್ತಾಗಲಿಲ್ಲ.

ಸಿದ್ದಪ್ಪ ಕಂಬಳಿ ಎಂಬ ಹೆಸರಿಗೆ ಕರ್ನಾಟಕ ಮತ್ತು ಕರ್ನಾಟಕದ ಆಚೆಗೆ ಬಹುದೊಡ್ಡ ಪ್ರಸಿದ್ಧಿ ಲಭಿಸಿತು. ಸಿದ್ದಪ್ಪ ಕಂಬಳಿ ಎಂದರೆ ಯಾರು ?ಎಂಬ ಹೆಸರನ್ನು ಕೇಳದವರಿಗೆ ಸಿದ್ದಪ್ಪ ಕಂಬಳಿ ಎಂದರೆ ಯಾರು ಎಂದು ತಿಳಿಯುವ ಕುತೂಹಲ ಕೌತುಕ ಹೆಚ್ಚಾಯಿತು.

ಗಾಂಧೀಜಿ ಮತ್ತು ಸಿದ್ದಪ್ಪ ಕಂಬಳಿ ಅವರ ಭೇಟಿಯ ಫಲಶ್ರುತಿ.

ಅಂದು ಗಾಂಧೀಜಿಯವರು ಹೇಳಿದಂತೆ ಕಂಬಳಿಯವರು ಮತ್ತು ಮಹಾತ್ಮಾ ಗಾಂಧೀಜಿಯವರು 1932ರ‌ ಪೂಣಾ ಒಪ್ಪಂದ ಅಥವಾ ಯರವಾಡ ಒಪ್ಪಂದದಲ್ಲಿ ಅಂಬೇಡ್ಕರ್ ಅವರ ಪರವಾಗಿ ಗಾಂದೀಜೀಯವರನ್ನು ಏದುರಿಸಿ ಅಂಬೇಡ್ಕರ್ ಅವರ ಬೆನ್ನಿಗೆ ನಿಂತರು.

ಇದನ್ನು ಹೇಳಲು ಕಾರಣ ಸೆಪ್ಟೆಂಬರ್ ಹನ್ನೊಂದು ಸರ ಸಿದ್ದಪ್ಪ ಕಂಬಳಿಯವರ ಜನ್ಮದಿನ.ಅವರ ಸ್ಮರಣೆಯಲ್ಲಿ ಅವರ ಜೀವನದ ಕೇಲವು ಘಟನಾವಳಿ ಮೇಲುಕು ಹಾಕುವುದಷ್ಟೇ.

ಲೇಖಕರು:ಮಹೇಶ.ನೀಲಕಂಠ. ಚನ್ನಂಗಿ.
ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರ.
M-9740313820

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";