ಕಿತ್ತೂರು ಮತಕ್ಷೇತ್ರಕ್ಕೆ ಬಿಜೆಪಿಯಿಂದ ಡಾ.ಬಸವರಾಜ ಪರವಣ್ಣವರ ಹೆಸರು ಪ್ರಸ್ತಾಪ

ಡಾ.ಬಸವರಾಜ ಪರವಣ್ಣವರ.
ಉಮೇಶ ಗೌರಿ (ಯರಡಾಲ)

ಬೆಂಗಳೂರು /ಬೆಳಗಾವಿ :ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಇದೀಗ ಡಾ.ಬಸವರಾಜ ಪರವಣ್ಣವರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ.

ಕೆಎಂಫ್‌ ನಿರ್ದೇಶಕರು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ.ಬಸವರಾಜ ಪರವಣ್ಣವರ ಸಹಕಾರ ರಂಗದ ಮೂಲಕ ಈಗಾಗಲೇ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ.ಪಕ್ಷ ಸಂಘಟನೆಯಲ್ಲಿ ಮೂಂಚೂಣಿ ನಾಯಕರಾಗಿರುವ ಡಾ.ಬಸವರಾಜ ಪರವಣ್ಣವರ ಚನ್ನಮ್ಮನ ಕಿತ್ತೂರು ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆಗೆ ಭಾರೀ ಸಿದ್ಧತೆ ನಡೆಸಿದ್ದಾರೆ.ಕಿತ್ತೂರು ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಕಣದಲ್ಲಿದ್ದಾರೆ. ಆಡಳಿತ ವಿರೋಧಿ ಅಲೆ ಎದ್ದಿರುವುದರಿಂದ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲು ಪ್ರಯತ್ನ ನಡೆಸಿರುವ ಡಾ.ಬಸವರಾಜ ಪರವಣ್ಣವರ ಹೆಸರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಲ್ಲಿರುವುದು ವಿಶೇಷ.

Share This Article
";